ನವದೆಹಲಿ: ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಉಂಟಾಗಿದೆ. ಭಾರತೀಯ ನೌಕಾಪಡೆಯು ಅರಬ್ಬಿ ಸಮುದ್ರದಲ್ಲಿ ಶತ್ರು ರಾಷ್ಟ್ರಗಳ ಹಡಗುಗಳನ್ನು ಗುರಿಯಾಗಿಸಿಕೊಂಡು ಉಡಾಯಿಸಬಲ್ಲಾ ಕ್ಷಿಪಣಿಯ ಪರೀಕ್ಷೆಯನ್ನು ಯಶಸ್ವಿಯಾಗಿ ನೆರವೇರಿಸಿದೆ.
ಈ ಕ್ಷಿಪಣಿ ಪರೀಕ್ಷೆಯ ದೃಶ್ಯಗಳನ್ನು ನೌಕಾಪಡೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, “ಬಹು ಹಂತದ ತಂತ್ರಜ್ಞಾನ ಬಳಸಿಕೊಂಡು ವಿರೋಧಿ ಹಡಗುಗಳನ್ನು ನಿಖರವಾಗಿ ಉಡುಗಡೆ ಮಾಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ,” ಎಂದು ಘೋಷಿಸಿದೆ. ಈ ತಂತ್ರಜ್ಞಾನ ನಾವಿಕ ಸಿದ್ಧತೆಯ ಪ್ರಮುಖ ಭಾಗವಾಗಿದ್ದು, ಶತ್ರು ರಾಷ್ಟ್ರದ ಆಕ್ರಮಣಕ್ಕೆ ತಕ್ಷಣವೇ ಪ್ರತಿಕ್ರಿಯಿಸಲು ಭಾರತೀಯ ನೌಕಾಪಡೆ ಸದಾ ಸಜ್ಜಾಗಿರುವುದನ್ನು ತೋರಿಸಿದೆ.
ಈ ಪ್ರಯೋಗದ ವೇಳೆ, ಭಾರತೀಯ ಯುದ್ಧ ನೌಕೆಗಳ ಸಮೂಹದಿಂದ ಬ್ರಹ್ಮೋಸ್ ವಿರೋಧಿ ಹಡಗು ಕ್ಷಿಪಣಿಗಳು ಮತ್ತು ಕ್ರೂಸ್ ಕ್ಷಿಪಣಿಗಳನ್ನು ಉಡಾವಣೆಯಾಗಿದ್ದು, ಕಡಲ ಮೇಲಿನ ತುರ್ತು ಪರಿಸ್ಥಿತಿಗಳನ್ನು ಎದುರಿಸುವ ನೈಪುಣ್ಯವನ್ನು ಪ್ರದರ್ಶನ ಮಾಡಿದೆ.
#IndianNavy Ships undertook successful multiple anti-ship firings to revalidate and demonstrate readiness of platforms, systems and crew for long range precision offensive strike.#IndianNavy stands #CombatReady #Credible and #FutureReady in safeguarding the nation’s maritime… pic.twitter.com/NWwSITBzKK
— SpokespersonNavy (@indiannavy) April 27, 2025
ಪಹಲ್ಗಾಮ್ ಪ್ರದೇಶದಲ್ಲಿ ಉಗ್ರರ ದಾಳಿಯಲ್ಲಿ 26 ಮಂದಿಯ ಪ್ರಾಣಹಾನಿ ಸಂಭವಿಸಿದ್ದರಿಂದ, ಭಾರತದಲ್ಲಿ ಆಕ್ರೋಶ ಮನೆಮಾಡಿದ್ದು, ಪಾಕಿಸ್ತಾನದ ವಿರುದ್ಧವೂ ತೀವ್ರ ನಿಂದನೆ ವ್ಯಕ್ತವಾಗಿದೆ. ಇಂತಹ ಸಂದರ್ಭದಲ್ಲಿಯೇ, ಭಾರತೀಯ ನೌಕಾಪಡೆಯ ಈ ಯಶಸ್ವಿ ಕ್ಷಿಪಣಿ ಪರೀಕ್ಷೆ, ದೇಶದ ರಕ್ಷಣಾ ತಂತ್ರದ ಬಲವನ್ನು ಮತ್ತಷ್ಟು ಹೈಲೈಟ್ ಮಾಡಿದ್ದು, ಶತ್ರು ರಾಷ್ಟ್ರಗಳಿಗೆ ಬಲಿಷ್ಠ ಸಂದೇಶವನ್ನು ಕಳಿಸಿದೆ.
ಭಾರತೀಯ ನೌಕಾಪಡೆಯು ತನ್ನ ಕಾರ್ಯಾಚರಣೆಯ ಮೂಲಕ, ಯಾವುದೇ ರೀತಿಯ ಸವಾಲುಗಳನ್ನು ಎದುರಿಸಲು ಸಿದ್ಧವಿದೆ ಎಂಬ ಸಂದೇಶವನ್ನು ಸ್ಪಷ್ಟವಾಗಿ ಹಂಚಿಕೊಳ್ಳುತ್ತಿದೆ.
ಈ ಸಂದರ್ಭದಲ್ಲಿ ಮಾತನಾಡಿದ ನೌಕಾಪಡೆಯ ಅಧಿಕಾರಿಗಳು, “ಭಾರತೀಯ ನೌಕಾಪಡೆಯ ತಂತ್ರಜ್ಞಾನ ಮತ್ತು ಕಾರ್ಯತಂತ್ರವು ಸದಾ ವೃದ್ಧಿಯಾಗುತ್ತಿದ್ದು, ನಾವು ಭವಿಷ್ಯದ ಯಾವುದೇ ಸವಾಲುಗಳನ್ನು ಎದುರಿಸಲು ಸಜ್ಜಾಗಿದ್ದೇವೆ. ಶತ್ರು ರಾಷ್ಟ್ರಗಳು ಯಾವುದೇ ರೀತಿ ಬೆದರಿಕೆ ಒಡ್ಡಿದರೂ, ನಾವು ಖಂಡಿತವಾಗಿ ತಕ್ಷಣ ಪ್ರತಿಕ್ರಿಯಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದೇವೆ,” ಎಂದು ಹೇಳಿದರು.





