500 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದ ಹನುಮಾನ್ ಚಾಲೀಸಾ ವಿಡಿಯೋ

Untitled design (96)

ಬೆಂಗಳೂರು: ಹಿಂದೂ ಧರ್ಮದಲ್ಲಿ ಕಲಿಯುಗದ ಏಕೈಕ ಜೀವಂತ ದೇವರು ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ಹನುಮಂತನ ಆರಾಧನೆ ಇಂದಿಗೂ ಲಕ್ಷಾಂತರ ಭಕ್ತರ ಜೀವನದ ಅವಿಭಾಜ್ಯ ಅಂಗವಾಗಿದೆ. ಪವನಪುತ್ರ, ಬಜರಂಗಬಲಿ,  ಸಂಕಟ ಮೋಚನ,ಕೇಸರಿನಂದನ ಹೀಗೆ ಸಾಕಷ್ಟು ಹೆಸರುಗಳಿಂದ ಕರೆಯಲ್ಪಡುವ ಮಾರುತಿಯ ಶಕ್ತಿಯನ್ನು ತುಳಸೀದಾಸರು ಹನುಮಾನ್ ಚಾಲೀಸಾ ಮೂಲಕ ವರ್ಣಿಸಸಿದ್ದಾರೆ.  ಈ ಹನುಮಾನ್‌ ಚಾಲೀಸಾವನ್ನು  ಲಕ್ಷಾಂತರ ಭಕ್ತರು ಪ್ರತಿನಿತ್ಯ ಕೀಳಿ ಪುನೀತಾರಾಗುತ್ತಿದ್ದಾರೆ.

ಇದೀಗ ಈ ಡಿಜಿಟಲ್ ಯುಗದಲ್ಲಿ ಹನುಮಾನ್‌ ಚಾಲೀಸಾ ಗೀತೆಗೆ ಅಪೂರ್ವ ಗೌರವ ಸಕ್ಕಿದೆ. ಟಿ-ಸೀರೀಸ್ ಭಕ್ತಿ ಸಾಗರ್ ಚಾನಲ್‌ನಲ್ಲಿ 2011ರ ಮೇ 10ರಂದು ಅಪ್‌ಲೋಡ್ ಆದ “ಹನುಮಾನ್ ಚಾಲೀಸಾ” ವಿಡಿಯೋ ಬರೋಬ್ಬರಿ 5 ಬಿಲಿಯನ್ (500 ಕೋಟಿಗೂ ಅಧಿಕ) ವೀಕ್ಷಣೆಗಳನ್ನು ದಾಟಿ ಇತಿಹಾಸ ಸೃಷ್ಟಿಸಿದೆ. ಇದು ಭಾರತದ ಮೊದಲ ಮತ್ತು ಏಕೈಕ ವಿಡಿಯೋ ಎಂಬ ಗೌರವಕ್ಕೆ ಪಾತ್ರವಾಗಿದೆ.

14 ವರ್ಷಗಳ ಹಳೆಯ ವಿಡಿಯೋ ಇನ್ನೂ ಟ್ರೆಂಡಿಂಗ್ !

2011ರಲ್ಲಿ ದಿವಂಗತ ಗುಲ್ಷನ್ ಕುಮಾರ್ ಅವರ ಟಿ-ಸೀರೀಸ್ ಬಿಡುಗಡೆ ಮಾಡಿದ ಈ ವಿಡಿಯೋವನ್ನು ಪ್ರಸಿದ್ಧ ಗಾಯಕ ಹರಿಹರನ್ ಅವರು ತಮ್ಮ ಮಾದಕ ಕಂಠದಲ್ಲಿ ಹಾಡಿದ್ದಾರೆ. ಸಂಗೀತ ಸಂಯೋಜನೆ ಲಲಿತ್ ಸೇನ್, ಸರಳ ಹಾಗೂ ಭಕ್ತಿಭಾವದಿಂದ ಈ ಗೀತೆಯನ್ನ ಚಿತ್ರೀಕರಣ ಮಾಡಿದ್ದಾರೆ. ಹನುಮಂತನ ಚಿತ್ರಗಳ ಸಮ್ಮೋಹಕ ಪ್ರಸ್ತುತಿಯಿಂದಾಗಿ ಈ ವಿಡಿಯೋ 14 ವರ್ಷಗಳ ನಂತರಲೂ ಪ್ರತಿದಿನ ಲಕ್ಷಾಂತರ ಜನರ ಮೊಬೈಲ್‌ಗಳಲ್ಲಿ ಪ್ಲೇ ಆಗುತ್ತಲೇ ಇದೆ.

ನವೆಂಬರ್ 27, 2025ರಂದು ಈ ವಿಡಿಯೋ 5,006,713,956+ ವೀಕ್ಷಣೆಗಳನ್ನು ದಾಟಿದ್ದು, ಇದು ಯೂಟ್ಯೂಬ್‌ನಲ್ಲಿ ಅತೀ ಹೆಚ್ಚು ವೀಕ್ಷಿಸಿದ ವಿಡಿಯೋಗಳ ಪಟ್ಟಿಯಲ್ಲಿ ಟಾಪ್-10ರಲ್ಲಿದೆ.

ಜಾಗತಿಕವಾಗಿ ಅತೀ ಹೆಚ್ಚು ವೀಕ್ಷನೆ ಪಡೆದ ವಿಡಿಯೋಗಳು

ಹನುಮಾನ್ ಚಾಲೀಸಾದ ಮುಖ್ಯವಾದ 40 ಪದ್ಯಗಳಲ್ಲಿ ರಚಿತವಾದ ಈ ಭಕ್ತಿಗೀತೆಯನ್ನ ಪ್ರತಿದಿನ ಕೇಳುವುದರಿಂದ ಭಯ, ರೋಗ, ಶತ್ರುಪೀಡೆ, ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ ಎಂಬ ದೃಢ ನಂಬಿಕೆ ಇದೆ. ವಿಶೇಷವಾಗಿ ಮಂಗಳವಾರ ಮತ್ತು ಶನಿವಾರ ಈ ಪಠಣ ಮಾಡುವುದು ಶುಭಫಲ ನೀಡುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.

ಈ ದಾಖಲೆಯು ಕೇವಲ ಸಂಖ್ಯೆಯಲ್ಲ, ಕಲಿಯುಗದಲ್ಲಿ ಹನುಮಂತನ ಶಕ್ತಿ ಮತ್ತು ಭಾರತೀಯ ಸಂಸ್ಕೃತಿಯ ಜಾಗತಿಕ ಒಪ್ಪಂದಕ್ಕೆ ಸಾಕ್ಷಿಯಾಗಿದೆ. ಇಂದಿಗೂ ಲಕ್ಷಾಂತರ ಮೊಬೈಲ್‌ಗಳಲ್ಲಿ “ಜೈ ಹನುಮಾನ್ ಜ್ಞಾನ ಗುಣ ಸಾಗರ…” ಎಂಬ ಸಾಲುಗಳು ಧ್ವನಿಸುತ್ತಲೇ ಇರುತ್ತವೆ.

Exit mobile version