ಭಾರತದ ಬತ್ತಳಿಕೆಗೆ ಎಸ್‌ 500 ಮತ್ತು ಎಸ್‌‌ 57 ಮಿಸೈಲ್‌ ಯುದ್ಧವಿಮಾನ ಸೇರ್ಪಡೆ

Untitled design 2026 09 02T161156.394

ರಕ್ಷಣಾ ವಲಯದಲ್ಲಿ ತನ್ನದೇ ಆದ ಬೃಹತ್ ಹೆಜ್ಜೆಯನ್ನಿಡುತ್ತಿರುವ ಭಾರತೀಯ ಸೇನೆಗೆ ಇದೀಗ ಮತ್ತಷ್ಟು ಬಲವನ್ನು ನೀಡಲು ರಷ್ಯಾ ಮುಂದಾಗಿದೆ. ರಷ್ಯಾದ ಅತ್ಯಂತ ಪ್ರಬಲವಾದ ಎರಡು ಅತ್ಯಾಧುನಿಕ ಅಸ್ತ್ರಗಳು ಭಾರತೀಯ ಸೇನೆಯ ಬತ್ತಳಿಕೆಗೆ ಸೇರುವ ನಿರೀಕ್ಷೆಯಿದ್ದು, ಭಾರತದ ಶತ್ರುಗಳಿಗೆ ನಡುಕ ಶುರುವಾಗಿದೆ.

ಭಾರತದ ರಕ್ಷಣೆಗೆ S-500 ಮತ್ತು Su-57 ಸೇರ್ಪಡೆ ನಿರೀಕ್ಷೆ: – ಭಾರತದ ಬಳಿ ಅಗ್ನಿ, ಪೃಥ್ವಿ ಸೀರೀಸ್, ಪ್ರಳಯ್ ಸೇರಿದಂತೆ ಅನೇಕ ಕ್ಷಿಪಣಿಗಳಿವೆ. ಈಗ S-500 ಪ್ರೊಮೆಥಿಯಸ್ ವಾಯು ರಕ್ಷಣಾ ವ್ಯವಸ್ಥೆಯ ಶಕ್ತಿಯು ಸೇರುತ್ತಿರುವುದು ಭಾರತದ ಶತ್ರುಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ತಂಟೆಗೆ ಬರುವ ಮುಂಚೆ ಪಾಕಿಸ್ತಾನ ಹಾಗೂ ಚೀನಾದಂತಹ ಶತ್ರು ದೇಶಗಳು ನೂರು ಬಾರಿ ಯೋಚಿಸುವುದು ಒಳಿತು.

ಶೃಂಗಸಭೆಯಲ್ಲಿ ಭಾರತದ ಮುಂದೆ ಶಸ್ತ್ರಾಸ್ತ್ರಗಳ ಆಫರ್ ಕಳೆದ ಆಗಸ್ಟ್ 31 ರಂದು ನಡೆದ ಶೃಂಗಸಭೆಯಲ್ಲಿ ಭಾರತ, ರಷ್ಯಾ ಸೇರಿದಂತೆ ಹಲವು ದೇಶಗಳು ಭಾಗಿಯಾಗಿದ್ದವು. ಈ ವೇಳೆ ಭಾರತದೊಂದಿಗೆ ನಡೆದ ಉನ್ನತ ಮಟ್ಟದ ಮಾತುಕತೆಯಲ್ಲಿ ರಷ್ಯಾವು S-500 ವಾಯು ರಕ್ಷಣಾ ವ್ಯವಸ್ಥೆ ಹಾಗೂ Su-57 ಸ್ಟೆಲ್ತ್ ಯುದ್ಧವಿಮಾನದ ಪ್ರಸ್ತಾಪವನ್ನು ಇಟ್ಟಿದ್ದು, ಈ ಮಹತ್ವದ ರಕ್ಷಣಾ ಒಪ್ಪಂದಕ್ಕೆ ಭಾರತವು ಸಕಾರಾತ್ಮಕವಾಗಿ ಸ್ಪಂದಿಸಿದೆ.

S-500 ಪ್ರೊಮೆಥಿಯಸ್ ವಿಶೇಷತೆಗಳು

• ರಷ್ಯಾದ ಪ್ರಬಲ ಅಸ್ತ್ರಗಳಲ್ಲಿ ಒಂದಾಗಿರುವ S-500, ಪ್ರಸ್ತುತ ಭಾರತ ಬಳಸುತ್ತಿರುವ S-400 ವ್ಯವಸ್ಥೆಗಿಂತಲೂ ಹೆಚ್ಚು ಶಕ್ತಿಶಾಲಿ ಹಾಗೂ ವೇಗವಾಗಿ ಕಾರ್ಯನಿರ್ವಹಿಸುತ್ತದೆ.
• ಇದು ಸುಮಾರು 500 ರಿಂದ 600 ಕಿ.ಮೀ ವರೆಗಿನ ದೂರದ ಗುರಿಗಳನ್ನು ಹಾಗೂ ಶತ್ರುಗಳ ಅತ್ಯಾಧುನಿಕ ಹೈಪರ್ಸಾನಿಕ್ ಕ್ಷಿಪಣಿಗಳನ್ನು (Hypersonic Missiles) ಯಶಸ್ವಿಯಾಗಿ ನಿಯಂತ್ರಿಸಿ ನಾಶಪಡಿಸಬಲ್ಲದು.
• ವಾಯುಮಂಡಲದ ಮೇಲ್ಭಾಗದ ಗುರಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.
Su-57 5ನೇ ತಲೆಮಾರಿನ ಯುದ್ಧವಿಮಾನ
• ಇದೊಂದು ಅತ್ಯಾಧುನಿಕ 5ನೇ ತಲೆಮಾರಿನ ಸ್ಟೆಲ್ತ್ ಯುದ್ಧವಿಮಾನವಾಗಿದ್ದು, ಶತ್ರುಗಳ ರಾಡರ್ಗಳ ಕಣ್ತಪ್ಪಿಸಿ ನಿಖರವಾಗಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ.
• ಇದು ಕೇವಲ ಆಕಾಶದಲ್ಲಿ ಮಾತ್ರವಲ್ಲದೆ, ನೆಲದ ಮೇಲಿನ ಹಾಗೂ ಸಮುದ್ರಾಳದಲ್ಲಿರುವ ಶತ್ರುಗಳ ನೆಲೆಗಳನ್ನು ಸಂಹರಿಸುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ.
• ಈ ಅತ್ಯಾಧುನಿಕ ಯುದ್ಧವಿಮಾನವು ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡರೆ ಶತ್ರುಗಳಿಗೆ ಸಿಂಹಸ್ವಪ್ನವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಈ ಅತ್ಯಾಧುನಿಕ ಆಯುಧಗಳು ಭಾರತಕ್ಕೆ ಸೇರ್ಪಡೆಯಾಗುತ್ತಿರುವುದು ಜಾಗತಿಕವಾಗಿ ಭಾರತದ ರಕ್ಷಣಾ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ನೆರೆಹೊರೆಯ ಶತ್ರು ರಾಷ್ಟ್ರಗಳಿಗೆ ಕಠಿಣ ಸಂದೇಶವನ್ನು ರವಾನಿಸುತ್ತಿದೆ.

Exit mobile version