ತುಮಕೂರು ದಸರಾ: ಕಾರ್ಯಕ್ರಮದಲ್ಲಿ ಸಿಹಿಸುದ್ದಿ ಕೊಟ್ಟ ನಟಿ ರಮ್ಯಾ

Untitled design 2025 09 30t233556.783

ತುಮಕೂರು : ಈ ಬಾರಿ ದಸರಾ ಹಬ್ಬವನ್ನು ಜಿಲ್ಲಾಡಳಿತದಿಂದಲೇ ಆಯೋಜಿಸಿ, ಐತಿಹಾಸಿಕ ಮತ್ತು ಸಾಂಸ್ಕೃತಿಕ ವೈಭವವನ್ನು ತೋರಿಸಿದೆ. ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಈ ಅದ್ದೂರಿ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಸ್ವಾದಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಹಾಜರಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಅವರು ತುಮಕೂರು ಜಿಲ್ಲೆಗೆ ಅದರದೇ ಆದ ಇತಿಹಾಸ ಮತ್ತು ಗೌರವವನ್ನು ನೆನಪಿಸಿದರು. ಈ ಜಿಲ್ಲೆಯ ಇತಿಹಾಸ ಇಡೀ ರಾಜ್ಯಕ್ಕೆ ಪರಿಚಯಿಸುವ ಉದ್ದೇಶದಿಂದ ತುಮಕೂರು ದಸರಾ ಆಯೋಜನೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ಜಿಲ್ಲಾಡಳಿತದಿಂದ ಎರಡನೇ ಬಾರಿಯಾಗಿ ದಸರಾ ಆಚರಿಸುವ ಬಗ್ಗೆ ಮಾತನಾಡಿದ ಸಚಿವರು, ಈ ಹಿಂದೆ ಕೆಲವರು ಮಾತ್ರ ದಸರಾ ಆಚರಿಸುತ್ತಿದ್ದರು. ಅದು ಕೆಲವರಿಗೆ ಸೀಮಿತವಾಗಿತ್ತು, ಎಲ್ಲರನ್ನು ಒಳಗೊಳ್ಳುತ್ತಿರಲಿಲ್ಲ. ಹಾಗಾಗಿ ಜಿಲ್ಲಾಡಳಿತದಿಂದಲೇ ಎರಡನೇ ಬಾರಿಯ ದಸರಾ ಆಚರಣೆ ಮಾಡಲಾಗುತ್ತಿದೆ ಎಂದರು.

 

ಈ ಭವ್ಯ ಕಾರ್ಯಕ್ರಮದಲ್ಲಿ ಶಾಸಕರು ಜಿ.ಬಿ.ಜ್ಯೋತಿಗಣೇಶ್ ,ಎಚ್.ವಿ.ವೆಂಕಟೇಶ್, ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಚಂದ್ರಶೇಖರಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ ಸಿಇಒ ಜಿ.ಪ್ರಭು , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಸೇರಿದಂತೆ ಅನೇಕ ಪ್ರಮುಖರು ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೆ ಬಂದಿದ್ದ ನಟಿ ರಮ್ಯಾ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ನೀಡಿದ್ದಾರೆ. ತಮ್ಮ ಮನೆಗೆ ಬಂದ ಗೃಹ ಸಚಿವರನ್ನು ‘ಅಂಕಲ್’ (ಚಿಕ್ಕಪ್ಪ) ಎಂದು ಕರೆದ ರಮ್ಯಾ, ತುಮಕೂರಿಗೆ ಮೊದಲ ಬಾರಿಗೆ ಪರಮೇಶ್ವರ್ ಅವರ ಕಾಲೇಜು ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದು ಹೇಳಿ, ಹಾಸ್ಯದ ಸ್ಪರ್ಶ ಕೊಟ್ಟರು. ತಾನು  ಮತ್ತೊಮ್ಮೆ ನಟಿಸುವ ಸುಳಿವು ನೀಡಿದ್ದು, ಚಿತ್ರರಂಗಕ್ಕೆ ಸುದ್ದಿಯಾಗಿದೆ. ಇದರ ಜೊತೆಗೆ, ‘ಜಾಣ’ ಚಿತ್ರದ ಹಾಡಿಗೆ ಹೆಜ್ಜೆ ಹಾಕಿ ನಟ ರವಿಚಂದ್ರನ್ ಜೊತೆ ನಡನಡೆದ ದೃಶ್ಯವೂ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.

ಅಮರಶಿಲ್ಪಿ ಜಕಣಾಚಾರಿ ಮಹಾವೇದಿಕೆ’ಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿದವು. ಜಿಲ್ಲೆಯ ಸಂಸ್ಕೃತಿ, ಕಲೆ ಮತ್ತು ಸಂಗೀತವನ್ನು ಪ್ರದರ್ಶಿಸುವ ವಿವಿಧ ಕಾರ್ಯಕ್ರಮಗಳು ಈ ಮಹಾವೇದಿಕೆಯಲ್ಲಿ ನಡೆದವು. ಸಾವಿರಾರು ಜನರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ತುಮಕೂರಿನ ಸಾಂಸ್ಕೃತಿಕ ಐಕ್ಯತೆ ಮತ್ತು ವೈವಿಧ್ಯತೆಯನ್ನು ಪ್ರದರ್ಶಿಸಿದರು.

Exit mobile version