ಭಾರತಕ್ಕೆ ಬಂತು ಡಿಎಫ್ಸಿ ಯೋಜನೆ

ಯೋಜನೆಯಿಂದ ಮತ್ತಷ್ಟು ಪವರ್ಫುಲ್ ಆಯ್ತು ಸರಕು ಸಾಗಣೆ ಯೋಜನೆ

Untitled design (69)

ಆರ್ಥಿಕವಾಗಿ ಬಲಿಷ್ಟವಾಗಿ ಮುನ್ನುಗ್ಗುತ್ತಿರುವ ದೇಶ, ಈ ದೇಶದಲ್ಲಿ ಯಾವುದಕ್ಕೂ ಕೂಡ ಅಸಾಧ್ಯ ಎನ್ನುವಂತಿಲ್ಲ. ಅಷ್ಟರ ಮಟ್ಟಿಗೆ ಪವರ್ಫುಲ್ ಆಗಿರುವ ಭಾರತ ದೇಶ ಇದೀಗ ಸರಕು ಸಾಗಣೆ ರಂಗದಲ್ಲಿ ಮತ್ತೊಂದು ಐತಿಹಾಸಿಕ ಹೆಜ್ಜೆಯನ್ನು ಮುಂದಿಟ್ಟಿದೆ.

ಭಾರತಕ್ಕೆ ಬಂತು ಡಿಎಫ್ಸಿ ಯೋಜನೆ: ಡಿಎಫ್ಸಿ (DFC) ಎಂದರೆ ‘ಡೆಡಿಕೇಟೆಡ್ ಫ್ರೈಟ್ ಕಾರಿಡರ್’ (Dedicated Freight Corridor – ಸಮರ್ಪಿತ ಸರಕು ಸಾಗಣೆ ಕಾರಿಡಾರ್) ಎಂದರ್ಥ. ಸರಕು ಸಾಗಣೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಬಂದಿರುವ ಈ ಮಹತ್ತ್ವಾಕಾಂಕ್ಷಿ ಯೋಜನೆಯು ಇದೀಗ ದೇಶದಲ್ಲಿ ಸಂಪೂರ್ಣ ಕಾರ್ಯರೂಪಕ್ಕೆ ಬಂದಿದೆ.

30 ಗಂಟೆಗಳಲ್ಲಿ ತಲುಪುತ್ತಿದ್ದ ಸರಕು ಇನ್ಮುಂದೆ 12 ರಿಂದ 15 ಗಂಟೆಗಳಲ್ಲಿ ಡೆಲಿವರಿ: ನಮ್ಮ ಭಾರತದಲ್ಲಿ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ನಿರಂತರವಾಗಿ ಸರಕು ಸೇವೆಗಳು ಸಾಗುತ್ತಿರುತ್ತವೆ. ಉದಾಹರಣೆಗೆ; ಕರ್ನಾಟಕದಿಂದ ತಮಿಳುನಾಡಿಗೆ, ಅಲ್ಲಿಂದ ಮುಂಬೈಗೆ ಹಾಗೂ ಗುಜರಾತ್ಗೆ ಹೀಗೆ ಸರಕು ಸಾಗಣೆ ÜDefaults ದರದಲ್ಲಿ ರಸ್ತೆ ಮಾರ್ಗವಾಗಿ ಸಾಗಲು ಕನಿಷ್ಠ 48 ರಿಂದ 70 ಗಂಟೆಗಳವರೆಗೆ ಸಮಯ ಹಿಡಿಯುತ್ತಿತ್ತು. ಆದರೆ ಡಿಎಫ್ಸಿ ಕಾರಿಡಾರ್ಗಳ ಆಗಮನದಿಂದ ಈ ಚಿತ್ರಣ ಸಂಪೂರ್ಣ ಬದಲಾಗಿದೆ. ಹಿಂದೆ ಸರಕು ತಲುಪಲು 30 ಗಂಟೆಗಳವರೆಗೆ ತೆಗೆದುಕೊಳ್ಳುತ್ತಿದ್ದ ಸಮಯವು ಇನ್ಮುಂದೆ ಕೇವಲ 12 ರಿಂದ 15 ಗಂಟೆಗಳೊಳಗೆ ತಲುಪುವಂತೆ ವೇಗ ಪಡೆದುಕೊಂಡಿದೆ. ಇದರಿಂದಾಗಿ ಭಾರತದಲ್ಲಿ ಸರಕು ಸಾಗಣೆಯ ವೇಗ ಗಣನೀಯವಾಗಿ ಹೆಚ್ಚಾಗಿದೆ.

ಅತ್ಯಾಧುನಿಕ ಡಬಲ್ ಸ್ಟ್ಯಾಕ್ ಕಂಟೈನರ್ ಸಾಗಣೆ: ಈ ಒಟ್ಟು ಯೋಜನೆಯು ಸುಮಾರು 2,843 ಕಿ.ಮೀ.ಗಳಷ್ಟು ವಿಶಾಲವಾದ ದೂರದ ಜಾಲವನ್ನು ಹೊಂದಿದೆ. ಪೂರ್ವ ಮತ್ತು ಪಶ್ಚಿಮ ಕಾರಿಡಾರ್ಗಳ ಮೂಲಕ ಸರಕು ಸಾಗಣೆಯ ವೇಗ ಮತ್ತಷ್ಟು ಇಮ್ಮಡಿಗೊಂಡಿದೆ. ವಿಶೇಷವಾಗಿ ಪಶ್ಚಿಮ ಕಾರಿಡಾರ್ನಲ್ಲಿ ಜಾರಿಗೆ ಬಂದಿರುವ ‘ಡಬಲ್ ಸ್ಟ್ಯಾಕ್ ಕಂಟೈನರ್’ (ಒಂದರ ಮೇಲೆ ಮತ್ತೊಂದು ಕಂಟೈನರ್ಗಳನ್ನು ಇಟ್ಟು ಸಾಗಿಸುವ) ತಂತ್ರಜ್ಞಾನದಿಂದಾಗಿ ಒಂದೇ ಬಾರಿಗೆ ಹೆಚ್ಚಿನ ಸರಕುಗಳನ್ನು ಸಾಗಿಸಲು ಸಾಧ್ಯವಾಗಿದ್ದು, ಪ್ರಯಾಣದ ಸಮಯ ಶೇ. 70ರಷ್ಟು ಉಳಿತಾಯವಾಗುತ್ತಿದೆ. ಅಷ್ಟರ ಮಟ್ಟಿಗೆ ಈ ಯೋಜನೆ ಯಶಸ್ವಿಯಾಗಿದೆ ಎನ್ನಬಹುದು.

ಉತ್ತರ ಹಾಗೂ ದಕ್ಷಿಣದ ಭಾಗಗಳಿಗೂ ವಿಸ್ತರಣೆ: ಈ ಸರಕು ಸಾಗಣೆ ಕಾರಿಡಾರ್ನ ಪ್ರಯೋಜನವನ್ನು ಕೇವಲ ಉತ್ತರ ಭಾರತಕ್ಕೆ ಮಾತ್ರ ಸೀಮಿತಗೊಳಿಸದೆ, ಮುಂಬೈ ಸೇರಿದಂತೆ ದಕ್ಷಿಣ ಭಾರತದ ಹುಬ್ಬಳ್ಳಿ, ಚೆನ್ನೈ ಮತ್ತು ವಿಶಾಖಪಟ್ಟಣದಂತಹ ಪ್ರಮುಖ ನಗರಗಳಿಗೂ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಇದು ದೇಶದ ಆರ್ಥಿಕ ಪ್ರಗತಿಗೆ ಮತ್ತಷ್ಟು ಬಲ ತುಂಬಲಿದೆ.

Exit mobile version