ನ್ಯಾಯ ಸೇತು ಮೂಲಕ ಇನ್ಮುಂದೆ ವಾಟ್ಸಾಪ್‌ನಲ್ಲೇ ಪಡೆಯಿರಿ ಉಚಿತ ಕಾನೂನು ಸಲಹೆ !

Untitled design 2026 01 07T084317.759

ನವದೆಹಲಿ: ಭಾರತದ ಸಾಮಾನ್ಯ ನಾಗರಿಕರಿಗೆ ಕಾನೂನು ನೆರವು ಸುಲಭವಾಗಿ ಮತ್ತು ವೇಗವಾಗಿ ಸಿಗುವಂತೆ ಮಾಡಲು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯವು ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿದೆ. 2026ರ ಜನವರಿ 1 ರಂದು ‘ನ್ಯಾಯ ಸೇತು (Nyaya Setu)’ ಎಂಬ ಹೊಸ ವಾಟ್ಸಾಪ್ ಆಧಾರಿತ ಸೇವೆಯನ್ನು ಸಚಿವಾಲಯವು ಅಧಿಕೃತವಾಗಿ ಪ್ರಾರಂಭಿಸಿದೆ. ಈ ಯೋಜನೆಯ ಮೂಲಕ ವಕೀಲರ ಕಚೇರಿಗೆ ಅಲೆಯುವ ಅಗತ್ಯವಿಲ್ಲದೇ, ನಿಮ್ಮ ಸ್ಮಾರ್ಟ್‌ಫೋನ್ ಮೂಲಕವೇ ಉಚಿತವಾಗಿ ಕಾನೂನು ಮಾರ್ಗದರ್ಶನ ಪಡೆಯಬಹುದು.

ನ್ಯಾಯ ಸೇತು ಎಂದರೇನು ?

ಇದು ಕೃತಕ ಬುದ್ಧಿಮತ್ತೆ (AI) ಆಧಾರಿತ ಚಾಟ್‌ಬೋಟ್ ಸೇವೆಯಾಗಿದ್ದು, ವಾಟ್ಸಾಪ್‌ನಲ್ಲಿ ಲಭ್ಯವಿದೆ. ಸಾರ್ವಜನಿಕರಿಗೆ ಕಾನೂನು ಪ್ರಕ್ರಿಯೆಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಆರಂಭಿಕ ಹಂತದ ಸಲಹೆಗಳನ್ನು ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ. ‘ಈಸ್ ಆಫ್ ಜಸ್ಟಿಸ್’ (Ease of Justice) ಅಡಿಯಲ್ಲಿ ಈ ಸೇವೆಯು ನಾಗರಿಕರಿಗೆ ಕಾನೂನು ಅರಿವು ಮೂಡಿಸುತ್ತಿದೆ.

ಯಾವೆಲ್ಲಾ ಸಮಸ್ಯೆಗಳಿಗೆ ಇಲ್ಲಿ ಪರಿಹಾರವಿದೆ ?

ಈ ಸೇವೆಯು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಈ ಕೆಳಗಿನ ವಿವಿಧ ಕಾನೂನು ವ್ಯಾಜ್ಯಗಳ ಕುರಿತು ನೀವು ಇಲ್ಲಿ ಮಾಹಿತಿ ಪಡೆಯಬಹುದು:

ಈ ಸೇವೆಯನ್ನು ಬಳಸುವುದು ಹೇಗೆ ?

ಕೇಂದ್ರ ಸರ್ಕಾರವು ಪ್ರಕಟಿಸಿರುವ ಈ ಸೇವೆಯನ್ನು ಪಡೆಯಲು ನೀವು ಯಾವುದೇ ಆ್ಯಪ್ ಡೌನ್‌ಲೋಡ್ ಮಾಡುವ ಅಗತ್ಯವಿಲ್ಲ. ಕೇವಲ ಈ ಸರಳ ಹಂತಗಳನ್ನು ಅನುಸರಿಸಿ:

  1. ನಿಮ್ಮ ಮೊಬೈಲ್‌ನಲ್ಲಿ 7217711814 ಎಂಬ ಅಧಿಕೃತ ಸಹಾಯವಾಣಿ ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಿ.

  2. ವಾಟ್ಸಾಪ್ ತೆರೆದು ಈ ಸಂಖ್ಯೆಗೆ ‘Hi’ ಎಂದು ಸಂದೇಶ ಕಳುಹಿಸಿ.

  3. ತಕ್ಷಣವೇ ನಿಮಗೆ ಪ್ರತಿಕ್ರಿಯೆ ಸಿಗಲಿದ್ದು, ನಿಮ್ಮ ಭಾಷೆ ಮತ್ತು ಬೇಕಾದ ಕಾನೂನು ಮಾಹಿತಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

  4. ನಿಮ್ಮ ಮೊಬೈಲ್ ಸಂಖ್ಯೆಯನ್ನು ಒಮ್ಮೆ ಪರಿಶೀಲಿಸಿದ (Verify) ನಂತರ, ನೀವು ಚಾಟ್ ಮೂಲಕ ಪ್ರಶ್ನೆಗಳನ್ನು ಕೇಳಬಹುದು.

ಗಮನಿಸಬೇಕಾದ ಅಂಶಗಳು:

ಇದು ಪ್ರಾಥಮಿಕ ಮಾರ್ಗದರ್ಶನ ನೀಡುವ ಸೇವೆಯಾಗಿದ್ದು, ನ್ಯಾಯಾಲಯದಲ್ಲಿ ವಕೀಲರ ಪ್ರಾತಿನಿಧ್ಯಕ್ಕೆ ಪರ್ಯಾಯವಲ್ಲ. ಆದರೆ, ಪ್ರಕರಣವೊಂದರಲ್ಲಿ ನಿಮ್ಮ ಕಾನೂನು ಹಕ್ಕುಗಳೇನು ಮತ್ತು ಮುಂದಿನ ಹಂತದ ಕ್ರಮಗಳೇನು ಎಂಬ ಬಗ್ಗೆ ಸ್ಪಷ್ಟ ಚಿತ್ರಣವನ್ನು ಇದು ನೀಡುತ್ತದೆ. ತಾಂತ್ರಿಕವಾಗಿ ಇದು ‘ಟೆಲಿ-ಲಾ (Tele-Law)’ ವ್ಯವಸ್ಥೆಯ ಭಾಗವಾಗಿ ಕಾರ್ಯನಿರ್ವಹಿಸುತ್ತದೆ.

Exit mobile version