ಹುಬ್ಬಳ್ಳಿ : ಶಬರಿಮಲೆ ಅಯ್ಯಪ್ಪ ದೇಗುಲದ ಮಾದರಿಯಲ್ಲೆ ನಿರ್ಮಿಸಿರುವ ಹುಬ್ಬಳ್ಳಿಯ ಶಿರೂರ ಪಾರ್ಕನಲ್ಲಿರುವ ಅಯ್ಯಪ್ಪ ದೇವಸ್ಥಾನದಲ್ಲಿ ಮಕರವಿಳಕ್ಕು (ಮಕರಜ್ಯೋತಿ) ಅಂಗವಾಗಿ ಗಣಹೋಮ ಮತ್ತು ಧ್ವಜಾರೋಹಣ ಕಾರ್ಯಕ್ರಮಗಳು ಇಂದು ಆನಂದ ಗುರುಸ್ವಾಮಿಯವರ ನೇತೃತ್ವದಲ್ಲಿ ನಡೆದವು.
ಅಲ್ಲದೇ ಸುಮಾರು ಮೂರು ನೂರಕ್ಕು ಹೆಚ್ಚು ಜನ ಇಂದು ಮಾಲಾಧಾರಣೆ ಮಾಡಿದರು. ದೇವಸ್ಥಾನದ ಉಪಾಧ್ಯಕ್ಷ ಡಾ.ಚಿಗರುಪಾಟಿ ವಿ.ಎಸ್.ವಿ ಪ್ರಸಾದ ಧ್ವಜಾರೋಹಣ ನೆರವೇರಿಸಿದರು.
ಕಳೆದ ೧೩ ವರ್ಷಗಳಿಂದ ಈ ದೇವಸ್ಥಾನಕ್ಕೆ ಉತ್ತರ ಕರ್ನಾಟಕ ಹಾಗೂ ನೆರೆಯ ರಾಜ್ಯಗಳಿಂದ ಸಾವಿರಾರು ಶಬರಿಮಲೆಗೆ ಹೋಗಾಲಾಗದ ಸಾವಿರಾರು ಅಯ್ಯಪ್ಪ ಭಕ್ತರು ಇಲ್ಲಿಗೆ ಆಗಮಿಸಿ ಹದಿನೆಂಟು ಮೆಟ್ಟಿಲುಗಳನ್ನು ಹತ್ತಿ ಅಯ್ಯಪ್ಪನ ದರ್ಶನ ಪಡೆಯುತ್ತಿದ್ದಾರೆ.
ಈ ಬಾರಿ ಶಿರೂರ ಪಾರ್ಕ ಅಯ್ಯಪ್ಪ ದೇಗುಲದಲ್ಲಿ ವೃದ್ಧರಿಗೆ, ವಿಕಲಚೇತನರಿಗೆ ಅನುಕೂಲವಾಗುವಂತೆ ಉದ್ಯಮಿಗಳಾದ ಡಾ.ವಿಜಯ ಸಂಕೇಶ್ವರ, ಆನಂದ ಸಂಕೇಶ್ವರ ಅವರು ಲಿಫ್ಟ್ ಸೌಕರ್ಯ ಕಲ್ಪಿಸಿಕೊಟ್ಟಿದ್ದಾರೆ.ಕಳೆದ ವರ್ಷಗಳಂತೆ ಹೆಚ್ಚಿನ ಸಂಖ್ಯೆಯಲ್ಲಿ ಹುಬ್ಬಳ್ಳಿ ದೇವಸ್ಥಾನಕ್ಕೆ ಅಯ್ಯಪ್ಪ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ಡಾ.ಪ್ರಸಾದ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಟ್ರಸ್ಟ್ ಸದಸ್ಯರಾದ ಜಯರಾಂ ಶೆಟ್ಟಿ, ವಿನಯ ಹುಲ್ಲೂರ ಇತರ ಭಕ್ತರು ಇದ್ದರು.
