ಸಾಮಾನ್ಯವಾಗಿ ನಾವು ಲೋನ್‌ಗಳ ಬಗ್ಗೆ ಮಾತನಾಡುವಾಗ, ಮನೆ, ಕಾರು, ಬೈಕ್ ಮುಂತಾದವು ನೆನಪಿಗೆ ಬರುತ್ತವೆ. ಆದರೆ ಇತ್ತೀಚೆಗೆ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮದುವೆಗಾಗಿ ಲೋನ್ ತೆಗೆದುಕೊಳ್ಳುವುದು ಹೊಸ ಟ್ರೆಂಡ್ ಶುರುವಾಗಿದೆ. ಅದ್ದೂರಿ ಮದುವೆಯ ಕನಸು ಹೊಂದಿರುವವರು ಇದೀಗ ವೆಡ್ಡಿಂಗ್ ಲೋನ್ ಮೂಲಕ ತಮ್ಮ ಕನಸುಗಳು ನನಸಾಗಿಸಿಕೊಳ್ಳುತ್ತಿದ್ದಾರೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ಮದುವೆಗಾಗಿ ಇಎಂಐ ಆಧಾರಿತ ಸಾಲ ಪಡೆಯುವುದು ಸಾಮಾನ್ಯವಾಗುತ್ತಿದೆ. ಮದುವೆ ಎಂಬುದು ದಿಢೀರ್ ನಿರ್ಧಾರವಾಗುವ ಸಂದರ್ಭಗಳಲ್ಲಿ ಖರ್ಚು ನಿರ್ವಹಿಸುವುದು ಸವಾಲಾಗಬಹುದು. ಖರ್ಚು ಹೆಚ್ಚು ಆದರೆ ಸಿದ್ಧತೆಗಳಿಗೆ ಹಣ ಕಡಿಮೆ ಇದ್ದರೆ ಈ ಟ್ರೆಂಡ್ ಸಾಕಷ್ಟು ಉಪಯುಕ್ತವಾಗಿದೆ.
ಮದುವೆಗಾಗಿ ಲೋನ್ ಎಲ್ಲಿ ಸಿಗುತ್ತೆ?
ಈ ಮದುವೆ ಲೋನ್‌ಗಳನ್ನು ನೀಡುತ್ತಿರುವವರು ವೇಡ್ಡಿಂಗ್ ಪ್ಲಾನರ್‌ಗಳು, ಖಾಸಗಿ ಫೈನಾನ್ಸ್ ಕಂಪನಿಗಳು ಮತ್ತು ಕೆಲವು ಬ್ಯಾಂಕ್‌ಗಳೂ ಸಹ. ಕೆಲವೊಂದು ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಗಳು ತಮ್ಮ ವೆಡ್ಡಿಂಗ್ ಪ್ಯಾಕೇಜ್‌ಗಳೊಂದಿಗೆ ಲೋನ್ ವ್ಯವಸ್ಥೆಗೂ ಸಹ ಕೈಜೋಡಿಸುತ್ತಿವೆ. ಗ್ರಾಹಕರಿಗೆ ಬೇಕಾದಷ್ಟು ಮೊತ್ತವನ್ನು ಇಎಂಐ ಮೂಲಕ ಮರುಪಾವತಿ ಮಾಡುವ ಮೂಲಕ ಸೌಲಭ್ಯ ಕಲ್ಪಿಸಲಾಗುತ್ತಿದೆ.
ಈ ಲೋನ್ ಹೇಗೆ ಕೆಲಸ ಮಾಡುತ್ತದೆ?
ವೇಡ್ಡಿಂಗ್ ಪ್ಲಾನರ್‌ಗಳು ತಮ್ಮ ಗ್ರಾಹಕರಿಗೆ ಒಂದು ಪ್ಯಾಕೇಜ್ ಆಫರ್ ಮಾಡುತ್ತಾರೆ. ಈ ಪ್ಯಾಕೇಜ್‌ನಲ್ಲಿ ಹೋಟೆಲ್ ಬುಕ್ಕಿಂಗ್, ಅತಿಥಿಗಳ ವ್ಯವಸ್ಥೆ, ಡೆಕೋರೇಷನ್, ಫೋಟೋಗ್ರಫಿ, ಮ್ಯೂಸಿಕ್, ಭೋಜನ ಮುಂತಾದ ಎಲ್ಲ ವ್ಯವಸ್ಥೆ ಒಳಗೊಂಡಿರುತ್ತದೆ. ಒಟ್ಟಾರೆ ಖರ್ಚನ್ನು ಲೋನ್ ರೂಪದಲ್ಲಿ ಪಡೆಯಬಹುದು. ನಂತರ ಅದನ್ನು ತಿಂಗಳಲ್ಲಿ ಮರುಪಾವತಿ ಮಾಡಬಹುದು.
ಸಾಲಕ್ಕೆ ಬೇಕಾಗುವ ಡಾಕ್ಯುಮೆಂಟುಗಳು
ವೇಡ್ಡಿಂಗ್ ಲೋನ್ ಪಡೆಯಲು ಕೆಲವೊಂದು ಸಾಮಾನ್ಯ ದಾಖಲೆಗಳು ಅಗತ್ಯವಿರುತ್ತವೆ. ಆದಾಯ ಪ್ರಮಾಣಪತ್ರ, ಬ್ಯಾಂಕ್ ಸ್ಟೇಟ್ಮೆಂಟ್, ಗುರುತಿನ ದಾಖಲೆ, ವಿಳಾಸದ ದೃಢೀಕರಣ ಮತ್ತು ಕೆಲವೊಮ್ಮೆ ಮದುವೆಯ ದಿನಾಂಕದ ದೃಢೀಕರಣ ಪತ್ರ. ಲೋನ್ ನೀಡುವ ಸಂಸ್ಥೆ ಪ್ರಕಾರ ನಿಯಮಗಳು ವಿಭಿನ್ನವಾಗಿರಬಹುದು.
ಬಡ್ಡಿದರ ಮತ್ತು ಅವಧಿ
ಈ ಇಎಂಐ ಲೋನ್‌ಗಳಿಗೆ ಸಾಮಾನ್ಯವಾಗಿ 10% ರಿಂದ 20% ನಡುವಿನ ಬಡ್ಡಿದರ ಇರಬಹುದು. ಬಡ್ಡಿದರ ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ಕಂಪನಿಯ ನೀತಿಗಳ ಮೇಲೆ ಆಧಾರಿತವಾಗಿರುತ್ತದೆ. ಸಾಮಾನ್ಯವಾಗಿ 6 ತಿಂಗಳುಗಳಿಂದ 3 ವರ್ಷಗಳವರೆಗೆ ಅವಧಿಯಲ್ಲಿ ಲೋನ್ ಮರುಪಾವತಿ ಮಾಡಬಹುದಾಗಿದೆ.
ಮದುವೆ ಸೀಸನ್ ಮತ್ತು ಲೋನ್ ಅಗತ್ಯ
ಈ ವರ್ಷದ ಮದುವೆ ಸೀಸನ್‌ನಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಮದುವೆಗಳು ಬೆಂಗಳೂರಿನಲ್ಲಿ ನಡೆಯಲಿವೆ ಎಂಬ ಅಂದಾಜು ಇದೆ. ಇಷ್ಟೊಂದು ಮದುವೆಗಳಲ್ಲಿ ಬಹುತೆಕ ಜನರು ಹಣದ ಕೊರತೆಗೆ ಸಿಲುಕುವ ಸಾಧ್ಯತೆ ಹೆಚ್ಚು. ಈ ಕಾರಣದಿಂದ ಮದುವೆ ಸಾಲಗಳ ಬೇಡಿಕೆ ಹೆಚ್ಚಾಗುತ್ತಿದೆ.
ಮೊದಲು ಫೋನ್, ಬೈಕ್, ಕಾರು, ಮನೆ ಸಾಲ ಪಡೆದವರೇ ಈಗ ಮದುವೆಗೂ ಸಾಲ ಪಡೆಯುತ್ತಿದ್ದಾರೆ ಎಂಬುದು ಸಮಾನ್ಯ ಸಂಗತಿ. ಆದರೆ ಮದುವೆ ಎಂಬುದು ಜೀವನದ ಮಹತ್ವದ ಘಟನೆಯಾದರೂ, ಸಾಲದ ಒತ್ತಡದಿಂದ ಜೀವನದ ಗತಿಯೇ ಬದಲಾಗಬಾರದು. ಆದ್ದರಿಂದ ಮದುವೆ ಲೋನ್ ತೆಗೆದುಕೊಳ್ಳುವ ಮೊದಲು ಸರಿಯಾದ ಯೋಜನೆ, ಲೆಕ್ಕಚಾರ ಮತ್ತು ಬಡ್ಡಿದರಗಳ ಪರಿಶೀಲನೆ ಅಗತ್ಯವಿದೆ. ಹೊಚ್ಚ ಹೊಸ ಟ್ರೆಂಡ್ ಆಗಿರುವ ಈ ಮದುವೆ ಲೋನ್ ನಿಮ್ಮ ಕನಸಿನ ಮದುವೆಗೆ ನೆರವಾಗಬಹುದು, ಆದರೆ ಜವಾಬ್ದಾರಿಯುತವಾಗಿ ಬಳಸಿದರೆ ಮಾತ್ರ.
ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
- Tata Play-1665
- U-Digital-ಮೈಸೂರು-160
- Metro Cast Network-ಬೆಂಗಳೂರು-ಬೆಳಗಾವಿ-30-828
- V4 digital network-623
- Abhishek network-817
- Malnad Digital network-45
- JBM network-ರಾಮದುರ್ಗ-54
- Channel net nine-ಧಾರವಾಡ-128
- Basava cable network-ಚಳ್ಳಕೆರೆ-54
- City channel network– ಚಳ್ಳಕೆರೆ-54
- RST digital-ಕಾರ್ಕಳ-101
- Vinayak cable-ಪಟ್ಟನಾಯಕನಹಳ್ಳಿ-54
- Mubarak digital-ಸಂಡೂರು-54
- SB cable-ಸವದತ್ತಿ-54
- Bhosale network-ವಿಜಯಪುರ-54
- Surya digital-ಜಗಳೂರು-54
- Gayatri network-ಸಿಂಧನೂರು-54
- Global vision-ದಾವಣಗೆರೆ-54
- Janani cable-ಮಂಡ್ಯ-54
- Hira cable-ಬೆಳಗಾವಿ-ಹುಬ್ಬಳ್ಳಿ-54
- UDC network-ಹಾರೋಗೇರಿ-54
- Moka cable-ಬಳ್ಳಾರಿ-100
- CAN network-ಚಿಕ್ಕೋಡಿ-54
- KK digital-ಗಂಗಾವತಿ-54
- Victory network-ದಾವಣಗೆರೆ-54





