ನವದೆಹಲಿ : ಎಐ ಭಾರತದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲಿ ಸೌಂಡ್ ಮಾಡುತ್ತಿರುವ ಒಂದು ಸಾಫ್ಟ್‌ವೇರ್. ಈ ಒಂದು ಸಾಫ್ಟ್‌ವೇರ್ ಎಷ್ಟು ಸದ್ದು ಮಾಡುತ್ತಿದೆ ಎಂದರೆ ಯಾರ ಅಂದಾಜಿಗೂ ಕೂಡ ಸಿಗದೇ ಮುನ್ನುಗುತ್ತಿರುವ ಈ ಎಐ ಪ್ರಪಂಚದಲ್ಲಿ ಭಾರತವೂ ಕೂಡ ಸ್ವನಿರ್ಮಿತ ಎಐ ಅನ್ನು ಹುಟ್ಟುಹಾಕಿದೆ.
ಸರ್ವಂ ಎಐ ಕೆಲಸಗಳೇನು?
ಎಐ ಎಂದಾಕ್ಷಣ ಎಲ್ಲರಿಗೂ ಕೂಡ ಫಟ್ ಅಂತ ನೆನಪಿಗೆ ಬರೋದೇ ಚಾಟ್ ಜಿಪಿಟಿ, ಜೆಮಿನಿ ಸೇರಿದಂತೆ ಹಲವಾರು ಕಂಪನಿಗಳು ಜನರ ಮನಸ್ಸಿನಲ್ಲಿ ಬರುತ್ತೆ. ಯಾಕೆಂದರೆ ಇಂದಿನ ದಿನಗಳಲ್ಲಿ ಎಐ ಇಲ್ಲದೇ ಮುಂದೆ ಏನು ಕೂಡ ಇಲ್ಲ ಎನ್ನುವಂತಹ ಮಟ್ಟಿಗೆ ಜನರು ಎಐ ಮೇಲೆ ಡಿಪೆಂಡ್ ಆಗಿದ್ದಾರೆ.
ಅಲ್ಲದೇ AI ಬಂದಾಗಿನಿಂದ ಹಲವು ಕಂಪನಿಗಳಲ್ಲಿ ಸಾಲು ಸಾಲಾಗಿ ಜನರು ಕೆಲಸ ಕಳೆದುಕೊಂಡಿದ್ದು ಕೂಡ ಇದೇ. ಸಾವಿರಾರು ಜನರ ಕೆಲಸಗಳಿಗೆ ಕುತ್ತು ಬಂದಿದ್ದು ಇದೇ. ಇದಕ್ಕೆಲ್ಲ AI ಕಾರಣ ಎಂಬುದು ಹಲವರ ಅಭಿಪ್ರಾಯವಾಗಿದೆ. ಅದರೆ ಸ್ಥಳೀಯ ಸರ್ಕಾರಗಳು AI ಕೆಲಸಗಳನ್ನ ಹುಟ್ಟುಹಾಕುತ್ತದೆ ಎಂದಿಗೂ ಕೂಡ ಕೆಲಸಗಳನ್ನ ಕಸಿಯುವುದಿಲ್ಲ ಎಂಬುದನ್ನ ಸರ್ಕಾರಗಳು ಸಾರಿ ಸಾರಿ ಹೇಳಿದ್ರು ಕೂಡ ನಂಬಲು ಜನರು ತಯಾರಿಲ್ಲ. ಯಾಕೆಂದರೆ ಎಐ ಬಂದ ಮೇಲೆ ಹತ್ತು ಅಲ್ಲ ನೂರಾರಲ್ಲ ಸಾವಿರಾರು ಜನರು ತಮ್ಮ ಕೆಲಸಗಳನ್ನ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಒಂದು ಎಐ ನೂರು ಜನರು ಮಾಡುವಂತಹ ಕೆಲಸವನ್ನ ಕೆಲವೇ ಗಂಟೆಗಳಲ್ಲಿ ಅತೀ ಕಡಿಮೆ ಅವಧಿಯಲ್ಲಿ ಮಾಡಿ ಮುಗಿಸುತ್ತದೆ. ಇದರಿಂದಾಗಿ ಹೆಚ್ಚಿಗೆ ಜನರು ಯಾಕೆ ಬೇಕು ಎಂಬಂತಹ ಪ್ರಶ್ನೆಗಳು ಇದೀಗ ಕಂಪನಿಗಳಲ್ಲಿ ಎದ್ದಿದೆ.
ಸರ್ವ AI ಮೇಲೆ ಭರ್ಜರಿ ಇನ್ವೇಸ್ಟ್ ಮೆಂಟ್
ಭಾರತದ ಎಐ ಕಂಪನಿಯಾಗಿರುವ ಸರ್ವಂ ಮೇಲೆ ಭರ್ಜರಿ ಇನ್ವೆಸ್ಟ್‌ಮೆಂಟ್ ನಡೆದಿದೆ ಎನ್ನಲಾಗಿದೆ. ಟೆಕ್ ದೈತ್ಯ ಕಂಪನಿಗಳಲ್ಲಿ ಒಂದಾಗಿರುವ ಹೆಚ್ ಸಿಎಲ್ 150 ಮಿಲಿಯನ್ ದುಡ್ಡನ್ನ ಹೂಡಿಕೆ ಮಾಡುವ ಮೂಲಕ ಭಾರತದ ಎಐಗೆ ಆನೆಬಲವನ್ನ ನೀಡಿದೆ.
ಸರ್ವಂ ಎಐ ಕಾರ್ಯಗಳೇನು?
ಸರ್ವಂ ಎಐ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲಿದ್ದು, ಹಲವು ಮಾಹಿತಿಗಳನ್ನ ಗುಪ್ತವಾಗಿಟ್ಟು ಕಾರ್ಯ ನಿರ್ವಹಿಸಲಿದೆ. ಈಗಾಗಲೇ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಹಲವು ಎಐ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಅದೆಲ್ಲವುದಕ್ಕೂ ಸರ್ವಂ ಸೆಡ್ಡು ಹೊಡೆಯುವುದರಲ್ಲಿ ಅನುಮಾನವೇ ಇಲ್ಲ.
ಹೀಗಾಗಿ ಭಾರತದಲ್ಲಿಯೇ ಡೆವಲಪ್ ಆಗುತ್ತಿರುವಂತಹ ಸರ್ವಂ ಎಐಗೆ ಭಾರೀ ಭಾರತ ಮಾತ್ರವಲ್ಲದೇ ವಿಶ್ವಾದಾದ್ಯಂತ ಕೂಡ ಮನ್ನಣೆ ಸಿಗಲಿ ಎಂಬುದು ಭಾರತೀಯರ ಆಶಯವಾಗಿದೆ. ಅಲ್ಲದೇ ಸರ್ವಂನಿಂದಾಗಿ ಭಾರತದ ನಿರುದ್ಯೋಗಿ ಉದ್ಯೋಗಿಗಳಿಗೂ ಕೂಡ ಶೀಘ್ರ ಕೆಲಸಗಳು ಲಭಿಸಲಿ ಎಂಬುದು ಹಾರೈಕೆಯಾಗಿದೆ..
