80ನೇ ಸ್ವಾತಂತ್ರ್ಯ ದಿನೋತ್ಸವ: ಕರ್ನಾಟಕದ 17 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಘೋಷಣೆ

Untitled design 2026 08 14T130421.598

ದೇಶದ 80ನೇ ಸ್ವಾತಂತ್ರ್ಯ ದಿನೋತ್ಸವದ (ಆಗಸ್ಟ್‌ 15) ಅಂಗವಾಗಿ ಕೇಂದ್ರ ಗೃಹ ಸಚಿವಾಲಯವು ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಹಾಗೂ ಶ್ಲಾಘನೀಯ ಸೇವೆ ಸಲ್ಲಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನೀಡಲಾಗುವ ಪ್ರತಿಷ್ಠಿತ ‘ರಾಷ್ಟ್ರಪತಿ ಪೊಲೀಸ್ ಪದಕ–2026’ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಒಟ್ಟು 17 ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದು, ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.

ಪ್ರಶಸ್ತಿಯು ಪೊಲೀಸ್ ಇಲಾಖೆಯಲ್ಲಿ ಕರ್ತವ್ಯನಿಷ್ಠೆ, ವೃತ್ತಿಪರತೆ, ಜನಸೇವೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನೀಡಿದ ಅಮೂಲ್ಯ ಕೊಡುಗೆಯನ್ನು ಗುರುತಿಸಿ ನೀಡಲಾಗುವ ಅತ್ಯುನ್ನತ ಗೌರವಗಳಲ್ಲಿ ಒಂದಾಗಿದೆ. ರಾಜ್ಯದ ವಿವಿಧ ಕಮಿಷನರೇಟ್‌ಗಳು, ಜಿಲ್ಲೆಗಳು ಹಾಗೂ ವಿಶೇಷ ಘಟಕಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ಈ ಬಾರಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ಬೆಂಗಳೂರು ನಗರದ ಕೇಂದ್ರೀಯ ಅಪರಾಧ ವಿಭಾಗದ (CCB) ಸಹಾಯಕ ಪೊಲೀಸ್ ಕಮಿಷನರ್ ಹೆಚ್.ಎನ್. ಧರ್ಮೇಂದ್ರ ಅವರಿಗೆ ಪೊಲೀಸ್ ಪಡೆಯಲ್ಲಿ ಸಲ್ಲಿಸಿದ ಸುದೀರ್ಘ ಹಾಗೂ ಅತ್ಯಂತ ವಿಶಿಷ್ಟ ಸೇವೆಯನ್ನು ಪರಿಗಣಿಸಿ ‘ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ’ ಪ್ರದಾನ ಮಾಡಲಾಗಿದೆ.

ಅಪರಾಧ ತನಿಖೆ, ಸಂಘಟಿತ ಅಪರಾಧ ನಿಯಂತ್ರಣ ಹಾಗೂ ಹಲವು ಮಹತ್ವದ ಪ್ರಕರಣಗಳ ಯಶಸ್ವಿ ತನಿಖೆಯಲ್ಲಿ ಅವರು ನೀಡಿದ ಕೊಡುಗೆ ಈ ಗೌರವಕ್ಕೆ ಕಾರಣವಾಗಿದೆ.

16 ಮಂದಿಗೆ ರಾಷ್ಟ್ರಪತಿ ಪದಕ

ವಿಶಿಷ್ಟ ಸೇವಾ ಪದಕದ ಜೊತೆಗೆ ರಾಜ್ಯದ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿರುವ 16 ಅಧಿಕಾರಿಗಳು ಮತ್ತು ಸಿಬ್ಬಂದಿಗೆ ‘ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ’ ಘೋಷಿಸಲಾಗಿದೆ.

ಪುರಸ್ಕೃತರ ಪಟ್ಟಿ ಹೀಗಿದೆ

ರಾಜ್ಯದ 17 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಈ ಅಪರೂಪದ ಸಾಧನೆಗೆ ಸಾರ್ವಜನಿಕ ವಲಯದಿಂದಲೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

  • ಜ್ಞಾನದೇವ್ ನವಲ ತರಾಸೆ –ಎಆರ್‌ಎಸ್‌ಐ, ಕೆಎಸ್‌ಆರ್‌ಪಿ
  • ಮಹದೇವಸ್ವಾಮಿ – ಹೆಡ್ ಕಾನ್ಸ್‌ಟೇಬಲ್, ವಿಧಾನಸೌಧ ಭದ್ರತಾ ವಿಭಾಗ
  • ಸಾರಾ ಫಾತಿಮಾ –ಎಸ್ಪಿ, ರೈಲ್ವೇ ಪೊಲೀಸ್, ಬೆಂಗಳೂರು
  • ಥಾಮಸ್ ಮ್ಯಾಥ್ಯೂ- ಕಮಾಂಡೆಂಟ್, ಕೆಎಸ್‌ಆರ್‌ಪಿ
  • ಮಹಾದೇವ್ – ಎಸಿಪಿ, ಆಗ್ನೇಯ ಸಂಚಾರ ವಿಭಾಗ, ಬೆಂಗಳೂರು
  • ಪರಮಾನಂದ್ – ಡಿವೈಎಸ್ಪಿ, ಡಿಎಆರ್, ರಾಯಚೂರು
  • ಷಣ್ಮುಗವರ್ಮಾ- ಪೊಲೀಸ್ ಇನ್ಸ್‌ಪೆಕ್ಟರ್, ಪೊಲೀಸ್ ತರಬೇತಿ ಶಾಲೆ, ಮೈಸೂರು
  • ಗುರುಪ್ರಸಾದ್ ಗೋಪಾಲ್ ನಾಯಕ್ – ಪೊಲೀಸ್ ಇನ್ಸ್‌ಪೆಕ್ಟರ್, ಸಿಐಡಿ
  • ಮಾರಿಯಾ ಜೋಸೆಫ್ ದಿನೇಶ್ ಕುಮಾರ್ – ಹೆಡ್ ಕಾನ್ಸ್‌ಟೇಬಲ್, ಡಿಸಿಆರ್‌ಇ, ಕೆಜಿಎಫ್
  • ಚಂದ್ರಶೇಖರ ಚಿಕ್ಕಣ್ಣನವರ್ – ಹೆಡ್ ಕಾನ್ಸ್‌ಟೇಬಲ್, ಕೆಎಸ್‌ಆರ್‌ಪಿ
  • ಅಬ್ದುಲ್ ಕಮಾಲ್ – ಹೆಡ್ ಕಾನ್ಸ್‌ಟೇಬಲ್, ತರೀಕೆರೆ ಪೊಲೀಸ್ ಠಾಣೆ
  • ನಾಗೇಶ್ ಮಚ್ಚಯ್ಯ – ಹೆಡ್ ಕಾನ್ಸ್‌ಟೇಬಲ್, ಸಿಐಡಿ
  • ಮನೋಹರ್ – ಪೊಲೀಸ್ ಕಾನ್ಸ್‌ಟೇಬಲ್, ಹುಣಸೂರು ಪೊಲೀಸ್ ಠಾಣೆ
  • ನಯೀಂ –ರಿಸರ್ವ್ ಪೊಲೀಸ್ ಇನ್ಸ್‌ಪೆಕ್ಟರ್, ರಾಜಭವನ
  • ಶ್ರೀನಿವಾಸ – ಪಿಎಸ್‌ಐ, ಕೆ.ಪಿ. ಅಗ್ರಹಾರ ಠಾಣೆ, ಬೆಂಗಳೂರು
  • ಭಾವುದ್ದೀನ್ ರುಕ್ಮುದ್ದೀನ್ – ಪೊಲೀಸ್ ಇನ್ಸ್‌ಪೆಕ್ಟರ್, ಮಾಳಮಾರುತಿ ಠಾಣೆ, ಬೆಳಗಾವಿ
Exit mobile version