2025ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ನೆಲದಲ್ಲಿಯೇ ಭಾರೀ ಅವಮಾನಕ್ಕೆ ಒಳಗಾಗಿದೆ. ಸಾಲು ಸಾಲು ಸೋಲಗಳಿಗೆ ತುತ್ತಾಗಿರುವ ಸಿಎಸ್‌ಕೆ ತಂಡ ಎದುರಾಳಿ ಕೆಕೆಆರ್ ತಂಡದ ಎದುರು ಮಕಾಡೆ ಮಲಗಿದೆ.
ಹೌದು ನೆನ್ನೆ ನಾಯಕತ್ವ ಬದಲಾದರೂ ಸಿಎಸ್‌ಕೆ ಆಟ ಬದಲಾಗಲಿಲ್ಲ. ಮತ್ತದೇ ಕಳಪೆ ಪ್ರದರ್ಶನ ಮುಂದುವರೆಸಿದೆ. ಕೊಲ್ಕತ್ತಾ ನೈಟ್ ರೈಡರ್ಸ್ನ ರಣವ್ಯೂಹದಲ್ಲಿ ಸಿಲುಕಿದ ಸಿಎಸ್‌ಕೆ ರನ್ ಗಳಿಸಲು ವಿಲ ವಿಲ ಒದ್ದಾಡಿತು. ತವರು ನೆಲದಲ್ಲಿ ಚೆನ್ನೈ ಪರದಾಟ ನಡೆಸಿದರೆ, ಕೊಲ್ಕತ್ತಾ ನೈಟ್ ರೈಡರ್ಸ್ ಸಂಭ್ರಮಿಸಿತು. ಸಂಪೂರ್ಣ ಯೆಲ್ಲೋಮಯವಾಗಿದ್ದ ಚೆಪಾಕ್ ಮೈದಾನ ಸಂಪೂರ್ಣ ಸೈಲೆಂಟ್ ಆಗಿತ್ತು.

ಚೆಪಾಕ್ ಅಂಗಳದಲ್ಲಿ ಮೊದಲು ಬ್ಯಾಟಿಂಗ್ಗೆ ಬಂದ ಚೆನ್ನೈ ಸೂಪರ್ ಕಿಂಗ್ಸ್‌ಗೆ ಕೆಕೆಆರ್ ಬೌಲರ್ಸ್ ಶಾಕ್ ಮೇಲೆ ಶಾಕ್ ನೀಡಿದರು. ಕೊಲ್ಕತ್ತಾ ನೈಟ್ ರೈಡರ್ಸ್ ಬೌಲರ್ಗಳ ಮ್ಯಾಜಿಕಲ್ ಬೌಲಿಂಗ್ಗೆ ಯೆಲ್ಲೋ ಆರ್ಮಿ ಸ್ಟನ್ ಆಯ್ತು. ರನ್ಗಳಿಸಲು ಪರದಾಡಿದ ಸಿಎಸ್‌ಕೆ ಬ್ಯಾಟರ್ಸ್ ಪೆವಿಲಿಯನ್ ಪರೇಡ್ ನಡೆಸಿದ್ರು.
ರಚಿನ್ ರವಿಂದ್ರ, ಡಿವೋನ್ ಕಾನ್ವೆ ಗುಡ್ ಸ್ಟಾರ್ಟ್ ನೀಡಲೇ ಇಲ್ಲ. ಕಾನ್ವೆ 12 ರನ್ಗಳಿಸಿ ನಿರ್ಗಮಿಸಿದ್ರೆ, ರಚಿನ್ ರವೀಂದ್ರ ಆಟ ಜಸ್ಟ್ 3 ರನ್ಗೆ ಅಂತ್ಯವಾಯ್ತು. ಸಿಕ್ಕ ಜೀವದಾನದ ಹೊರತಾಗಿಯೂ ವಿಜಯ್ ಶಂಕರ್ ಬಿಗ್ ಇನ್ನಿಂಗ್ಸ್ ಕಟ್ಟುವಲ್ಲಿ ಫೇಲ್ ಆದ್ರು, ವರುಣ್ ಚಕ್ರವರ್ತಿ ವಿಜಯ್ ಶಂಕರ್ ವಿಕೆಟ್ ತೆಗೆಯುವ ಮೂಲಕ ಸಿಂಹ ಸ್ವಪ್ನವಾಗಿ ಕಾಡಿದ್ರು.
104 ರನ್ಗಳ ಸಾದಾರಣ ಟಾರ್ಗೆಟ್ ಬೆನ್ನತ್ತಿದ ಕೆಕೆಆರ್ ಅಬ್ಬರದ ಆರಂಭ ಪಡೆದುಕೊಂಡಿತು. ಸುನಿಲ್ ನರೇನ್-ಕ್ವಿಂಟನ್ ಡಿಕಾಕ್ ಅಬ್ಬರಿಸಿದ್ರು. 3 ಸಿಕ್ಸರ್ ಸಿಡಿಸಿ ಡಿ ಕಾಕ್ 16 ಎಸೆತಗಳಲ್ಲಿ 23 ರನ್ಗಳಿಸಿ ಮರೆಯಾದ್ರೆ, 5 ಸಿಕ್ಸರ್, 2 ಬೌಂಡರಿ ಬಾರಿಸುವ ಮೂಲಕ ಸಿಎಸ್‌ಕೆ ಬೌಲರ್ಗಳನ್ನ ಬೆಂಡೆತ್ತಿದ ಸುನಿಲ್ ನರೇನ್, 18 ಎಸೆತಗಳಲ್ಲಿ 44 ರನ್ ಸಿಡಿಸಿದರು. ಕೇವಲ ಬ್ಯಾಟಿಂಗ್ ಮಾತ್ರವಲ್ಲದೇ, ಬೌಲಿಂಗ್ನಲ್ಲೂ ಆರ್ಭಟಿಸಿದ ಸುನಿಲ್ ನರೇನ್ ತಮ್ಮ ಕೋಟಾದ ನಾಲ್ಕು ಓವರ್ಗಳಲ್ಲಿ ಕೇವಲ 13 ರನ್ ನೀಡಿ, ಮೂರು ವಿಕೆಟ್ ಪಡೆದರು.
ನರೇನ್ ಔಟಾದ ಬಳಿಕ 3ನೇ ವಿಕೆಟ್ಗೆ ಜೊತೆಯಾದ ಅಜಿಂಕ್ಯಾ ರಹಾನೆ-ರಿಂಕು ಸಿಂಗ್ ತಂಡವನ್ನ ಗೆಲುವಿನ ದಡ ಸೇರಿಸಿದ್ರು. ರಹಾನೆ ಅಜೇಯ 20 ರನ್ಗಳಿಸಿದರೆ, ರಿಂಕು ಸಿಂಗ್ ಅಜೇಯ 15 ರನ್ಗಳಿಸಿದ್ರು. 10.1 ಓವರ್ಗಳಲ್ಲಿ ಗೆಲುವಿನ ದಡ ಸೇರಿದ ಕೊಲ್ಕತ್ತಾ 8 ವಿಕೆಟ್ಗಳ ಭರ್ಜರಿ ಜಯಭೇರಿ ಬಾರಿಸಿತು. ಭಾರೀ ಅಂತರದ ಜಯದೊಂದಿಗೆ ರನ್ರೇಟ್ ಹೆಚ್ಚಿಸಿಕೊಂಡ ಕೆಕೆಆರ್ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತು.
ರಾಹುಲ್ ತ್ರಿಪಾಠಿ ಸುನಿಲ್ ನರೇನ್ ಬೌಲಿಂಗ್ನಲ್ಲಿ ಕ್ಲೀನ್ಬೋಲ್ಡ್ ಆದ್ರೆ, ರವಿಚಂದ್ರನ್ ಅಶ್ವಿನ್ 1 ರನ್ಗಳಿಸುವಷ್ಟರಲ್ಲಿ ಸುಸ್ತಾದ್ರು. ಆಲ್ರೌಂಡರ್ ರವಿಂದ್ರ ಜಡೇಜಾ, ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ದೀಪಕ್ ಹೂಡ ಸೊನ್ನೆ ಸುತ್ತಿದ್ರು. ಸ್ಪಿನ್ ಟ್ರ್ಯಾಪ್ಗೆ ಬಿದ್ದ ಕ್ಯಾಪ್ಟನ್ ಧೋನಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದ್ರು.
ನೂರ್ ಅಹ್ಮದ್ ಆಟಕ್ಕೆ ವೈಭವ್ ಅರೋರ ಬ್ರೇಕ್ ಹಾಕಿದ್ರು. ಶಿವಂ ದುಬೆ ಕೊನೆಯ ಓವರ್ವರೆಗೂ ಬ್ಯಾಟಿಂಗ್ ಮಾಡಿದ್ರು. ಇಂಪ್ಯಾಕ್ಟ್ಫುಲ್ ಇನ್ನಿಂಗ್ಸ್ ಆಡಲಿಲ್ಲ. ರನ್ಗಳಿಕೆಗೆ ತಿಣುಕಾಟ ನಡೆಸಿದ ಶಿವಂ ದುಬೆ 29 ಎಸೆತ ಎದುರಿಸಿ ಕೇವಲ 31 ರನ್ಗಳಿಸಿಸಲು ಸುಸ್ತಾದರು. 20 ಓವರ್ ಅಂತ್ಯಕ್ಕೆ ಸಿಎಸ್‌ಕೆ 9 ವಿಕೆಟ್ ಕಳೆದುಕೊಂಡು ಕೇವಲ 103 ರನ್ಗಳಿಸಿತು.





