ಜಪಾನ್‌ನ ಐಚಿ-ನಗೋಯಾದಲ್ಲಿ ಸೆಪ್ಟೆಂಬರ್ 19ರಿಂದ ಅಕ್ಟೋಬರ್ 4ರವರೆಗೆ ನಡೆಯಲಿರುವ 20ನೇ ಏಷ್ಯನ್ ಗೇಮ್ಸ್‌ಗೆ ಹಾಕಿ ಇಂಡಿಯಾ 20 ಸದಸ್ಯರ ಭಾರತೀಯ ಪುರುಷರ ಹಾಕಿ ತಂಡವನ್ನು ಅಧಿಕೃತವಾಗಿ ಪ್ರಕಟಿಸಿದೆ. ಹಾಲಿ ಏಷ್ಯನ್ ಚಾಂಪಿಯನ್ ಆಗಿರುವ ಭಾರತ ತಂಡ ಈ ಬಾರಿಯೂ ಚಿನ್ನದ ಪದಕ ಉಳಿಸಿಕೊಳ್ಳುವ ವಿಶ್ವಾಸದೊಂದಿಗೆ ಕಣಕ್ಕಿಳಿಯುತ್ತಿದ್ದು, ತಂಡದ ನಾಯಕತ್ವವನ್ನು ಅನುಭವಿ ಡ್ರ್ಯಾಗ್-ಫ್ಲಿಕ್ ತಜ್ಞ ಹರ್ಮನ್‌ಪ್ರೀತ್ ಸಿಂಗ್ ವಹಿಸಲಿದ್ದಾರೆ.
ತಂಡದಲ್ಲಿ ಅನುಭವಿ ಮಿಡ್‌ಫೀಲ್ಡರ್ ಮನ್‌ಪ್ರೀತ್ ಸಿಂಗ್ ಸೇರಿದಂತೆ ಹಲವು ಹಿರಿಯ ಆಟಗಾರರು ಸ್ಥಾನ ಪಡೆದಿದ್ದು, ಯುವ ಪ್ರತಿಭೆಗಳಿಗೂ ಅವಕಾಶ ನೀಡಲಾಗಿದೆ. ಅನುಭವ ಮತ್ತು ಯುವಶಕ್ತಿಯ ಸಮತೋಲನ ಹೊಂದಿರುವ ಈ ತಂಡ ಉತ್ತಮ ಪ್ರದರ್ಶನ ನೀಡಲಿದೆ ಎಂಬ ವಿಶ್ವಾಸವನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ.
ಈ ಬಾರಿಯ ಏಷ್ಯನ್ ಗೇಮ್ಸ್ ಭಾರತಕ್ಕೆ ಮತ್ತಷ್ಟು ಮಹತ್ವದ್ದಾಗಿದೆ. ಏಕೆಂದರೆ, ಈ ಟೂರ್ನಿಯಲ್ಲಿ ಚಿನ್ನದ ಪದಕ ಗೆಲ್ಲುವ ತಂಡಕ್ಕೆ 2028ರಲ್ಲಿ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ನೇರ ಅರ್ಹತೆ ದೊರೆಯಲಿದೆ. ಹೀಗಾಗಿ, ಭಾರತ ತಂಡ ಪ್ರಶಸ್ತಿ ಉಳಿಸಿಕೊಳ್ಳುವುದರ ಜೊತೆಗೆ ಒಲಿಂಪಿಕ್ಸ್ ಟಿಕೆಟ್‌ಗೂ ಕಣ್ಣಿಟ್ಟಿದೆ.
12 ರಾಷ್ಟ್ರಗಳ ತಂಡ
Presenting the Indian Men’s Hockey Team for 20th Asian Games Aichi-Nagoya 2026. 🇮🇳❤️
Together, let’s defend our gold medal and book a spot in the LA 2028 Olympics. 💙🏑
🗓️: Sept 19 to Oct 4#HockeyIndia #IndiaKaGame #AsianGames2026 #AsianGames pic.twitter.com/hlwxVNgkNw
— Hockey India (@TheHockeyIndia) July 29, 2026
ಪುರುಷರ ಹಾಕಿ ವಿಭಾಗದಲ್ಲಿ ಒಟ್ಟು 12 ರಾಷ್ಟ್ರಗಳ ತಂಡಗಳು ಸ್ಪರ್ಧಿಸುತ್ತಿದ್ದು, ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ ತಂಡ ಪೂಲ್ ‘ಎ’ನಲ್ಲಿ ಆತಿಥೇಯ ಜಪಾನ್, ದಕ್ಷಿಣ ಕೊರಿಯಾ, ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ಇಂಡೋನೇಷ್ಯಾ ತಂಡಗಳೊಂದಿಗೆ ಸ್ಥಾನ ಪಡೆದಿದೆ. ಪೂಲ್ ‘ಬಿ’ಯಲ್ಲಿ ಚೀನಾ, ಪಾಕಿಸ್ತಾನ, ಮಲೇಷ್ಯಾ, ಓಮನ್, ಕಝಾಕಿಸ್ತಾನ್ ಹಾಗೂ ಚೈನೀಸ್ ತೈಪೆ ತಂಡಗಳು ಸೆಣಸಲಿವೆ.
ಭಾರತ ತನ್ನ ಮೊದಲ ಪಂದ್ಯ ಯಾರ ವಿರುದ್ದ?
ಭಾರತ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 20ರಂದು ಇಂಡೋನೇಷ್ಯಾ ವಿರುದ್ಧ ಆಡಲಿದೆ. ಬಳಿಕ ಸೆಪ್ಟೆಂಬರ್ 22ರಂದು ಶ್ರೀಲಂಕಾ, ಸೆಪ್ಟೆಂಬರ್ 24ರಂದು ದಕ್ಷಿಣ ಕೊರಿಯಾ, ಸೆಪ್ಟೆಂಬರ್ 26ರಂದು ಆತಿಥೇಯ ಜಪಾನ್ ಹಾಗೂ ಸೆಪ್ಟೆಂಬರ್ 28ರಂದು ಬಾಂಗ್ಲಾದೇಶ ವಿರುದ್ಧ ಲೀಗ್ ಹಂತದ ಪಂದ್ಯಗಳನ್ನು ಆಡಲಿದೆ. ಲೀಗ್ ಹಂತದಲ್ಲೇ ಉತ್ತಮ ಪ್ರದರ್ಶನ ನೀಡುವುದು ತಂಡದ ಮೊದಲ ಗುರಿಯಾಗಿದೆ.
ತಂಡದ ಬಗ್ಗೆ ಮಾತನಾಡಿರುವ ನಾಯಕ ಹರ್ಮನ್‌ಪ್ರೀತ್ ಸಿಂಗ್, ತಂಡದಲ್ಲಿರುವ ಪ್ರತಿಯೊಬ್ಬ ಆಟಗಾರನ ಮೇಲೂ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಯುವ ಆಟಗಾರರು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುವ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳಲಿದ್ದಾರೆ. ಯಾವುದೇ ಒತ್ತಡಕ್ಕೆ ಒಳಗಾಗದೆ, ತಂಡದ ಜವಾಬ್ದಾರಿಯನ್ನು ಅರ್ಥಮಾಡಿಕೊಂಡು ಆತ್ಮವಿಶ್ವಾಸದಿಂದ ಆಡಿದರೆ ಯಶಸ್ಸು ಖಚಿತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ಹಾಕಿ ತಂಡ ಇತ್ತೀಚಿನ ವರ್ಷಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದೆ. ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಗೂ ಒಲಿಂಪಿಕ್ಸ್‌ನಲ್ಲಿ ಸಾಧನೆ ಮಾಡಿದ ತಂಡ ಇದೀಗ ಮತ್ತೊಮ್ಮೆ ಏಷ್ಯಾದಲ್ಲಿ ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಲು ಸಜ್ಜಾಗಿದೆ. ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಈ ತಂಡದಿಂದ ದೇಶದ ಕ್ರೀಡಾಭಿಮಾನಿಗಳು ಮತ್ತೊಂದು ಐತಿಹಾಸಿಕ ಸಾಧನೆಯನ್ನು ನಿರೀಕ್ಷಿಸುತ್ತಿದ್ದಾರೆ.
ಭಾರತ ಪುರುಷರ ಹಾಕಿ ತಂಡ
ಗೋಲ್‌ಕೀಪರ್‌ಗಳು:
- ಮೋಹಿತ್ ಎಚ್.ಎಸ್.
- ಸೂರಜ್ ಕರ್ಕೇರಾ
ಡಿಫೆಂಡರ್ಸ್:
- ಜರ್ಮನ್ಪ್ರೀತ್ ಸಿಂಗ್
- ಹರ್ಮನ್‌ಪ್ರೀತ್ ಸಿಂಗ್ (ನಾಯಕ)
- ಅಮಿತ್ ರೋಹಿದಾಸ್
- ಜುಗ್ರಾಜ್ ಸಿಂಗ್
- ಸಂಜಯ್
- ಸುಮಿತ್
- ಯಶ್ದೀಪ್ ಸಿವಾಚ್
ಮಿಡ್‌ಫೀಲ್ಡರ್‌ಗಳು:
- ರಾಜಿಂದರ್ ಸಿಂಗ್
- ರಾಜ್ ಕುಮಾರ್ ಪಾಲ್
- ಹಾರ್ದಿಕ್ ಸಿಂಗ್
- ಮನ್‌ಪ್ರೀತ್ ಸಿಂಗ್
- ನೀಲಕಂಠ ಶರ್ಮಾ
- ವಿವೇಕ್ ಸಾಗರ್ ಪ್ರಸಾದ್
ಫಾರ್ವರ್ಡ್‌ಗಳು:
- ದಿಲ್ಪ್ರೀತ್ ಸಿಂಗ್
- ಶಿಲಾನಂದ್ ಲಾಕ್ರಾ
- ಸುಖಜೀತ್ ಸಿಂಗ್
- ಮನ್ದೀಪ್ ಸಿಂಗ್
- ಅಭಿಷೇಕ್
