ಗಡಿಯಲ್ಲಿ ಶುರುವಾಯ್ತು ಚೀನಾ ಕಿರಿಕ್: ಚೀನಾ ಮೇಲೆ ಆಕ್ರಮಣಕ್ಕೆ ಮುಂದಾಗತ್ತ ಭಾರತ

Untitled design (34)

ಭಾರತದ ಶತ್ರು ದೇಶಗಳಲ್ಲಿ ಮುಂಚೂಣಿಯಲ್ಲಿರುವ ಚೀನಾವನ್ನು ಕಂಡರೆ ಭಾರತ ಯಾವಾಗಲೂ ಎಚ್ಚರಿಕೆಯಿಂದಿರುತ್ತದೆ. ಅದರಲ್ಲೂ 1962ರ ಭಾರತ-ಚೀನಾ ಯುದ್ಧದ ಕಹಿ ನೆನಪುಗಳನ್ನು ಭಾರತೀಯರು ಎಂದಿಗೂ ಮರೆಯುವುದಿಲ್ಲ. ರಾತ್ರಿಯ ವೇಳೆ ಗಡಿ ಕಾಯುತ್ತಿದ್ದ ನಮ್ಮ ಯೋಧರ ಮೇಲಿನ ಆಕ್ರಮಣ ಹಾಗೂ 2020ರ ಗಲ್ವಾನ್ ಕದನದಲ್ಲಿ ನಮ್ಮ ವೀರಯೋಧರು ತೋರಿದ ಶೌರ್ಯವನ್ನು ಇಂದಿಗೂ ದೇಶ ಸ್ಮರಿಸುತ್ತದೆ. ಇಂತಹ ಚೀನಾ ಇದೀಗ ಮತ್ತೆ ಭಾರತದ ಗಡಿಯಲ್ಲಿ ಕ್ಯಾತೆ ತೆಗೆದಿದೆ ಎನ್ನಲಾಗಿದೆ.

ಭೂಮಿಯ ಮೇಲೆ ಕೈಲಾಗದೇ ಆಕಾಶದ ಮೇಲೆ ಗೂಡಾಚಾರಿಕೆಗೆ ಮುಂದಾಯ್ತಾ ಚೀನಾ? ಗಲ್ವಾನ್ ವಾರ್ನ ನಂತರ ಕೊಂಚ ತೆಪ್ಪಗಾಗಿದ್ದ ಚೀನಾ ಇದೀಗ ಭಾರತದ ಮೇಲೆ ಮತ್ತೆ ಕತ್ತಿ ಮಸೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಗಲ್ವಾನ್ ಘಟನೆಯ ನಂತರ ತುಸು ಮೌನವಾಗಿದ್ದ ಚೀನಾ, ಈಗ ಮತ್ತೆ ಗಡಿಯಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸುವ ಹುನ್ನಾರ ನಡೆಸಿದೆ.

ಗಡಿಯಲ್ಲಿ ಅಲರ್ಟ್ ಆದ ಮಾರಕ ‘ಘಾತಕ್ ಪಡೆ’:

ಚೀನಾ ಗಡಿಯಲ್ಲಿ ತನ್ನ ಅಟ್ಟಹಾಸವನ್ನು ಶುರುಮಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಭಾರತೀಯ ಸೇನೆಯು, ಆ ಸೂಕ್ಷ್ಮ ಪ್ರದೇಶದಲ್ಲಿ ತನ್ನ ಅತ್ಯಂತ ಶಕ್ತಿಶಾಲಿ ಹಾಗೂ ಮಾರಕ ಪಡೆಯಾದ ‘ಘಾತಕ್ ಪಡೆ’ಯನ್ನು ನಿಯೋಜಿಸಿದೆ. ಈ ವಿಶೇಷ ಪಡೆ ಗಡಿಯಲ್ಲಿ ನಿಯೋಜನೆಗೊಂಡಿರುವುದು ಚೀನೀ ಸೈನಿಕರಿಗೆ ನಡುಕ ಹುಟ್ಟಿಸಿದೆ ಎಂದೇ ಹೇಳಬಹುದು.

ಗಡಿಗೆ ಬಂತು AWACS ವಿಮಾನಗಳು:

ಗಡಿಯಲ್ಲಿ ಚೀನಾದ ಕಣ್ಣುಮುಚ್ಚಾಲೆಯಾಟ ಹಾಗೂ ವಾಯು ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಲು, ಭಾರತೀಯ ಸೇನೆಯು AWACS (Airborne Warning and Control System) ಗೂಡಾಚಾರಿಕೆ ಹಾಗೂ ವಾಯು ಎಚ್ಚರಿಕೆ ವಿಮಾನಗಳನ್ನು ಕಣಕ್ಕಿಳಿಸಿದ್ದು, ಗಸ್ತನ್ನು ತೀವ್ರಗೊಳಿಸಿದೆ.

ಘಾತಕ್ ಪಡೆ ಎಂದರೇನು? ಅವರ ಕೆಲಸಗಳೇನು? ‘ ಘಾತಕ್’ ಎನ್ನುವುದು ಪ್ರತಿಯೊಂದು ಭಾರತೀಯ ಸೇನಾ ಇನ್ಫೆಂಟ್ರಿ ಬೆಟಾಲಿಯನ್ನಲ್ಲಿರುವ ಅತ್ಯಂತ ಕಠಿಣ ತರಬೇತಿ ಪಡೆದ ವಿಶೇಷ ಆಕ್ರಮಣಕಾರಿ ಕಮಾಂಡೋ ತಂಡವಾಗಿದೆ. ಮಾರ್ಷಲ್ ಆರ್ಟ್ಸ್, ಕರಾಟೆ ಸೇರಿದಂತೆ ಅತ್ಯಾಧುನಿಕ ಯುದ್ಧ ಕೌಶಲಗಳನ್ನು ಕಲಿತಿರುವ ಇವರನ್ನು ಎದುರಿಸುವುದು ಚೀನೀ ಸೈನಿಕರಿಗೆ ಸುಲಭದ ಮಾತಲ್ಲ. ಸದ್ಯ ಚೀನಾದ ಯಾವುದೇ ದುಸ್ಸಾಹಸವನ್ನು ಮೆಟ್ಟಿನಿಲ್ಲಲು ಈ ಘಾತಕ್ ಪಡೆ ಸಂಪೂರ್ಣವಾಗಿ ಸಜ್ಜಾಗಿದೆ.

ಒಟ್ಟಿನಲ್ಲಿ ಗಡಿಯಲ್ಲಿ ಇತ್ತಿಚೇಗೆ ಚೀನಾದ ತಂಟೆ ಭಾರೀ ಜೋರಾಗಿದ್ದು, ಮುಂದೆ ಇದು ಎಲ್ಲಿವರೆಗೆ ಕೊಂಡುಯುತ್ತದೆ ಎಂಬುದನ್ನ ಕಾದು ನೋಡಬೇಕಾಗಿದೆ…

Exit mobile version