ದೈನಂದಿನ ರಾಶಿ ಭವಿಷ್ಯ: ಡಿಸೆಂಬರ್ 04, 2025ರ ರಾಶಿಫಲ ಹೇಗಿದೆ ನೋಡಿ..!

Untitled design 2025 12 04T064623.114
ಮೇಷ ರಾಶಿ

ಭಾವನಾತ್ಮಕವಾಗಿ ಸ್ವಲ್ಪ ಚಡಪಡಿಕೆ ಇದ್ದರೂ, ಕೆಲಸದಲ್ಲಿ ಶಾಂತಿಯಿಂದ ಮುಂದುವರೆದರೆ ಉತ್ತಮ ಫಲ ನಿಶ್ಚಿತ. ಆರ್ಥಿಕತೆಯಲ್ಲಿ ಚೇತರಿಕೆ ಇರುವುದರಿಂದ ನಿಮಗೆ ನೆಮ್ಮದಿ ಸಿಗಲಿದೆ. ತಾಯಿಯ ಬೆಂಬಲ ದೊರೆಯುವುದು. ಸ್ಥಿರಾಸ್ತಿಯ ಉಳಿವಿಗೆ ಹೋರಾಟ ಮಾಡಬೇಕಾಗಬಹುದು, ಮತ್ತು ಇಂದು ಬಂಧುಗಳ ಬಳಿ ಸಾಲಕ್ಕೆ ಕೈ ಚಾಚುವುದು ಬೇಡ. ಮನೆಯ ಕಾರ್ಯಗಳಲ್ಲಿ ತಲ್ಲೀನರಾಗುವಿರಿ. ನಿಮ್ಮ ವಸ್ತುಗಳ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ಸಂಗಾತಿಯು ನಿಮ್ಮ ನಡವಳಿಕೆಯನ್ನು ಪ್ರಶ್ನಿಸಬಹುದು, ಆದರೆ ಕುಟುಂಬದಲ್ಲಿ ಸಂತೈಸುವ ಮಾತುಗಳಿಂದ ಸಂದರ್ಭ ಸುಧಾರಿಸುತ್ತದೆ. ಧಾರ್ಮಿಕ ಚಿಂತನೆ ಹೆಚ್ಚಾಗುವ ಸಾಧ್ಯತೆ ಇದೆ. ಯಾವುದೇ ಉದ್ವೇಗಕ್ಕೆ ಒಳಗಾಗದೇ, ಸಮಾಧಾನದ ಮನಃಸ್ಥಿತಿಯಲ್ಲಿ ಇರಿ.

ವೃಷಭ ರಾಶಿ

ನಿದ್ರಾಹೀನತೆಯು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಕುಟುಂಬದಲ್ಲಿ ಮಾತಿನ ಸ್ಪಷ್ಟತೆ ಅಗತ್ಯ. ಸ್ನೇಹ ವಲಯದಲ್ಲಿ ಉತ್ತಮ ಬೆಂಬಲ ದೊರೆಯಲಿದೆ. ಅಧ್ಯಯನದಲ್ಲಿ ಹೊಸ ವಿಚಾರಗಳನ್ನು ತಿಳಿಯುವ ಆಸಕ್ತಿ ಹೆಚ್ಚಳ. ವ್ಯವಹಾರದಲ್ಲಿ ಇಂದು ನಿಮ್ಮ ಚುರುಕುತನ ಸಾಕಾಗದೇ ಇರಬಹುದು. ತಾಯಿಯ ಕಡೆಯಿಂದ ಧನದ ನಿರೀಕ್ಷೆ ಇರುತ್ತದೆ. ಹಳೆಯ ತಪ್ಪಿಗೆ ನೀವು ಪಶ್ಚಾತ್ತಾಪ ಪಡಬಹುದು. ಹೊಸ ಚಿಂತನೆಗಳು ಮೂಡಿ, ಉದ್ಯೋಗದಲ್ಲಿ ಪ್ರಶಂಸೆ ಸಿಗಲಿದೆ. ಹಣಕಾಸಿನಲ್ಲಿ ನಿರೀಕ್ಷಿತ ಧನ ಆಗಮನವಾಗಲಿದೆ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸಲು ಸಂಗಾತಿಗೆ ಹೇಳುವಿರಿ.

ಮಿಥುನ ರಾಶಿ

ಎಲ್ಲರ ಜೊತೆ ಗಾಂಭೀರ್ಯದಿಂದ ವ್ಯವಹರಿಸುವ ದಿನವಿದು. ಕೆಲಸದಲ್ಲಿ ಪ್ರಮುಖ ಹೊಣೆಗಾರಿಕೆಗಳು ನಿಮ್ಮ ಮೇಲಿರಲಿವೆ. ಹಣಕಾಸಿನಲ್ಲಿ ಸ್ಥಿರತೆಯನ್ನು ಕಾಣುವಿರಿ. ಕುಟುಂಬದಲ್ಲಿ ಹಿರಿಯರ ಸಲಹೆ ಅನುಕೂಲಕರವಾಗಲಿದೆ. ಆರೋಗ್ಯದಲ್ಲಿ ಗಂಟು ನೋವಿನ ಬಾಧೆ ಕಾಡಬಹುದು. ನಿಮ್ಮ ದೌರ್ಬಲ್ಯಗಳಿಂದ ತೊಂದರೆಯಾಗುವ ಸಾಧ್ಯತೆ ಇದೆ. ಆರ್ಥಿಕತೆಯ ಬೆಳವಣಿಗೆಯು ಸಂತೋಷವನ್ನು ತರುತ್ತದೆ. ಕಿರಿಯರಿಂದ ಸಲ್ಲದ ಮಾತುಗಳನ್ನು ಕೇಳುವ ಸಾಧ್ಯತೆ ಇದೆ. ಸಹೋದರನಿಂದ ಹೊಸ ಉದ್ಯೋಗಕ್ಕೆ ಸೇರಿಕೊಳ್ಳುವ ಅವಕಾಶ ಸಿಗಬಹುದು. ಸಂಬಂಧಗಳಲ್ಲಿ ನಿಧಾನ ಮಾತುಕತೆ ಉತ್ತಮ. ವಿದ್ಯಾರ್ಥಿಗಳಿಗೆ ದೃಢ ಮನಸ್ಸು.

ಕರ್ಕಾಟಕ ರಾಶಿ

ಹಣಕಾಸಿನ ಲಾಭಕ್ಕಾಗಿ ಲಘು ಪ್ರಯತ್ನ ಮಾಡಿದರೂ ಸಾಕು. ಕುಟುಂಬದಲ್ಲಿ ಸಂತೋಷದ ವಿಚಾರವಿದೆ. ಸಂಬಂಧಗಳಲ್ಲಿ ಸತ್ಯತೆ ನಿಮ್ಮ ಮೌಲ್ಯವನ್ನು ಹೆಚ್ಚಿಸುತ್ತದೆ. ನೂತನ ವಸ್ತ್ರ, ವಸ್ತುಗಳ ಖರೀದಿಗೆ ಸಮಯ ಕೊಡಬೇಕಾಗಬಹುದು. ನಿಮ್ಮ ಅಂದಾಜಿನ ಆದಾಯವನ್ನು ತಲುಪುವಿರಿ. ದಾಂಪತ್ಯದಲ್ಲಿ ಬರುವ ಕಲಹವನ್ನು ಸುಮ್ಮನಿದ್ದು ಶಾಂತಗೊಳಿಸುವುದು ಉತ್ತಮ. ಸಂಕೋಚದ ಸ್ವಭಾವದಿಂದ ಬಂದ ಅವಕಾಶಗಳನ್ನು ಕೈಬಿಡಬಹುದು. ಕೆಲವರು ನಿಮ್ಮ ಮಾತನ್ನು ವಿರೋಧಿಸುವರು. ಇಂದು ಸಾಮಾಜಿಕ ಗೌರವವನ್ನು ಬಯಸುವಿರಿ. ಅನಗತ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಅದು ಒಳ್ಳೆಯದೇ ಆಗಬಹುದು.

ಸಿಂಹ ರಾಶಿ

ಹಣಕಾಸಿನಲ್ಲಿ ಅನಿರೀಕ್ಷಿತ ಲಾಭದ ಸಾಧ್ಯತೆ ಇದೆ. ಕುಟುಂಬದಲ್ಲಿ ಒಬ್ಬರ ನೆರವು ಸಿಗುತ್ತದೆ. ಆರೋಗ್ಯದಲ್ಲಿ ರಕ್ತದೊತ್ತಡದ ಕಡೆಗೆ ಗಮನ ಹರಿಸಬೇಕು. ಇಂದು ನೀವು ಯಾರ ಮಾತನ್ನೂ ಕೇಳದೆ ನಿಮ್ಮಷ್ಟಕ್ಕೆ ನಿರ್ಧಾರಕ್ಕೆ ಬರುವಿರಿ. ವೃತ್ತಿಯಲ್ಲಿ ಕಾರ್ಯವು ಸರಿಯಾಗದೇ ಸಂಕಷ್ಟಕ್ಕೆ ಬೀಳಬಹುದು, ಅಧಿಕಾರಿಗಳಿಂದ ಅಪಮಾನವೂ ಆದೀತು. ವಿದ್ಯಾಭ್ಯಾಸದ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಿರಿ. ಪಕ್ಷಪಾತ ಮಾಡದೇ ಸಮಾನಭಾವದಿಂದ ಕಾಣಬೇಕಾದೀತು. ದೇಹವನ್ನು ದಂಡಿಸಿ ಹೆಚ್ಚು ಲಾಭವನ್ನು ಗಳಿಸುವಿರಿ. ಸಂಬಂಧಗಳಲ್ಲಿ ಆಳವಾದ ಮಾತುಕತೆ ಗಟ್ಟಿತನ ತರುತ್ತದೆ. ಆರೋಗ್ಯದಲ್ಲಿ ತೂಕ ನಿಯಂತ್ರಣಕ್ಕೆ ಒತ್ತು ನೀಡಿ.

ಕನ್ಯಾ ರಾಶಿ

ಕೆಲಸದಲ್ಲಿ ವಿಳಂಬವಿದ್ದರೂ ಅಂತಿಮ ಫಲ ಸೂಕ್ತವಾಗಿರಲಿದೆ. ಹಣಕಾಸು ವ್ಯವಹಾರದಲ್ಲಿ ಜಾಗ್ರತೆ ವಹಿಸಿ. ಕುಟುಂಬದಲ್ಲಿ ಹಳೆಯ ಅಸಮಾಧಾನ ನಿವಾರಣೆಯಾಗುವುದು. ಸ್ನೇಹಿತರ ಜೊತೆ ಸಂತೋಷದ ಕೂಟದಲ್ಲಿ ಭಾಗಿಯಾಗುವಿರಿ. ಸತ್ಯವನ್ನು ಮಾರ್ಮಿಕವಾಗಿ ಹೇಳುವಿರಿ. ಮಾನಸಿಕ ಅಶಾಂತಿಗೆ ನಿಮ್ಮಲ್ಲಿಯೇ ಮದ್ದು ಇದೆ. ಹಣದ ವ್ಯವಹಾರವನ್ನು ಆಪ್ತರ ಜೊತೆ ಸೇರಿ ಮಾಡುವುದು ಉತ್ತಮ. ಸ್ವಂತ ಉದ್ಯಮವನ್ನು ಆರಂಭಿಸಲು ಚಿಂತಿಸುವಿರಿ. ಕಲೆ ಮತ್ತು ಸೃಜನಶೀಲತೆಯನ್ನು ಮುಂದುವರಿಸಲು ಸೂಕ್ತ ಸಮಯ. ಹೆಚ್ಚು ಆಹಾರದ ಸೇವನೆಯು ಕಷ್ಟವನ್ನು ತರಬಹುದು.

ತುಲಾ ರಾಶಿ

ವಿದ್ಯಾಭ್ಯಾಸದಲ್ಲಿ ಏಕಾಗ್ರತೆಯ ವೃದ್ಧಿಯಾಗಲಿದೆ. ಹಣಕಾಸಿನಲ್ಲಿ ಖರ್ಚನ್ನು ನಿಯಂತ್ರಿಸಬೇಕು. ಹೊಸ ಯೋಜನೆಗಳನ್ನು ನಿಧಾನವಾಗಿ ಆರಂಭಿಸಿದರೆ ಯಶಸ್ಸು. ಇಂದಿನ ದೂರ ಪ್ರಯಾಣವು ನಿರಾಶಾದಾಯಕವಾಗಿದ್ದು, ಎಲ್ಲರನ್ನೂ ಹೀಗಳೆಯುವ ಸಾಧ್ಯತೆ ಇದೆ. ಅತಿಯಾದ ಚಿಂತೆಯಿಂದ ಆರೋಗ್ಯವನ್ನು ಹಾಳು ಮಾಡಿಕೊಳ್ಳುವಿರಿ. ಬೇಕಾದಷ್ಟು ಸಂಪತ್ತಿದ್ದರೂ ನಿಮಗೆ ಸರಿಯಾದ ನೆಮ್ಮದಿ ಸಿಗದು. ಇಂದು ನೀವು ಕೃತಜ್ಞತೆಯನ್ನು ಮರೆಯುವಿರಿ. ಉದ್ಯೋಗದಲ್ಲಿ ನಿಮ್ಮ ನಿರ್ಧಾರಗಳಿಗೆ ಮೆಚ್ಚುಗೆ ಸಿಗಲಿದೆ. ವ್ಯವಹಾರದಲ್ಲಿ ಸಣ್ಣ ಲಾಭ. ಕುಟುಂಬದಲ್ಲಿ ಗೊಂದಲ ನಿವಾರಣೆಗೆ ಶಾಂತಿಯುತ ಮಾತುಕತೆ ಅಗತ್ಯ.

ವೃಶ್ಚಿಕ ರಾಶಿ

ಆತ್ಮವಿಶ್ವಾಸ ತಾನಾಗಿಯೇ ಹೆಚ್ಚುವ ದಿನವಿದು. ನಿಮ್ಮ ನಾಯಕತ್ವ ಸ್ವಭಾವ ಸ್ಪಷ್ಟವಾಗುವುದು. ಹೊಸ ಕಾರ್ಯದಲ್ಲಿ ಶುಭಾರಂಭಕ್ಕೆ ಅವಕಾಶವಿದೆ. ಹಣಕಾಸು ಲಾಭ ಸಾಧ್ಯ. ಕುಟುಂಬದಲ್ಲಿ ಹಳೆಯ ವಿಷಯಗಳು ಪರಿಹಾರವಾಗಲಿವೆ. ಸಂಗಾತಿಯು ನಿಮಗೆ ಮಾನಸಿಕವಾಗಿ ಘಾಸಿ ಮಾಡಬಹುದು. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ಪತ್ನಿಯಿಂದ ಪ್ರಚೋದಿತರಾಗುವಿರಿ. ಉದ್ಯೋಗ ಪಡೆಯಲು ಕಾದು ಸಮಯ ಹಾಳು ಮಾಡಬಹುದು, ಮಾತನ್ನು ಕಡಿಮೆ ಮಾಡುವುದು ಉತ್ತಮ. ಕೂಡಿಬರುವ ವಿವಾಹಭಾಗ್ಯವನ್ನು ಒಪ್ಪಿಕೊಳ್ಳುವಿರಿ. ಆರೋಗ್ಯ ಉತ್ತಮವಾಗಿದ್ದರೂ ಹೆಚ್ಚು ಮಾತನಾಡುವುದು ದಣಿವು ತರಬಹುದು.

ಧನು ರಾಶಿ

ಮನಸ್ಸಿಗೆ ನೆಮ್ಮದಿ ಹೆಚ್ಚಾಗಿ ಕೆಲಸದ ಒತ್ತಡವೂ ಕಡಿಮೆಯಾಗುತ್ತದೆ. ಮನೆಮಂದಿಯೊಂದಿಗೆ ಸುಖಕರ ಕ್ಷಣವನ್ನು ಕಳೆಯುವಿರಿ. ವ್ಯವಹಾರದಲ್ಲಿ ಸ್ವಲ್ಪ ನಿಧಾನವಾದರೂ ಸ್ಥಿರತೆ ಇರುತ್ತದೆ. ಸಂಗಾತಿಯು ನಿಮ್ಮ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೇ ಮಾತನಾಡಬಹುದು. ಕಾನೂನಿನ ತೊಂದರೆ ಕಾಡಬಹುದು. ಎಲ್ಲರಿಂದ ಹೊಗಳಿಸಿಕೊಳ್ಳಬೇಕು ಎಂದು ಅನ್ನಿಸಬಹುದು. ಸ್ತ್ರೀಯರಿಗೆ ಮನೆಯ ಕೆಲಸ ಸಾಕೆನಿಸಿ ಹೊರಗೆ ಹೋಗಬೇಕು ಎನಿಸಬಹುದು. ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಉತ್ತಮ ಪ್ರಗತಿ. ಸಂಬಂಧಗಳಲ್ಲಿ ಭಾವನಾತ್ಮಕತೆ ಹೆಚ್ಚಾಗುವುದರಿಂದ ಮಾತಿನಲ್ಲಿ ಮೃದುವಾಗಿರಬೇಕು. ಸರಿಯಾಗಿ ಯೋಜನೆ ಮಾಡಿಕೊಳ್ಳದೇ ಕಾರ್ಯವನ್ನು ಆರಂಭಿಸುವಿರಿ.

ಮಕರ ರಾಶಿ

ಭವಿಷ್ಯದ ಆಲೋಚನೆಯ ಸಾಮರ್ಥ್ಯ ಇಂದು ಹೆಚ್ಚಿರುತ್ತದೆ. ಕೆಲಸಗಳಲ್ಲಿ ಹೊಸ ಚಿಂತನೆಗಳು ಮೂಡಿ ಫಲದಾಯಕವಾಗುವುದು. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಬಂದರೂ ಸಮಾಲೋಚನೆ ಶಾಂತಿ ತರುತ್ತದೆ. ಸಣ್ಣ ವ್ಯಾಪಾರಿಗಳಿಗೆ ಅಲ್ಪ ಲಾಭವಾಗುವುದು. ಕಲಾವಿದರು ಹೆಚ್ಚು ಶ್ರಮ ಹಾಕಿದರೆ ಯಶಸ್ಸನ್ನು ಸಾಧಿಸಬಹುದು. ನಿಮ್ಮ ಕಾರ್ಯಕ್ಕೆ ವಿರೋಧಿಗಳ ಪ್ರಶಂಸೆಯೂ ಸಿಗಬಹುದು. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ತೋರಿಸಬಹುದು. ಸಾಮಾಜಿಕ ಕಾರ್ಯಗಳನ್ನು ಮಾಡಲು ಉತ್ಸಾಹ ಇರಲಿದೆ. ಹಣಕಾಸು ಹೂಡಿಕೆಯಲ್ಲಿ ಎಚ್ಚರ. ಆರೋಗ್ಯದಲ್ಲಿ ತಲೆನೋವು ಸಾಧ್ಯ. ಸ್ನೇಹ ವಲಯದಲ್ಲಿ ಹೊಸ ಪರಿಚಯವಾಗಲಿದೆ.

ಕುಂಭ ರಾಶಿ

ಸಂಬಂಧಗಳಲ್ಲಿ ಅತಿಯಾದ ನಿರೀಕ್ಷೆ ತಪ್ಪಿಸಿ, ನಂಬಿಕೆ ಹೆಚ್ಚಿಸಿದರೆ ಉತ್ತಮ ಫಲ. ಹೊಸ ಯೋಜನೆಗಳಿಗೆ ಅನುಕೂಲವಿದೆ. ಆಲಸ್ಯವು ನಿಮಗೆ ಹಿನ್ನಡೆ ತಂದೀತು. ಆಪ್ತರ ಸಹವಾಸದಿಂದ ಉತ್ತಮ‌ ವಸ್ತುಗಳ ಖರೀದಿ ಮಾಡುವಿರಿ. ಸಂಗಾತಿಯ ಜೊತೆ ವಾಗ್ವಾದ ಮಾಡುವಿರಿ. ಇಂದು ಕಛೇರಿಯಲ್ಲಿನ ಕಲಹವು ಉದ್ಯೋಗವನ್ನು ಕಳೆದುಕೊಳ್ಳುವ ಮಟ್ಟಕ್ಕೂ ಹೋಗದಂತೆ ಎಚ್ಚರ. ಉದ್ಯೋಗದಲ್ಲಿ ಮೇಲಧಿಕಾರಿಗಳ ಮೆಚ್ಚುಗೆ ಸಿಗಲಿದೆ. ವ್ಯವಹಾರದಲ್ಲಿ ಲಾಭದ ಸಂಕೇತ. ಆರೋಗ್ಯದಲ್ಲಿ ಜೀರ್ಣಕ್ರಿಯೆಯ ಕಡೆಗೆ ಗಮನ ಹರಿಸಬೇಕು. ನಿಮ್ಮ ನಿರ್ಮಾಣದ ಕಾರ್ಯಗಳು ನಿಧಾನವಾಗಬಹುದು.

ಮೀನ ರಾಶಿ

ಚುರುಕು ಹೆಚ್ಚಾಗಿ ಕೆಲಸಗಳಲ್ಲಿ ವೇಗ ಕಾಣುತ್ತದೆ. ವ್ಯವಹಾರದಲ್ಲಿ ಹೊಸ ಸಂಧಿಗಳು ದೊರೆಯಬಹುದು. ಕುಟುಂಬದಲ್ಲಿ ಅಲ್ಪ ಉದ್ವಿಗ್ನತೆ ಇದ್ದರೂ, ಮಾತನಾಡುವಲ್ಲಿ ಸಮತೋಲನೆ ತಂದರೆ ಸುಗಮವಾಗುವುದು. ತನ್ನವರ ಬಗ್ಗೆ ನಂಬಿಕೆ ಇಲ್ಲದಿರಬಹುದು. ಮಾತನ್ನು ಕಡಿಮೆ ಮಾಡಿ ಏಕಾಂಗಿಯಾಗಿ ಇರಲು ಇಷ್ಟಪಡುವಿರಿ. ಹಲವು ದಿನಗಳಿಂದ ಬಯಸಿದ್ದು ಸಿಗಬಹುದು. ಉದ್ಯೋಗದಲ್ಲಿ ಉತ್ತಮ ಅವಕಾಶಗಳು ಬರಲಿವೆ. ಶಿಕ್ಷಣದಲ್ಲಿ ಮನಸ್ಸು ಏಕಾಗ್ರವಾಗುವುದು. ಆರೋಗ್ಯದಲ್ಲಿ ದೇಹದ ಜಡತೆಗೆ ಎಚ್ಚರ. ಅನಿರೀಕ್ಷಿತ ಸಂಪತ್ತು ನಿಮ್ಮನ್ನು ಬಂದು ಸೇರಬಹುದು. ಸಜ್ಜನರ ಸಹವಾಸವನ್ನು ಇಷ್ಟಪಡುವಿರಿ.

ಡಿಸೆಂಬರ್ 04, 2025ರ ಪಂಚಾಂಗ

ಶಾಲಿವಾಹನ ಶಕೆ: 1948 (ವಿಶ್ವಾವಸು ಸಂವತ್ಸರ), ದಕ್ಷಿಣಾಯನ, ಋತು: ಹೇಮಂತ, ಚಾಂದ್ರ ಮಾಸ: ಮಾರ್ಗಶೀರ್ಷ (ಶುಕ್ಲ ಪಕ್ಷ), ತಿಥಿ: ಚತುರ್ದಶೀ / ಪೂರ್ಣಿಮಾ, ನಿತ್ಯನಕ್ಷತ್ರ: ಕೃತ್ತಿಕಾ, ಸೂರ್ಯೋದಯ: 06:28 am, ಸೂರ್ಯಾಸ್ತ: 05:50 pm, ರಾಹು ಕಾಲ: 13:35 – 15:00, ಯಮಗಂಡ ಕಾಲ: 06:29 – 07:54

Exit mobile version