ಮೈಸೂರು: ಬೆಂಗಳೂರಿನಲ್ಲಿ ನಿನ್ನೆ ಬಡೆದ ಬೆಂಗಳೂರು ನಡಿಗೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್,ಮುನಿತ್ನ ಅವರನ್ನ ಕರಿ ಟೋಪಿ ಶಾಸಕರೇ ಬನ್ನಿ ಮೇಲೆ ಎಂದು ಹೇಳಿದ್ದರು ಇದ್ದಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ.
ಡಿಕೆಶಿ ಅವರ ನಡೆ-ನುಡಿಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರತಾಪ್ ಸಿಂಹ, ಸಿಎಂ ಆಗಬೇಕೆಂದು ಬಯಸುವ ವ್ಯಕ್ತಿಗೆ ಬೇಕಾದ ಘನತೆ ಮತ್ತು ಗಾಂಭೀರ್ಯ ಇರಬೇಕು, ರೌಡಿಸಂ ತರಹದ ಭಾಷೆ ನಿಲ್ಲಿಸಬೇಕು ಡಿಕೆಶಿ ವಿರುದ್ದ ಕಿಡಿಕಾರಿದರು.
ಆರ್.ಆರ್. ನಗರ ಉಪಚುನಾವಣೆಯಲ್ಲಿ ಕುಸುಮಾ ಅವರನ್ನು ಗೆಲ್ಲಿಸಲು ಡಿಕೆಶಿ ಹಣಬಲ ಮತ್ತು ತೋಳ್ಬಲವನ್ನು ಬಳಸಿದ್ರು, ಆದರೆ ಜನ ಅದನ್ನು ಒಪ್ಪಲಿಲ್ಲ ಎಂದು ಪ್ರತಾಪ್ ಸಿಂಹ ಟೀಕಿಸಿದರು. ಸ್ಥಳೀಯ ಶಾಸಕರಿಗೂ, ಸಂಸದರಿಗೂ ಗೌರವ ಕೊಡೋ ಕಲಿಕೆ ಡಿಕೆಶಿಗೆ ಇರಬೇಕು. ಜಮೀರ್ ಅಹ್ಮದ್ ಸಭೆಯಲ್ಲಿ ಇದ್ದರೆ ಬಿಳಿ ಟೋಪಿ ಸಾಬಣ್ಣ ಬಾ ಅಂತ ಕರೀತಿರಾ? ಇಂತಹ ನಡವಳಿಕೆ ಚುನಾವಣಿತ ಪ್ರತಿನಿಧಿಗೆ ತಕ್ಕದ್ದಲ್ಲ ಎಂದರು.
ಕುಸುಮಾ ಅವರನ್ನು ಗೆಲ್ಲಿಸಲು ಇಷ್ಟು ಪ್ರಯತ್ನ ಮಾಡಿದರೆ, ಈಗ ಅವರನ್ನು ಎಂಎಲ್‌ಸಿ ಅಥವಾ ರಾಜ್ಯಸಭಾ ಸದಸ್ಯೆಯನ್ನಾಗಿ ಮಾಡಬಹುದು, ಆದರೆ ಸ್ಥಳೀಯ ನಾಯಕರಿಗೆ ಕಿರುಕುಳ ಕೊಡೋ ಧೋರಣೆ ಸರಿಯಲ್ಲ ಎಂದು ಹೇಳಿದರು. ಅಲ್ಲದೆ, 2028ರಲ್ಲಿ ಡಿಕೆ ಶಿವಕುಮಾರ್ ಕೂಡ ಜಾಬ್ ಲೆಸ್ ಆಗ್ತಾರೆ, ಆಗ ಅವರನ್ನ ಇದೇ ರೀತಿ ನಡೆಸಿಕೊಂಡರೆ ಹೇಗಿರುತ್ತೆ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಹೈಕಮಾಂಡ್ ವಿರುದ್ಧವೂ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿ, ಕಾಂಗ್ರೆಸ್‌ನಲ್ಲಿ ಸೂಟ್‌ಕೇಸ್ ರಾಜಕೀಯ ಮಾತ್ರ ಇದೆ. ಯಾರು ಹೆಚ್ಚು ಹಣ ಕಳಿಸುತ್ತಾರೋ ಅವರಿಗೆ ಅಧಿಕಾರ ಸಿಗುತ್ತದೆ ಇದೇ ಕಾಂಗ್ರೆಸ್ ಸಂಸ್ಕೃತಿ ಎಂದು ಕೈ ನಾಯಕರ ವಿರುದ್ದ ಕಿಡಿಕಾರಿದರು.