ಕಲಬುರಗಿ : ಕಾಂಗ್ರೆಸ್ನಲ್ಲಿ ಭಾರತ ಮಾತೆಗೆ ಜೈಕಾರ ಹಾಕಲೂ, ಅನುಮತಿ ಪಡೆಯಬೇಕಾದ ಸ್ಥಿತಿ ಇದೆ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿಗೆ ಪ್ರೀತಮ್ ಗೌಡ ತಿರುಗೇಟು ನೀಡಿದ್ದಾರೆ. ಲಕ್ಷ್ಮಣ ಸವದಿ ಅವರೇ, ಎಂಥ ಗುಲಾಮಗಿರಿ ಪಕ್ಷಕ್ಕೆ ಹೋಗಿದ್ದೀರಲ್ಲ ನಿಮ್ಮ ಬಗ್ಗೆ ಮರುಕವಿದೆ ಅಂತಾ ಪ್ರೀತಮ್ ಗೌಡ ಪೋಸ್ಟ್ ಮಾಡಿದ್ರು. ಬಿಜೆಪಿ ನಾಯಕರ ಟೀಕೆಗಳಿಗೆ ತಿರುಗೇಟು ಕೊಟ್ಟಿರುವ ಲಕ್ಷ್ಮಣ ಸವದಿ, “ಭಾರತ್ ಮಾತಾ ಕಿ ಜೈ ಎಂಬ ಘೋಷಣೆಯು ಬಿಜೆಪಿ ಮನೆ ಆಸ್ತಿನಾ” ಎಂದು ಸವದಿ ಪ್ರಶ್ನಿಸಿದ್ದಾರೆ.
ಕಲಬುರಗಿಯ ಸಮಾವೇಶದಲ್ಲಿ ಮಾತನಾಡಿದ ಲಕ್ಷ್ಮಣ್ ಸವದಿ, ವಿನಾಶಕಾಲೆ ವಿಪರೀತ ಬುದ್ದಿ ಎಂಬಂತಹ ಸ್ಥಿತಿ ಬಿಜೆಪಿಗೆ ಬಂದಿದೆ. ಭಾರತ್ ಮಾತಾ ಕಿ ಜೈ ಅನ್ನೋದು ದೇಶದ ಪ್ರತಿಯೊಬ್ಬ ಪ್ರಜೆಯ ಹಕ್ಕು, ಅಭಿಮಾನ ಹಾಗೂ ದೇಶಭಕ್ತಿಯಾಗಿದೆ. ಕಾಂಗ್ರೆಸ್ನಲ್ಲಿ ಭಾರತ್ ಮಾತಾ ಕಿ ಜೈ ಎನ್ನುತ್ತೇವೆ. ದೇಶಭಕ್ತಿ ಘೋಷಣೆಗಳು ಬಿಜೆಪಿಯವರಿಗೆ ಗುತ್ತಿಗೆ ಕೊಡಲಾಗಿದೆಯೇ? ವಂದೇ ಮಾತರಂ ಹಾಗೂ ಜೈ ಹಿಂದೂ ಎಂದು ಕೂಡ ಎನ್ನುತ್ತೇವೆ. ನಮ್ಮಲ್ಲಿ ಅವರಿಗಿಂತ ದೇಶಭಕ್ತಿ ಹೆಚ್ಚಿದೆ ಎಂದು ಸವದಿ ಟಾಂಗ್ ಕೊಟ್ಟಿದ್ದಾರೆ.