ಜೈಲು ಸೇರಿದ್ರೂ ಬದಲಾಗದ ಪ್ರಜ್ವಲ್: ಮೊಬೈಲ್, ಪೆನ್‌ಡ್ರೈವ್‌ನಲ್ಲಿ ಅಶ್ಲೀಲ ವಿಡಿಯೋ ಪತ್ತೆ!

ಬ್ರಿಕ್ಸ್ ಶೃಂಗಸಭೆ (9)

ಆನೇಕಲ್ ಸೆ. 12: ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಸುತ್ತ ಮತ್ತೊಂದು ವಿವಾದ ತಲೆದೋರಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಪತ್ತೆಯಾದ ಮೊಬೈಲ್ ಮತ್ತು ಪೆನ್‌ಡ್ರೈವ್ ಬಳಕೆ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಮೊಬೈಲ್ ಮತ್ತು ಪೆನ್‌ಡ್ರೈವ್ ಳಲ್ಲಿದ್ದ ಡೇಟಾ ಪರಿಶೀಲನೆ ವೇಳೆ ಅಶ್ಲೀಲ ವಿಡಿಯೋಗಳು ಪತ್ತೆಯಾಗಿರುವುದು ತನಿಖೆಗೆ ಹೊಸ ತಿರುವು ನೀಡಿದೆ.

ಪೊಲೀಸರ ಪ್ರಕಾರ, ಜೈಲಿನಲ್ಲಿ ನಡೆಸಿದ ದಿಢೀರ್ ತಪಾಸಣೆ ವೇಳೆ ಪ್ರಜ್ವಲ್ ರೇವಣ್ಣ ಇದ್ದ ಸೆಲ್‌ಗೆ ಸಂಬಂಧಿಸಿದಂತೆ ಮೊಬೈಲ್ ಹಾಗೂ ಪೆನ್‌ಡ್ರೈವ್ ಪತ್ತೆಯಾಗಿತ್ತು. ಬಳಿಕ ಮೊಬೈಲ್ ಮತ್ತು ಪೆನ್‌ಡ್ರೈವ್ ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಪರಿಶೀಲನೆ ನಡೆಸಲಾಗಿದೆ. ಪೆನ್‌ಡ್ರೈವ್‌ನಲ್ಲಿ 70ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಹಾಗೂ ಮೊಬೈಲ್‌ನಲ್ಲೂ 40ಕ್ಕೂ ಹೆಚ್ಚು ವಿಡಿಯೋಗಳಿದ್ದವು ಎಂಬ ಮಾಹಿತಿ ತನಿಖಾ ಮೂಲಗಳಿಂದ ಲಭ್ಯವಾಗಿದೆ.

ಜೈಲಿನೊಳಗೆ ಪೆನ್‌ಡ್ರೈವ್ ಅನ್ನು ಟಿವಿಗೆ ಸಂಪರ್ಕಿಸಿ ವಿಡಿಯೋಗಳನ್ನು ವೀಕ್ಷಿಸಲಾಗಿತ್ತೇ ಎಂಬ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ, ಸಾಧನದಲ್ಲಿ ವಿಡಿಯೋಗಳು ಪತ್ತೆಯಾಗಿರುವುದಷ್ಟೇ ಅವುಗಳನ್ನು ನಿರ್ದಿಷ್ಟ ವ್ಯಕ್ತಿಯೇ ವೀಕ್ಷಿಸಿದ್ದಾನೆ ಎಂಬುದನ್ನು ಸಾಬೀತುಪಡಿಸುವುದಿಲ್ಲ. ಹೀಗಾಗಿ ಸಾಧನವನ್ನು ಯಾರು ಬಳಸಿದರು, ಯಾವಾಗ ಬಳಸಿದರು ಮತ್ತು ಜೈಲಿನೊಳಗೆ ಅದು ಹೇಗೆ ಬಂದಿತು ಎಂಬುದರ ಬಗ್ಗೆ ತಾಂತ್ರಿಕ ತನಿಖೆ ಮುಂದುವರಿದಿದೆ.

ಇದರ ನಡುವೆ ಪ್ರಜ್ವಲ್ ಜೈಲಿನಲ್ಲಿದ್ದಾಗ ಮೊಬೈಲ್ ಮೂಲಕ ಸಾಮಾನ್ಯ ಕರೆ, ವಾಟ್ಸಾಪ್ ಕರೆ ಹಾಗೂ ವಿಡಿಯೋ ಕರೆಗಳನ್ನು ಮಾಡಿದ್ದಾರೆಯೇ ಎಂಬ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ ಎನ್ನಲಾಗಿದೆ. ಕುಟುಂಬಸ್ಥರು, ತಾಯಿ, ತಂದೆ ಎಚ್.ಡಿ. ರೇವಣ್ಣ ಹಾಗೂ ವಕೀಲರೊಂದಿಗೆ ಸಂಪರ್ಕ ಹೊಂದಿದ್ದರೇ ಎಂಬುದರ ಜೊತೆಗೆ ಕೆಲವು ಮಹಿಳೆಯರಿಗೆ ಕರೆ ಮಾಡಿರುವ ಆರೋಪಗಳನ್ನೂ ತನಿಖೆಯ ಭಾಗವಾಗಿ ಪರಿಶೀಲಿಸಲಾಗುತ್ತಿದೆ.

ಪೊಲೀಸರು ಇದೀಗ ಕಾಲ್ ಡೀಟೇಲ್ಸ್ ಹಾಗೂ ಇತರ ತಾಂತ್ರಿಕ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಅಗತ್ಯವಿದ್ದರೆ ಸಂಬಂಧಪಟ್ಟ ವ್ಯಕ್ತಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸುವ ಸಾಧ್ಯತೆಯೂ ಇದೆ.

ಒಟ್ಟಿನಲ್ಲಿ ಜೈಲಿನೊಳಗೆ ಮೊಬೈಲ್ ಮತ್ತು ಪೆನ್‌ಡ್ರೈವ್ ಬಳಕೆಯ ಪ್ರಕರಣವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಸಾಧನಗಳ ಬಳಕೆ, ಕರೆಗಳ ವಿವರ ಹಾಗೂ ವಿಡಿಯೋಗಳ ಮೂಲದ ಬಗ್ಗೆ ಪರಪ್ಪನ ಅಗ್ರಹಾರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Exit mobile version