ಗರೀಬ್ ರಥ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಅವಘಡ: ಅದೃಷ್ಟವಶಾತ್ ಪ್ರಯಾಣಿಕರು ಸೇಫ್‌..!

Untitled design 2025 10 18t131104.315

ಚಂಡೀಗಢ: ಪಂಜಾಬ್‌ನ ಸಿರ್ಹಿಂದ್ ರೈಲು ನಿಲ್ದಾಣದಲ್ಲಿ ಬೆಳಗ್ಗೆ ಭಯಾನಕ ರೈಲು ಅವಘಡ ನಡೆದಿದೆ. ಅಮೃತಸರದಿಂದ ಸಹರ್ಸಾಕ್ಕೆ ಹೊರಟಿದ್ದ ಗರೀಬ್ ರಥ ಎಕ್ಸ್ಪ್ರೆಸ್ (ರೈಲು ಸಂಖ್ಯೆ 12204) ನ 2-3 ಎಸಿ ಕೋಚ್‌ಗಳಲ್ಲಿ ಬೆಳಗ್ಗೆ 7.30 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ.

ಈ ಸಮಯದಲ್ಲಿ ಪ್ರಯಾಣಿಕರು ತಕ್ಷಣ ಸರಪಳಿ ಎಳೆದು ರೈಲನ್ನು ನಿಲ್ಲಿಸಿದ್ದಾರೆ. ನಂತರ ರೈಲು ಚಾಲಕರು ಎಲ್ಲಾ ಪ್ರಯಾಣಿಕರನ್ನು ತ್ವರಿತವಾಗಿ ರೈಲಿನಿಂದ ಇಳಿಯುವಂತೆ ತಿಳಿಸಿ, ತ್ವರಿತವಾಗಿ ಪ್ರಯಾಣಿಕರೆಲ್ಲಾ ರೈಲಿನಿಂದ ಹೊರಗೆ ಬಂದರು. ಘಟನೆಯಲ್ಲಿ ಯಾವುದೇ ಪ್ರಣಾಪಾಯವಾಗಿಲ್ಲ ಎಂದು ತಿಳಿದುಬಂದಿದೆ.ತಕ್ಷಣ ರೈಲ್ವೆ ನಿಲ್ದಾಣದ ಅಧಿಕಾರಿಗಳು, ಜಿಆರ್‌ಪಿ, ಆರ್‌ಪಿಎಫ್‌ ಮತ್ತು ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ  ಭೇಟಿ ನೀಡಿದರು. ಬಳಿಕ ಅಗ್ನಿಶಾಮಕ ದಳದ ಸಹಾಯದಿಂದ ಬೆಮಕಿಯನ್ನ ಆರಿಸಲಾಯಿತು. 

ಗೊಂದಲದ ಪರಿಸ್ಥಿತಿಯಲ್ಲಿ ರೈಲಿನಿಂದ ಇಳಿಯಲು ಪ್ರಯತ್ನಿಸಿದ ಕೆಲವು ಪ್ರಯಾಣಿಕರಿಗೆ ಸಣ್ಣ ಗಾಯಗಳಾಗಿದೆ. ಗಾಯಗೊಂಡವರಿಗೆ ತಕ್ಷಣ ಪ್ರಥಮ ಚಿಕಿತ್ಸೆ ನೀಡಲಾಗಿದೆ. ರೈಲ್ವೆ ಅಧಿಕಾರಿಗಳು ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ.

ಬೆಂಕಿ ಕಾರಣದ ಬಗ್ಗೆ ವಿಚಾರಣೆ ಆರಂಭವಾಗಿದೆ. ರೈಲ್ವೆ ಪೊಲೀಸ್ ಘಟನೆಯ ಸಂಪೂರ್ಣ ವಿವರವನ್ನು ದಾಖಲಿಸಿದ್ದಾರೆ. ಹಿಂಜರಿತ ವ್ಯವಸ್ಥೆಯ ದೋಷ ಅಥವಾ ವಿದ್ಯುತ್ ತಂತಿ ಚಪ್ಪಟೆಯಾಗುವುದೇ ಈ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆದರೆ ಅಂತಿಮ ವರದಿ ಬರುವವರೆಗೆ ಏನು ಕಾರಣ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.ರೈಲ್ವೆ ಅಧಿಕಾರಿ ಒಬ್ಬರು ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ, “ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಘಟನೆಯ ಕಾರಣ ತನಿಖೆಯಲ್ಲಿ ಇದೆ” ಎಂದು ತಿಳಿಸಿದ್ದಾರೆ.

Exit mobile version