ಬೆಂಗಳೂರು: ಸಮಾಜಕ್ಕೆ ನೈತಿಕತೆಯ ಪಾಠ ಮಾಡುವ, ರಾಜಕಾರಣಿಗಳಿಗೆ ಭವಿಷ್ಯದ ದಾರಿ ತೋರಿಸುವ ಮತ್ತು ಮಠದ ಪೀಠದ ಮೇಲೆ ಕುಳಿತು ಧರ್ಮೋಪದೇಶ ನೀಡುವ ಮಹಾ ಸ್ವಾಮೀಜಿಯೊಬ್ಬರ ಅಸಲಿ ಬಣ್ಣ ನೋಡಿದ್ರೆ ಚಿ..ತೂ.. ಅಂತೀರಾ..! ಹಗಲಿರುಳು ಖಾವಿ ತೊಟ್ಟು, ಜನರ ನಂಬಿಕೆಯೊಂದಿಗೆ ಆಟವಾಡುತ್ತಿದ್ದ ಈ ಪ್ರಭಾವಿ ಸ್ವಾಮೀಜಿಯ ಕಾಮಕಾಂಡದ ವಿಡಿಯೋ ಈಗ ಸಾರ್ವಜನಿಕ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.
ಯಾರೀ ಪ್ರಭಾವಿ ಸ್ವಾಮೀಜಿ ?
ಈ ಸುದ್ದಿಯಲ್ಲಿರುವ ಸ್ವಾಮೀಜಿ ಅಂತಿಂತವರಲ್ಲ. ಇಡೀ ರಾಜ್ಯಕ್ಕೆ ಚಿರಪರಿಚಿತರಾದ, ಅತ್ಯಂತ ಬುದ್ಧಿವಂತರೆಂದೇ ಕರೆಸಿಕೊಳ್ಳುವ ಪ್ರಬಲ ಮಠಾಧೀಶರು. ಇವರ ಆಶೀರ್ವಾದ ಪಡೆಯಲು ದೊಡ್ಡ ದೊಡ್ಡ ರಾಜಕಾರಣಿಗಳು, ಮಂತ್ರಿಗಳು ಸಾಲಿನಲ್ಲಿ ನಿಲ್ಲುತ್ತಾರೆ. ಹಳೇ ಮೈಸೂರು ಭಾಗದಲ್ಲಿ ಇವರದ್ದೇ ಕಾರುಬಾರು. ಪದೇ ಪದೇ ರಾಜ್ಯ ಮತ್ತು ದೇಶದ ಭವಿಷ್ಯದ ಬಗ್ಗೆ ನುಡಿಯುವ ಇವರು, ಭೂಕಂಪ, ಪ್ರಳಯ ಹಾಗೂ ಮುಖ್ಯಮಂತ್ರಿ ಕುರ್ಚಿಯ ಫೈಟ್ ಬಗ್ಗೆಯೂ ಭವಿಷ್ಯ ಹೇಳುವಲ್ಲಿ ಎತ್ತಿದ ಕೈ.
ಮಠದಲ್ಲೇ ಮಹಿಳೆಯೊಂದಿಗೆ ರಾಸಲೀಲೆ!
ಈ ಮಹಾ ಸ್ವಾಮೀಜಿಯು ಮಹಿಳೆಯೊಬ್ಬರ ಜೊತೆ ಮಠದ ಒಳಗೇ ರಾಸಲೀಲೆಯಲ್ಲಿ ತೊಡಗಿರುವುದು ಸ್ಪಷ್ಟವಾಗಿ ದಾಖಲಾಗಿದೆ. ಮೊಬೈಲ್‌ನಲ್ಲಿ ಬೇರೊಂದು ವಿಡಿಯೋ ನೋಡುತ್ತಾ ಕಾಮಕೇಳಿಯಲ್ಲಿ ಮುಳುಗಿರುವ ಸ್ವಾಮೀಜಿಯ ನಗ್ನಕಾಂಡವು ಭಕ್ತಾದಿಗಳ ತಲೆತಗ್ಗಿಸುವಂತೆ ಮಾಡಿದೆ. ಜನರ ಪಾದೋದಕ ಸೇವಿಸುವ, ಪಾದ ಪೂಜೆ ಮಾಡಿಸಿಕೊಳ್ಳುವ ಈ ಪೀಠಾಧೀಶರು ಒಳಗಡೆ ಎಷ್ಟು ನೀಚ ಕೆಲಸ ಮಾಡುತ್ತಿದ್ದಾರೆ ಎಂಬುದು ಈ ವಿಡಿಯೋದಿಂದ ಸಾಬೀತಾಗಿದೆ.
ನೈತಿಕತೆ ಎಲ್ಲಿ ಹೋಯಿತು ?
ನಾನು ಸರ್ವಸಂಗ ಪರಿತ್ಯಾಗಿ ಎಂದು ಹೇಳಿಕೊಳ್ಳುತ್ತಾ, ಒಳಗಡೆ ಕಾಮದ ಕೊಂಡಿ ಕಳಚಿರುವ ಈ ಸ್ವಾಮೀಜಿಗೆ ಸಮಾಜಕ್ಕೆ ಉಪದೇಶ ಮಾಡುವ ನೈತಿಕತೆ ಎಲ್ಲಿದೆ ? ಭವಿಷ್ಯದ ಮುನ್ನೋಟ ತೋರಿಸುವ ಹೆಸರಿನಲ್ಲಿ ಜನರ ನಂಬಿಕೆಗೆ ದ್ರೋಹ ಬಗೆಯುತ್ತಿರುವ ಇಂತಹವರ ಅಸಲಿ ಮುಖವಾಡ ಬಯಲು ಮಾಡುವುದು ನಮ್ಮ ಉದ್ದೇಶ. ರಾಜಕಾರಣಿಗಳು ಪಾದ ತೊಳೆಯುವ ಈ ಸ್ವಾಮೀಜಿಯ ನಗ್ನಕಾಂಡ ಈಗ ಬಯಲಾಗಿದೆ.
