ತಮಿಳುನಾಡಿನ ದೇವಸ್ಥಾನಗಳಿಗೆ ಬಂತು ಹೊಸ ರೂಲ್ಸ್‌‌: ಈ ನಿಯಮಕ್ಕೆ ಬಿಜೆಪಿ-ಡಿಎಂಕೆ ಪಕ್ಷಗಳು ಫುಲ್ ಸುಸ್ತು

Untitled design 2026 06 22T233513.065

ಚೆನ್ನೈ: ತಮಿಳುನಾಡು ಅತ್ಯಂತ ಪುರಾತನ ಮತ್ತು ಅಪಾರ ಸಂಪತ್ತು ಹೊಂದಿರುವ ಹಿಂದೂ ದೇಗುಲಗಳ ನಾಡು. ಇದೀಗ ಈ ದೇವಸ್ಥಾನಗಳ ಆಸ್ತಿ ಮತ್ತು ಆದಾಯವನ್ನು ರಕ್ಷಿಸಲು ತಮಿಳುನಾಡಿನ ನೂತನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಐತಿಹಾಸಿಕ ತೀರ್ಮಾನವೊಂದನ್ನು ಕೈಗೊಂಡಿದ್ದಾರೆ. “ದೇವರ ದುಡ್ಡು ದೇವಸ್ಥಾನದ ಕೆಲಸಗಳಿಗೆ ಮಾತ್ರ ಬಳಕೆಯಾಗಬೇಕು” ಎಂಬ ಖಡಕ್ ನೀತಿಯನ್ನು ಜಾರಿಗೆ ತಂದಿದ್ದು, ಸಾರ್ವಜನಿಕ ವಲಯದಲ್ಲಿ ಇದಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.

ವಿರೋಧ ಪಕ್ಷಗಳ ಆಕ್ಷೇಪ – ಜನರ ಬೆಂಬಲ

ಮುಖ್ಯಮಂತ್ರಿ ವಿಜಯ್ ಅವರು ತಮಿಳುನಾಡು ವಿಧಾನಸಭೆಯಲ್ಲಿ ಈ ಪ್ರಸ್ತಾಪವನ್ನು ಮಂಡಿಸುತ್ತಿದ್ದಂತೆ, ವಿರೋಧ ಪಕ್ಷಗಳಾದ ಡಿಎಂಕೆ ಹಾಗೂ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ದೇಗುಲದ ಹಣವನ್ನು ಇತರೆ ವಾಣಿಜ್ಯ ಅಥವಾ ಅಭಿವೃದ್ಧಿ ಯೋಜನೆಗಳಿಗೆ ಬಳಸುವುದನ್ನು ತಡೆಯುವ ಈ ನಿರ್ಧಾರಕ್ಕೆ ರಾಜಕೀಯ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ತಮಿಳುನಾಡಿನ ಸ್ಥಳೀಯ ಜನರು ಮಾತ್ರ ಮುಖ್ಯಮಂತ್ರಿಯವರ ಈ ಹೊಸ ನಿಯಮಕ್ಕೆ “ಉಘೇ” ಎಂದಿದ್ದಾರೆ. ದೇವಸ್ಥಾನದ ಕಾಣಿಕೆ ಹಣ ಅನ್ಯಕಾರ್ಯಗಳಿಗೆ ಬಳಕೆಯಾಗಬಾರದು ಎಂಬುದು ಭಕ್ತರ ದೀರ್ಘಕಾಲದ ಬೇಡಿಕೆಯಾಗಿತ್ತು.

ಅಯೋಧ್ಯೆ ರಾಮ ಮಂದಿರದ ದೇಣಿಗೆ ವಿವಾದ: ಎಸ್ಐಟಿ ತನಿಖೆ ತೀವ್ರ

ಇದೇ ವೇಳೆ, ಇತ್ತೀಚೆಗೆ ಉತ್ತರ ಪ್ರದೇಶದ ಅಯೋಧ್ಯೆ ರಾಮ ಮಂದಿರದಲ್ಲಿ ಭಕ್ತರು ನೀಡಿದ ಕೋಟ್ಯಂತರ ರೂಪಾಯಿ ದೇಣಿಗೆ ಹಣ ಮತ್ತು ಚಿನ್ನಾಭರಣಗಳು ದುರುಪಯೋಗವಾಗಿರುವ ಆರೋಪ ಕೇಳಿಬಂದಿದೆ. ಅಲ್ಲಿನ ದೇಗುಲದ ಸಿಬ್ಬಂದಿಯೇ ಈ ಹಣವನ್ನು ಲೂಟಿ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಈ ಹಗರಣದ ಕುರಿತು ಭಕ್ತರಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆ, ಉತ್ತರ ಪ್ರದೇಶ ಸರ್ಕಾರವು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ಪ್ರಕರಣದ ನಿಖರ ತನಿಖೆಗಾಗಿ ಮೂರು ಸದಸ್ಯರ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ. ಎಸ್ಐಟಿ ಸದ್ಯ ಅಯೋಧ್ಯೆಯಲ್ಲಿ ಬೀಡುಬಿಟ್ಟು ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ತನಿಖೆಯ ವರದಿ ಬಂದ ನಂತರವೇ ಸತ್ಯಾಸತ್ಯತೆ ಹೊರಬೀಳಬೇಕಿದೆ.

Exit mobile version