ತೆರಿಗೆದಾರರಿಗೆ ಅಲರ್ಟ್..! ITR ಸಲ್ಲಿಕೆ ವಿಳಂಬ ಮಾಡಿದರೆ ದಂಡ, ಬಡ್ಡಿ ಫಿಕ್ಸ್

Untitled design (62)

ಆದಾಯ ತೆರಿಗೆ ರಿಟರ್ನ್ (Income Tax Return – ITR) ಸಲ್ಲಿಸುವ ಕೊನೆಯ ದಿನಾಂಕ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಇನ್ನೂ ಲಕ್ಷಾಂತರ ತೆರಿಗೆದಾರರು ತಮ್ಮ ರಿಟರ್ನ್ ಸಲ್ಲಿಸಿಲ್ಲ. ಮೌಲ್ಯಮಾಪನ ವರ್ಷ 2026-27ಕ್ಕೆ ಈಗಾಗಲೇ 3.6 ಕೋಟಿಗೂ ಹೆಚ್ಚು ITRಗಳು ಸಲ್ಲಿಕೆಯಾಗಿದ್ದರೂ, ಅನೇಕ ಸಂಬಳದ ಉದ್ಯೋಗಿಗಳು, ಪಿಂಚಣಿದಾರರು ಹಾಗೂ ಇತರ ತೆರಿಗೆದಾರರು ಕೊನೆಯ ಕ್ಷಣದವರೆಗೆ ಕಾಯುವ ಪ್ರವೃತ್ತಿ ಮುಂದುವರಿಸಿದ್ದಾರೆ.

ಕಳೆದ ವರ್ಷದಂತೆ ಈ ಬಾರಿಯೂ ಸರ್ಕಾರ ಗಡುವು ವಿಸ್ತರಿಸಬಹುದು ಎಂಬ ನಿರೀಕ್ಷೆ ಕೆಲವರಲ್ಲಿದೆ. ಆದರೆ ತೆರಿಗೆ ತಜ್ಞರ ಪ್ರಕಾರ, ಈ ಬಾರಿ ITR ಸಲ್ಲಿಕೆ ಗಡುವು ವಿಸ್ತರಿಸುವ ಸಾಧ್ಯತೆ ಅತ್ಯಂತ ಕಡಿಮೆ. ಆದ್ದರಿಂದ ಯಾವುದೇ ಊಹಾಪೋಹಗಳಿಗೆ ಕಿವಿಗೊಡದೆ, ಸಮಯಕ್ಕೆ ರಿಟರ್ನ್ ಸಲ್ಲಿಸುವುದು ಸೂಕ್ತ.

ಈ ಬಾರಿ ಆದಾಯ ತೆರಿಗೆ ಇಲಾಖೆಯು ಎಲ್ಲಾ ITR ನಮೂನೆಗಳನ್ನು ಮುಂಚಿತವಾಗಿಯೇ ಬಿಡುಗಡೆ ಮಾಡಿದ್ದು, ಇ-ಫೈಲಿಂಗ್ ಪೋರ್ಟಲ್ ಕೂಡ ಸುಗಮವಾಗಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಸಂಸತ್ತಿನಲ್ಲಿ ನೀಡಿದ ಮಾಹಿತಿಯಂತೆ, ಪೋರ್ಟಲ್‌ನ ಕಾರ್ಯಕ್ಷಮತೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ತಾಂತ್ರಿಕ ಸಮಸ್ಯೆಗಳು ಕಂಡುಬಂದರೂ ತಕ್ಷಣವೇ ಪರಿಹರಿಸಲಾಗುತ್ತಿದೆ.

ಯಾರಿಗೆ ಯಾವ ಗಡುವು?

ಗಡುವು ತಪ್ಪಿದರೆ ಏನು ನಷ್ಟ?

ಗಡುವಿನ ನಂತರ ITR ಸಲ್ಲಿಸಿದರೆ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 234F ಅಡಿಯಲ್ಲಿ ದಂಡ ವಿಧಿಸಲಾಗುತ್ತದೆ.

ಇದರ ಜೊತೆಗೆ ಬಾಕಿ ತೆರಿಗೆಯ ಮೇಲೆ ಪ್ರತಿ ತಿಂಗಳು 1% ಬಡ್ಡಿ ಪಾವತಿಸಬೇಕಾಗುತ್ತದೆ.

ಇನ್ನೂ ಪ್ರಮುಖವಾಗಿ, ಷೇರುಗಳು, ಮ್ಯೂಚುವಲ್ ಫಂಡ್ ಅಥವಾ ಇತರ ಬಂಡವಾಳ ಆಸ್ತಿಗಳ ಮಾರಾಟದಿಂದ ಉಂಟಾದ Capital Loss ಅನ್ನು ಮುಂದಿನ ವರ್ಷಗಳಿಗೆ ವರ್ಗಾಯಿಸುವ (Carry Forward) ಅವಕಾಶವನ್ನು ಗಡುವಿನೊಳಗೆ ITR ಸಲ್ಲಿಸಿದರೆ ಮಾತ್ರ ಪಡೆಯಬಹುದು. ಗಡುವು ತಪ್ಪಿದರೆ ಈ ತೆರಿಗೆ ಸೌಲಭ್ಯವೂ ಕೈತಪ್ಪಲಿದೆ.

ಸಮಯಕ್ಕೆ ITR ಸಲ್ಲಿಸಿದರೆ ತೆರಿಗೆ ರಿಫಂಡ್ ಕೂಡ ಶೀಘ್ರವಾಗಿ ಪ್ರಕ್ರಿಯೆಯಾಗುತ್ತದೆ. ವಿಳಂಬಿತ ರಿಟರ್ನ್ ಸಲ್ಲಿಸಿದರೆ ಮರುಪಾವತಿ ಪಡೆಯುವುದಕ್ಕೂ ಹೆಚ್ಚು ಸಮಯ ಹಿಡಿಯಬಹುದು.

ತೆರಿಗೆ ತಜ್ಞರು ಕೊನೆಯ ಕ್ಷಣದವರೆಗೆ ಕಾಯದೆ, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ಈಗಲೇ ITR ಸಲ್ಲಿಸುವಂತೆ ಸಲಹೆ ನೀಡಿದ್ದಾರೆ.

Exit mobile version