ಭಾರತಕ್ಕೆ ಬರುತ್ತಾ 6ನೇ ತಲೆಮಾರಿನ ಯುದ್ಧ ವಿಮಾನಗಳು?

ಬಲಿಷ್ಠ (42)

ಭಾರತವಿಂದು ಕೇವಲ ಆರ್ಥಿಕವಾಗಿ ಬೆಳೆಯುತ್ತಿರುವ ದೇಶವಲ್ಲ, ಬದಲಾಗಿ ಜಾಗತಿಕ ರಕ್ಷಣಾ ವಲಯದಲ್ಲಿ ಪ್ರಮುಖ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ವಿಶ್ವದ ಪ್ರಭಾವಿ ದೇಶಗಳು ಭಾರತದ ರಾಜತಾಂತ್ರಿಕ ನಡೆಯನ್ನು ಗೌರವಿಸುತ್ತಿದ್ದು, ಹಲವು ದೇಶಗಳಿಗೆ ಭಾರತದ ಈ ಸೈನಿಕ ಸನ್ನದ್ಧತೆ ನಡುಕ ಹುಟ್ಟಿಸುತ್ತಿದೆ. ಇದಕ್ಕೆ ಮತ್ತೊಂದು ಸಾಕ್ಷಿ ಎಂಬಂತೆ, ಫ್ರಾನ್ಸ್ ದೇಶವು ತನ್ನ ಭವಿಷ್ಯದ 6ನೇ ತಲೆಮಾರಿನ ಯುದ್ಧ ವಿಮಾನ ಯೋಜನೆ ‘ಫ್ಯೂಚರ್ ಕಾಂಬ್ಯಾಟ್ ಏರ್ ಸಿಸ್ಟಮ್’ (FCAS) ಆಫರ್ ಅನ್ನು ಭಾರತಕ್ಕೆ ನೀಡಲು ಮುಂದಾಗಿದೆ.

ಏನಿದು ಫ್ರಾನ್ಸ್ನ FCAS ಯೋಜನೆ?

ಆರಂಭದಲ್ಲಿ ಫ್ರಾನ್ಸ್, ಜರ್ಮನಿ ಮತ್ತು ಸ್ಪೇನ್ ದೇಶಗಳು ಜಂಟಿಯಾಗಿ ಈ 6ನೇ ತಲೆಮಾರಿನ ಯುದ್ಧ ವಿಮಾನ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದ್ದವು. ಆದರೆ ಯೋಜನೆ ಹಂಚಿಕೆಯಲ್ಲಿ ಉಂಟಾದ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ, ಫ್ರಾನ್ಸ್ ಈಗ ಭಾರತದಂತಹ ಪ್ರಬಲ ಮತ್ತು ಭರವಸೆಯ ಪಾಲುದಾರ ರಾಷ್ಟ್ರಕ್ಕೆ ಈ ಆಫರ್ ನೀಡಲು ಮುಂದಾಗಿದೆ. ಈ ಆಹ್ವಾನವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ರಕ್ಷಣಾ ಗೌರವ ಮತ್ತು ಪ್ರಭಾವವನ್ನು ಮತ್ತಷ್ಟು ಹೆಚ್ಚಿಸಿದೆ.

ಭಾರತೀಯ ವಾಯುಪಡೆಗೆ ಸಿಗಲಿದೆ ಅಪಾರ ಶಕ್ತಿ: ಒಂದು ವೇಳೆ ಈ ಒಪ್ಪಂದಕ್ಕೆ ಭಾರತ ಸಹಿ ಹಾಕಿದರೆ, ಭಾರತೀಯ ವಾಯುಪಡೆಯ (IAF) ಶಕ್ತಿ ಬಹುಪಟ್ಟು ಹೆಚ್ಚಾಗಲಿದೆ. ಪ್ರಸ್ತುತ ಅಮೆರಿಕ, ಚೀನಾ ಮತ್ತು ರಷ್ಯಾದಂತಹ ಬೆರಳೆಣಿಕೆಯ ದೇಶಗಳ ಬಳಿ ಮಾತ್ರ ಇಂತಹ ಸುಧಾರಿತ ತಂತ್ರಜ್ಞಾನದ ವಿಮಾನಗಳಿವೆ. ಈ ಯೋಜನೆಯಿಂದಾಗಿ ಭಾರತವು.

ಫ್ರಾನ್ಸ್ ನೀಡಿರುವ ಈ ಆಫರ್ ಭಾರತದ ರಕ್ಷಣಾ ವಲಯಕ್ಕೆ ದೊರೆತ ಅತ್ಯಂತ ಆಶಾದಾಯಕರ ಮತ್ತು ಮಹತ್ವದ ಬೆಳವಣಿಗೆಯಾಗಿದೆ. ಇದು ಭಾರತವನ್ನು ಏಷ್ಯಾ ಖಂಡದ ಅತ್ಯಂತ ಶಕ್ತಿಶಾಲಿ ವಾಯುಪಡೆಯನ್ನಾಗಿ ಪರಿವರ್ತಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

Exit mobile version