2ನೇ ಮದುವೆಯಾದ ಜಮ್ಮು ಕಾಶ್ಮೀರ ಸಿಎಂ!: ಸೋಶಿಯಲ್ ಮೀಡಿಯಾದಲ್ಲಿ ಮದುವೆ ಫೋಟೋ ವೈರಲ್

ಆತ್ಮಹತ್ಯೆ! (17)

ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತಮ್ಮ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಖ್ಯಾತ ಪತ್ರಕರ್ತೆ ನಿಧಿ ರಜ್ದಾನ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದು ಒಮರ್ ಅಬ್ದುಲ್ಲಾ ಅವರ ಎರಡನೇ ಮದುವೆಯಾಗಿದ್ದು, ಮದುವೆಯ ಸಂಭ್ರಮದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಸಂತಸವನ್ನು ಅಭಿಮಾನಿಗಳು ಹಾಗೂ ಬೆಂಬಲಿಗರೊಂದಿಗೆ ಹಂಚಿಕೊಂಡಿದ್ದಾರೆ. ‘ನಿನ್ನೆ ನನ್ನ ಜೀವನದಲ್ಲಿ ಹೊಸ ಬದುಕು ಆರಂಭವಾಗಿದೆ’ ಎಂಬ ಸಂದೇಶದೊಂದಿಗೆ ಅವರು ಮದುವೆಯ ವಿಚಾರವನ್ನು ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ.

ಒಮರ್ ಅಬ್ದುಲ್ಲಾ ಮತ್ತು ನಿಧಿ ರಜ್ದಾನ್ ಅವರ ಮದುವೆಯ ಸುದ್ದಿ ಇದೀಗ ರಾಜಕೀಯ ಹಾಗೂ ಮಾಧ್ಯಮ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಖಾಸಗಿ ಸುದ್ದಿ ವಾಹಿನಿಯಲ್ಲಿ ಪತ್ರಕರ್ತೆಯಾಗಿ, ನಿರೂಪಕಿಯಾಗಿ ಕಾರ್ಯನಿರ್ವಹಿಸಿರುವ ನಿಧಿ ರಜ್ದಾನ್, ತಮ್ಮ ವರದಿಗಾರಿಕೆ ಮೂಲಕ ದೇಶಾದ್ಯಂತ ಗುರುತಿಸಿಕೊಂಡಿದ್ದಾರೆ.

ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಬೆಳವಣಿಗೆಗಳು, ಭದ್ರತಾ ಪರಿಸ್ಥಿತಿ ಹಾಗೂ ಸಾಮಾಜಿಕ ವಿಚಾರಗಳ ಕುರಿತು ಹಲವು ವರ್ಷಗಳಿಂದ ವರದಿ ಮಾಡಿರುವ ಅನುಭವ ಹೊಂದಿದ್ದಾರೆ. ಕಣಿವೆ ರಾಜ್ಯದ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯ ಬಗ್ಗೆ ಅವರಿಗೆ ಆಳವಾದ ಪರಿಚಯವಿದೆ.

ಒಮರ್ ಅಬ್ದುಲ್ಲಾ ಅವರು 1994ರಲ್ಲಿ ಪಾಯಲ್ ನಾಥ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಜಹೀರ್ ಮತ್ತು ಜಮೀರ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಉಂಟಾದ ಹಿನ್ನೆಲೆಯಲ್ಲಿ 2011ರಲ್ಲಿ ಇಬ್ಬರೂ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದರು. ಬಳಿಕ ವಿಚ್ಛೇದನಕ್ಕಾಗಿ ಕಾನೂನು ಹೋರಾಟ ನಡೆದಿತ್ತು.

ಸುದೀರ್ಘ ಕಾಲ ನ್ಯಾಯಾಲಯದಲ್ಲಿ ವಿಚಾರಣೆ ನಡೆದ ನಂತರ 2026ರ ಜುಲೈ 31ರಂದು ವಿಚ್ಛೇದನ ಪ್ರಕ್ರಿಯೆ ಅಧಿಕೃತವಾಗಿ ಪೂರ್ಣಗೊಂಡಿತ್ತು. ಇದೀಗ ವಿಚ್ಛೇದನದ ಸುಮಾರು ಮೂರು ತಿಂಗಳ ಬಳಿಕ ಒಮರ್ ಅಬ್ದುಲ್ಲಾ ಎರಡನೇ ಮದುವೆಯಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಇನ್ನು ಪತ್ರಕರ್ತೆ ನಿಧಿ ರಜ್ದಾನ್ ಅವರಿಗೂ ಇದು ಎರಡನೇ ವಿವಾಹ ಎನ್ನಲಾಗಿದೆ. 2005ರಲ್ಲಿ ಪತ್ರಕರ್ತ ನೀಲೇಶ್ ಮಿಶ್ರಾ ಅವರನ್ನು ಮದುವೆಯಾಗಿದ್ದ ನಿಧಿ, 2007ರಲ್ಲಿ ವಿಚ್ಛೇದನ ಪಡೆದಿದ್ದರು. ನಂತರ ತಮ್ಮ ವೃತ್ತಿಜೀವನದತ್ತ ಗಮನಹರಿಸಿದ್ದ ಅವರು, ಸುದ್ದಿ ನಿರೂಪಣೆ ಮತ್ತು ವರದಿಗಾರಿಕೆಯಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಒಮರ್ ಅಬ್ದುಲ್ಲಾ ಅವರೊಂದಿಗೆ ಹೊಸ ಜೀವನ ಆರಂಭಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಒಮರ್ ಅಬ್ದುಲ್ಲಾ ತಮ್ಮ ಹೊಸ ಜೀವನದ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಒಮರ್ ಅಬ್ದುಲ್ಲಾ ಮತ್ತು ನಿಧಿ ರಜ್ದಾನ್ ಅವರ ಹೊಸ ಬದುಕಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭ ಹಾರೈಕೆಗಳ ಮಹಾಪೂರವೇ ಹರಿದುಬರುತ್ತಿದೆ.

Exit mobile version