ಮೇಷ ರಾಶಿ: ಖರೀದಿ ವಿಚಾರದಲ್ಲಿ ಗೊಂದಲ ಉಂಟಾಗಬಹುದು. ಆರ್ಥಿಕ ಒತ್ತಡದಿಂದ ಹೊರಬಂದು ನೆಮ್ಮದಿ ಕಾಣುವಿರಿ. ಕೆಲಸದಲ್ಲಿ ಉತ್ಸಾಹ ಹೆಚ್ಚಿರುತ್ತದೆ. ಉದ್ಯೋಗದಲ್ಲಿ ಆಲಸ್ಯ ತೋರಿದರೆ ಅಧಿಕಾರಿಗಳಿಂದ ಎಚ್ಚರಿಕೆ ಎದುರಾಗಬಹುದು. ವ್ಯಾಪಾರದಲ್ಲಿನ ನಷ್ಟವನ್ನು ಬೇರೆ ಮಾರ್ಗದ ಮೂಲಕ ಸರಿದೂಗಿಸುವ ಪ್ರಯತ್ನ ನಡೆಯಲಿದೆ.
ವೃಷಭ ರಾಶಿ: ಸಹಭಾಗಿಗಳೊಂದಿಗೆ ಸ್ನೇಹದಿಂದ ನಡೆದುಕೊಳ್ಳುವುದು ಅಗತ್ಯ. ಉದ್ಯೋಗ ಬದಲಾವಣೆ ಅನಿವಾರ್ಯವಾಗಬಹುದು. ಬಿದ್ದು ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸಿ. ಹಿರಿಯರ ಮಾರ್ಗದರ್ಶನ ದೊರೆಯಲಿದೆ. ನಿಮ್ಮ ವೈಯಕ್ತಿಕ ವಿಚಾರಗಳನ್ನು ಗೌಪ್ಯವಾಗಿಡುವುದು ಉತ್ತಮ.
ಮಿಥುನ ರಾಶಿ: ಸಣ್ಣ ವಿಚಾರಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ಸಾಮಾಜಿಕ ಕಾರ್ಯದಲ್ಲಿ ಮೆಚ್ಚುಗೆ ಸಿಗಲಿದೆ. ಕುಲದೇವರ ದರ್ಶನ ಮಾಡುವ ಸಾಧ್ಯತೆ ಇದೆ. ಪ್ರವಾಸದಿಂದ ತೊಂದರೆ ಎದುರಾಗಬಹುದು. ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯುವ ನಿರ್ಧಾರಕ್ಕೆ ಬರಬಹುದು.
ಕರ್ಕಾಟಕ ರಾಶಿ: ಆಹಾರ ಸೇವನೆಯಲ್ಲಿ ಎಚ್ಚರಿಕೆ ಅಗತ್ಯ. ದಾಂಪತ್ಯದಲ್ಲಿ ಹೊಂದಾಣಿಕೆಗಾಗಿ ಹೆಚ್ಚಿನ ಪ್ರಯತ್ನ ಮಾಡಬೇಕಾಗಬಹುದು. ವೃತ್ತಿ ವಿಚಾರದಲ್ಲಿ ಗೊಂದಲ ಮೂಡಬಹುದು. ತಾಯಿಯ ಆಸೆಯನ್ನು ಈಡೇರಿಸುವ ಅವಕಾಶ ಸಿಗಲಿದೆ.
ಸಿಂಹ ರಾಶಿ: ಮಾನಸಿಕವಾಗಿ ಹಗುರಾಗಲು ಆಪ್ತರ ಸಲಹೆ ಸಹಕಾರಿಯಾಗಲಿದೆ. ಸಾಲಗಾರರ ಕಿರಿಕಿರಿ ಹೆಚ್ಚಾಗಬಹುದು. ವಿದೇಶ ಪ್ರಯಾಣಕ್ಕೆ ಆಹ್ವಾನ ಬರಬಹುದು. ಆತುರದ ಪ್ರಯಾಣ ಬೇಡ. ಅಧಿಕಾರಿಗಳೊಂದಿಗೆ ಮಾತನಾಡುವಾಗ ಎಚ್ಚರಿಕೆ ವಹಿಸಿ.
ಕನ್ಯಾ ರಾಶಿ: ದಾಂಪತ್ಯದಲ್ಲಿ ಸಾಮರಸ್ಯಕ್ಕಾಗಿ ಪ್ರಯತ್ನಿಸುವಿರಿ. ಹಳೆಯ ಘಟನೆಗಳು ನೆನಪಾಗಿ ಬೇಸರವಾಗಬಹುದು. ನಿಮ್ಮ ಮಾತು ನೇರವಾಗಿರುವುದರಿಂದ ಕೆಲವರ ಅಸಮಾಧಾನಕ್ಕೆ ಕಾರಣವಾಗಬಹುದು. ಅಹಂಕಾರವನ್ನು ಬದಿಗಿಟ್ಟು ತಪ್ಪುಗಳನ್ನು ಒಪ್ಪಿಕೊಳ್ಳುವುದು ಒಳಿತು.
ತುಲಾ ರಾಶಿ: ವಾಹನ ಚಾಲನೆಯಲ್ಲಿ ಎಚ್ಚರಿಕೆ ಅಗತ್ಯ. ವಿದ್ಯಾಭ್ಯಾಸದಲ್ಲಿ ಸುಧಾರಣೆ ಕಂಡುಬರಲಿದೆ. ಹಿರಿಯರ ಆಶೀರ್ವಾದ ಪಡೆಯುವುದು ಉತ್ತಮ. ಸಂಗಾತಿಯೊಂದಿಗೆ ಹಳೆಯ ವಿಚಾರಗಳ ಬಗ್ಗೆ ಮನಸ್ತಾಪ ಉಂಟಾಗಬಹುದು. ನಿಮ್ಮ ನಿರ್ಧಾರದಲ್ಲಿ ದೃಢವಾಗಿರುವಿರಿ.
ವೃಶ್ಚಿಕ ರಾಶಿ: ಒಂಟಿಯಾಗಿ ಸಮಯ ಕಳೆಯಬೇಕೆಂಬ ಭಾವನೆ ಮೂಡಬಹುದು. ಸಾಮಾಜಿಕ ಕಳಕಳಿಯ ವಿಚಾರಗಳಲ್ಲಿ ಜನರು ನಿಮ್ಮ ಸಹಾಯ ಕೇಳಬಹುದು. ನಿರೀಕ್ಷಿಸದ ಹಣ ಕೈ ಸೇರಬಹುದು. ಅನುಮಾನಗಳನ್ನು ಬಿಟ್ಟು ನೇರವಾಗಿ ನಡೆದುಕೊಳ್ಳುವುದು ಒಳಿತು.
ಧನು ರಾಶಿ: ಸಮಸ್ಯೆಗಳಿಗೆ ಪರಿಹಾರವಿದೆ ಎಂಬ ಅರಿವು ಮೂಡಲಿದೆ. ಸರ್ಕಾರದ ಸೌಲಭ್ಯ ಪಡೆಯಲು ಓಡಾಟ ಮಾಡಬೇಕಾಗಬಹುದು. ಆರ್ಥಿಕ ಸ್ಥಿರತೆಗಾಗಿ ನಿರಂತರ ಶ್ರಮ ಅಗತ್ಯ. ಆರೋಗ್ಯ ಸ್ಥಿರವಾಗಿರಲಿದೆ.
ಮಕರ ರಾಶಿ: ನಿಮ್ಮ ನಿರ್ಧಾರಗಳಿಗೆ ಸಂಪೂರ್ಣ ಬೆಂಬಲ ದೊರೆಯಲಿದೆ. ಮನೆಗೆ ಅಗತ್ಯವಾದ ವಸ್ತುಗಳನ್ನು ಖರೀದಿಸುವಿರಿ. ಆಯ್ಕೆಯ ವಿಚಾರದಲ್ಲಿ ತಾಳ್ಮೆಯಿಂದ ನಿರ್ಧಾರ ಕೈಗೊಳ್ಳಿ. ಕೃಷಿಕರಿಗೆ ಲಾಭದಲ್ಲಿ ಸ್ವಲ್ಪ ಇಳಿಕೆ ಕಂಡುಬರಬಹುದು.
ಕುಂಭ ರಾಶಿ: ಅನಿರೀಕ್ಷಿತ ಬದಲಾವಣೆಗಳನ್ನು ಸ್ವೀಕರಿಸಬೇಕಾಗಬಹುದು. ಕಳೆದುಕೊಂಡ ವಸ್ತು ಮರಳಿ ಸಿಗುವ ಸಾಧ್ಯತೆ ಇದೆ. ಸಾಮಾಜಿಕ ಕಾರ್ಯದಲ್ಲಿ ಪ್ರಶಂಸೆ ದೊರೆಯಬಹುದು. ಹಣದ ಕೊರತೆಯಿದ್ದರೂ ಅನಿವಾರ್ಯ ಖರ್ಚು ಎದುರಾಗಬಹುದು. ವ್ಯಾಪಾರ ಸಾಮಾನ್ಯವಾಗಿರಲಿದೆ.
ಮೀನ ರಾಶಿ: ಜವಾಬ್ದಾರಿಯ ಕೆಲಸಗಳಲ್ಲಿ ಮಗ್ನರಾಗುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ. ನಿಮ್ಮ ಪ್ರಾಮಾಣಿಕತೆಯನ್ನು ಕೆಲವರು ಪ್ರಶ್ನಿಸಬಹುದು. ವ್ಯಾಪಾರದಲ್ಲಿ ಉತ್ಸಾಹ ಹೆಚ್ಚಿರುತ್ತದೆ. ಆರ್ಥಿಕ ಒತ್ತಡದಿಂದ ಹೊರಬರುವ ಮಾರ್ಗ ಕಂಡುಕೊಳ್ಳುವಿರಿ. ಯಾವುದೇ ಸಂದರ್ಭದಲ್ಲೂ ಸಮಯಪ್ರಜ್ಞೆಯಿಂದ ಮುನ್ನಡೆಯಿರಿ.
