ಸಂಖ್ಯಾಶಾಸ್ತ್ರದ ಪ್ರಕಾರ ಪ್ರತಿಯೊಬ್ಬರ ಜೀವನದ ಮೇಲೆ ಸಂಖ್ಯೆಗಳ ಪ್ರಭಾವ ಮಹತ್ತರವಾಗಿದೆ. ನಮ್ಮ ಜನ್ಮದಿನಾಂಕದಿಂದ ದೊರೆಯುವ ಜನ್ಮಸಂಖ್ಯೆ ವ್ಯಕ್ತಿತ್ವ, ಚಿಂತನೆ, ನಿರ್ಧಾರಗಳು ಮತ್ತು ದಿನನಿತ್ಯದ ಘಟನೆಗಳ ಮೇಲೆ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಇದೆ. ಡಿಸೆಂಬರ್ 16ರ ಮಂಗಳವಾರದ ದಿನ ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಹಣಕಾಸು, ಆರೋಗ್ಯ, ಉದ್ಯೋಗ, ವ್ಯಾಪಾರ ಮತ್ತು ವೈಯಕ್ತಿಕ ಸಂಬಂಧಗಳಲ್ಲಿ ಏನೆಲ್ಲ ಬದಲಾವಣೆಗಳು ಸಂಭವಿಸಬಹುದು ಎಂಬುದರ ವಿವರ ಇಲ್ಲಿದೆ.
ಜನ್ಮಸಂಖ್ಯೆ 1( 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಇಂದು ಆರೋಗ್ಯಕರ ಆಹಾರ, ಡ್ರೈಫ್ರೂಟ್ಸ್‌ಗಳ ಖರೀದಿಗೆ ಹೆಚ್ಚು ಹಣ ವೆಚ್ಚ ಮಾಡುವ ಸಾಧ್ಯತೆ ಇದೆ. ಕೆಲವರಿಗೆ ಕಿವಿಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. ವೈದ್ಯರ ಸಲಹೆ ಪಡೆಯುವುದು ಒಳಿತು. ಉದ್ಯೋಗ ಸಂಬಂಧಿತ ವಿಚಾರಗಳನ್ನು ಮುಂದೂಡಬೇಡಿ. ನಿಮ್ಮ ವಿರುದ್ಧ ನಿಂತವರು ತಮ್ಮ ತಪ್ಪು ಅರಿತು ಕ್ಷಮೆ ಕೇಳುವ ಸಂದರ್ಭ ಎದುರಾಗಲಿದೆ. ದಿನಗೂಲಿ ನೌಕರರಿಗೆ ಹೊಸ ಆದಾಯದ ಅವಕಾಶಗಳು ಲಭ್ಯವಾಗುತ್ತವೆ. ವ್ಯವಹಾರಸ್ಥರಿಗೆ ತೆಗೆದುಕೊಂಡ ರಿಸ್ಕ್‌ನಿಂದ ಉತ್ತಮ ಲಾಭ ದೊರೆಯಲಿದೆ.
ಜನ್ಮಸಂಖ್ಯೆ 2( 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಮಾನಸಿಕ ಗೊಂದಲ ಹೆಚ್ಚಾಗುವ ದಿನ. ಯಾವುದೇ ತೀರ್ಮಾನದಿಂದಲೂ ತೃಪ್ತಿ ಸಿಗದಂತಾಗಬಹುದು. ವಾಹನ ಮಾರಾಟದ ಕುರಿತು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಹೋಟೆಲ್ ಉದ್ಯೋಗಿಗಳಿಗೆ ಕೆಲಸದ ಒತ್ತಡ ಹೆಚ್ಚಾಗುತ್ತದೆ. ಸ್ನೇಹಿತರ ನಿರ್ಲಕ್ಷ್ಯ ಬೇಸರಕ್ಕೆ ಕಾರಣವಾಗಬಹುದು. ಪೋಷಕರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ.
ಜನ್ಮಸಂಖ್ಯೆ 3( 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಭವಿಷ್ಯದ ಬೆಳವಣಿಗೆಗಳ ಬಗ್ಗೆ ಸ್ಪಷ್ಟತೆ ದೊರೆಯುತ್ತದೆ. ಮೇಲಾಧಿಕಾರಿಗಳಿಂದ ಹೊಸ ಜವಾಬ್ದಾರಿಗಳ ಸೂಚನೆ ಸಿಗಬಹುದು. ಸ್ನೇಹಿತರಿಂದ ಸಹಾಯ ದೊರೆಯಲಿದೆ. ಬ್ಯಾಂಕ್ ಲಾಕರ್ ಅಥವಾ ಮನೆಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಚಿಂತನೆ ನಡೆಸುವಿರಿ. ವಿವಾಹ ಯತ್ನದಲ್ಲಿರುವವರಿಗೆ ಉತ್ತಮ ಸಂಬಂಧ ದೊರೆಯುವ ಸೂಚನೆಗಳಿವೆ.
ಜನ್ಮಸಂಖ್ಯೆ 4( 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಕೆಲಸದ ಒತ್ತಡ ಹೆಚ್ಚಾಗುವ ದಿನ. ಕ್ರಿಯೇಟಿವ್ ಕ್ಷೇತ್ರದವರು ಡೆಡ್‌ಲೈನ್ ಒತ್ತಡ ಎದುರಿಸಬೇಕಾಗುತ್ತದೆ. ಅಪಪ್ರಚಾರದಿಂದ ಕೆಲವು ಅವಕಾಶಗಳು ಕೈ ತಪ್ಪುವ ಸಾಧ್ಯತೆ ಇದೆ. ಆದರೆ ದಾನ-ಧರ್ಮ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ. ಸಿನಿಮಾ ಕ್ಷೇತ್ರದವರಿಗೆ ಉತ್ತಮ ಆಫರ್ ಸಿಗಬಹುದು.
ಜನ್ಮಸಂಖ್ಯೆ 5( 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಸಂತೋಷ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಮನೆ ನಿರ್ಮಾಣ ಅಥವಾ ಆಸ್ತಿ ಸಂಬಂಧಿತ ಮಾತುಕತೆ ನಡೆಯಬಹುದು. ಪ್ರೀತಿಯ ವಿಷಯದಲ್ಲಿ ಸಕಾರಾತ್ಮಕ ಬೆಳವಣಿಗೆ ಸಾಧ್ಯ. ನಿಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವುದು ಲಾಭದಾಯಕ. ಸ್ನೇಹಿತರೊಂದಿಗೆ ಸಮಯ ಕಳೆಯುವ ಅವಕಾಶ ದೊರೆಯುತ್ತದೆ.
ಜನ್ಮಸಂಖ್ಯೆ 6(6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಹಣಕಾಸಿನ ಬಗ್ಗೆ ಗಂಭೀರ ಚಿಂತನೆ ಮಾಡಲಿದ್ದೀರಿ. ಹೊಸ ಆದಾಯ ಮೂಲ ಹುಡುಕುವ ಪ್ರಯತ್ನ ಆರಂಭವಾಗುತ್ತದೆ. ವೈದ್ಯಕೀಯ ಕ್ಷೇತ್ರದವರಿಗೆ ದೂರದ ಪ್ರದೇಶಗಳಿಂದ ಆಹ್ವಾನ ಸಿಗಬಹುದು. ವೃತ್ತಿಗೆ ಅಗತ್ಯವಾದ ಗ್ಯಾಜೆಟ್‌ಗಳ ಖರೀದಿ ಸಾಧ್ಯ.
ಜನ್ಮಸಂಖ್ಯೆ 7( 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಕೆಲಸ ಮತ್ತು ಆದಾಯದ ನಡುವೆ ಸಮತೋಲನ ಕಾಯ್ದುಕೊಳ್ಳುವ ನಿರ್ಧಾರ ಕೈಗೊಳ್ಳುವಿರಿ. ಧಾರ್ಮಿಕ ಅಥವಾ ಶಾಂತ ಸ್ಥಳಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಅಡುಗೆ ಕಾಂಟ್ರಾಕ್ಟ್ ಹೊಂದಿರುವವರಿಗೆ ದೊಡ್ಡ ಆರ್ಡರ್ ಸಿಗಬಹುದು. ಸಾಮಾಜಿಕ ಸಂಪರ್ಕ ಹೆಚ್ಚಿಸಲು ಕಾರ್ಯಕ್ರಮ ಆಯೋಜಿಸುವಿರಿ.
ಜನ್ಮಸಂಖ್ಯೆ 8(8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಕೋಪ ಮತ್ತು ಅಸಮಾಧಾನ ಸಮಸ್ಯೆ ತರಬಹುದು. ವ್ಯಾಪಾರದಲ್ಲಿ ಮಾತಿನ ಮಿತಿಯ ಅಗತ್ಯವಿದೆ. ಬಹುಕಾಲದಿಂದ ಕಳೆದುಹೋದ ದಾಖಲೆಗಳು ಸಿಗುವ ಸೂಚನೆ ಇದೆ. ಮದ್ಯಪಾನದಲ್ಲಿ ನಿಯಂತ್ರಣ ಬಹಳ ಮುಖ್ಯ.
ಜನ್ಮಸಂಖ್ಯೆ 9( 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಸಹಕಾರದ ಕೊರತೆ ನಿಮಗೆ ಬೇಸರ ತರಬಹುದು. ನಿರೀಕ್ಷಿತ ಹಣ ಬಾರದೆ ಆತಂಕ ಉಂಟಾಗುತ್ತದೆ. ತೀರ್ಮಾನಗಳಲ್ಲಿ ಪದೇಪದೇ ಬದಲಾವಣೆ ಮಾಡುವುದರಿಂದ ಕುಟುಂಬದಲ್ಲಿ ಅಸಮಾಧಾನ ಮೂಡುವ ಸಾಧ್ಯತೆ ಇದೆ.





