ಚಾರ್ಜ್ ಹಾಕಿದ ತಕ್ಷಣವೇ ಮೊಬೈಲ್​ ಹ್ಯಾಕ್ ಆಗಿ ಡಾಟಾದ ಕಳ್ಳತನ ಸಾಧ್ಯತೆ ಹುಷಾರ್​

Siddu stalin kcr (68)

ಇತ್ತೀಚಗೆ ಜನರು ತಮ್ಮ ಮೊಬೈಲ್ ಫುಲ್ ಜಾರ್ಜ್‌ ಇರಬೇಕು ಅಂತ ಬಯಸುವವರೇ ಹೆಚ್ಚು. ಅದರಲ್ಲೂ, ಐಫೋನ್‌ ಬಳಸುವವರು ಹೆಚ್ಚಾಗಿ ಮೊಬೈಲ್ ಚಾರ್ಜ್ ಹಾಕುತ್ತಾರೆ. ಹೋಗಿ ತಲುಪಬೇಕಾದ ಜಾಗಕ್ಕೆ ಮುಟ್ಟವಷ್ಟರಲ್ಲಿ ಮೊಬೈಲ್ ಸ್ವಿಚ್ ಆಪ್ ಆಗುವ ಆತಂಕದಿಂದ ಜನರು ಸಾರ್ವಜನಿಕ ಸ್ಥಳಗಳಲ್ಲಿ ಫ್ರೀ ಚಾರ್ಜ್​ ಹಾಕಿಕೊಂಡು ಬ್ಯಾಟರಿ ಫುಲ್ ಮಾಡಿಕೊಂಡು ಹೋಗುವುದು ಸಾಮಾನ್ಯ. ಆದರೆ ಇದರಿಂದ ಡೇಟಾ ಕಳ್ಳತನವಾಗುವ ಅಪಾಯ ಹೆಚ್ಚು.

ಹೌದು ಹೀಗೆ ಫ್ರೀ ಚಾರ್ಜ್ ಹಾಕುವುದರಿಂದ ನಿಮ್ಮ ಮೊಬೈಲ್ ಹ್ಯಾಕ್ ಆಗುವ ಸಾಧ್ಯತೆ ಇದೆಯೆಂದು ಪೊಲೀಸ್ ಇಲಾಖೆಯಿಂದಲೇ ಮಾಹಿತಿ ಬಂದಿದೆ. ಈ ಬಗ್ಗೆ ಜಾಗೃತಿ ಮೂಡಿಸಲು ಪೊಲೀಸರು ಪ್ರಯತ್ನ ನಡೆಸುತ್ತಿದ್ದಾರೆ. ಫ್ರೀ ಚಾರ್ಜ್ ಪಾಯಿಂಟ್​ಗಳನ್ನು ಹಾಕುವವರು ಸೈಬರ್ ವಂಚಕರು ಆಗಿರುವ ಸಾಧ್ಯತೆ ಹೆಚ್ಚು. ಕೆಲವು ಕಡೆ ಚಾರ್ಜರ್ ಕೇಬಲ್ ಫಿಕ್ಸ್ ಇರುತ್ತೆ. ಅಂತ ಕಡೆಯಲ್ಲಿ ಹ್ಯಾಕ್ ಮಾಡಿ ಡಾಟಾ ಕಳ್ಳತನ ಮಾಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಎಚ್ಚರದಿಂದ ಇರಲು ಸೈಬರ್ ಪೊಲೀಸ್ ಇಲಾಖೆ ತಿಳಿಸಿದೆ.

ನಿಮ್ಮದೆ ಚಾರ್ಜರ್​ನಿಂದ ಚಾರ್ಜ್​ ಮಾಡಿಕೊಂಡರೆ ಹ್ಯಾಕ್​ ಆಗುವ ಸಾಧ್ಯತೆ ಕಡಿಮೆ. ಒಂದು ವೇಳೆ ಅವರದೇ ಚಾರ್ಜರ್​​ನಲ್ಲಿ ನೀವು ನಿಮ್ಮ ಮೊಬೈಲ್​ನ್ನು ಚಾರ್ಜ್ ಮಾಡಿಕೊಂಡರೆ ಮೊಬೈಲ್ ಹ್ಯಾಕ್ ಮಾಡಿ ಡಾಟಾ ಕಳ್ಳತನ ಮಾಡುವುದರೊಂದಿಗೆ ನಿಮ್ಮ ಖಾತೆಯಲ್ಲಿರುವ ಹಣವನ್ನು ಎಗರಿಸುವ ಸಾಧ್ಯತೆ ಇದೆ. ಹೀಗಾಗಿ ಇಂತಹ ಪ್ರಕರಣಗಳು ದಾಖಲಾಗುವ ಮುನ್ನವೇ ಅರಿವು ಮೂಡಿಸಲು ಪೊಲೀಸರು ಮುಂದಾಗಿದ್ದಾರೆ.

ಪೊಲೀಸರು ಹೇಳುವ ಪ್ರಕಾರ ಡಾಟಾ ಕಳ್ಳತನವಾದ ಎಷ್ಟೋ ದಿನಗಳ ನಂತರ ಅದು ನಿಮ್ಮ ಅರಿವಿಗೆ ಬರುತ್ತದೆ. ಆದ್ರೆ ಹೇಗೆ, ಎಲ್ಲಿ ಆಯ್ತು ಅನ್ನೋದು ನಿಮಗೆ ಗೊತ್ತಿರುದಿಲ್ಲ. ಬಹುತೇಕ ಇಂತಹ ಸ್ಥಳಗಳಲ್ಲಿ ಡಾಟಾ ಕಳುವಾಗುವ ಸಾಧ್ಯತೆ ಹೆಚ್ಚು ಎಂದು ಸಾರ್ವಜನಿಕರಲ್ಲಿ ಸೈಬರ್​ ಜಾಗೃತಿ ಮೂಡಿಸಲು ಪೊಲೀಸರು ಮುಂದಾಗಿದ್ದಾರೆ.

 

Exit mobile version