ಕಲ್ಯಾಣ ಕರ್ನಾಟಕ್ಕೆ ನಿರ್ಮಲಾ ಸೀತಾರಾಮನ್ ಭೇಟಿ: 7 ಜಿಲ್ಲೆಗಳ ಕೃಷಿ ಘಟಕ ಉದ್ಘಾಟನೆ..!

Untitled design 2025 10 14t144121.658

ಬೆಂಗಳೂರು, ಅಕ್ಟೋಬರ್ 14: ಕೇಂದ್ರ ಹನಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ನಾಳೆ (ಅಕ್ಟೋಬರ್ 15) ಕಲ್ಯಾಣ ಕರ್ನಾಟಕ ಪ್ರದೇಶದ ಏಳು ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ಮಾಹಿತಿ ಹಂಚಿಕೊಂಡ ಸಚಿವೆ,ಕರ್ನಾಟಕದಲ್ಲಿ ಸ್ಥಾಪಿಸಿರುವ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಘಟಕಗಳನ್ನು ಭೇಟಿ ಮಾಡಿ ಉದ್ಘಾಟನೆ ಮಾಡಲಿದ್ದಾರೆ.

ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ, “ನಾಳೆಯಿಂದ ಕಲ್ಯಾಣ ಕರ್ನಾಟಕ ಪ್ರದೇಶದ ಪ್ರವಾಸಕ್ಕೆ ಹೊರಡುತ್ತಿದ್ದೇನೆ. ಅಲ್ಲಿ ಸ್ಥಾಪಿಸಲಾಗಿರುವ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಘಟಕಗಳು, ರೈತರ ತರಬೇತಿ ಕೇಂದ್ರ ಮತ್ತು ಕಾಮನ್ ಫೆಸಿಲಿಟಿ ಸೆಂಟರ್‌ಗಳನ್ನು ಭೇಟಿ ಮಾಡಿ, ಅವುಗಳ ಉತ್ಪಾದನಾ ಚಟುವಟಿಕೆಗಳನ್ನು ವೀಕ್ಷಿಸಲಿದ್ದೇನೆ ಎಂದು ತಿಳಿಸಿದ್ದಾರೆ.

ಈ ಘಟಕಗಳನ್ನು ಸಚಿವೆಯವರ ಸಂಸದೀಯ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿ (MPLADS) ಮೂಲಕ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ತಲಾ ಒಂದರಂತೆ ಸ್ಥಾಪಿಸಲಾಗಿದೆ. ಈ ಪ್ರವಾಸದಲ್ಲಿ ಅವರು ವಿಜಯನಗರ, ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿನ ಘಟಕಗಳನ್ನು ಉದ್ಘಾಟನೆ ಮಾಡಲಿದ್ದಾರೆ. ಸಚಿವೆ ತಮ್ಮ ಪೋಸ್ಟ್‌ನಲ್ಲಿ, ಈ ಕೃಷಿ ಸಂಸ್ಕರಣೆ ಕೇಂದ್ರಗಳಿಂದ ತರಬೇತಿ ಪಡೆದ ರೈತರು, ಲಾಭಾರ್ಥಿಗಳು, ರೈತ ಉತ್ಪಾದಕರ ಸಂಘಗಳು ಮತ್ತು ಅವರ ಕುಟುಂಬಗಳನ್ನು ಭೇಟಿ ಮಾಡಲು ಉತ್ಸುಕನಾಗಿದ್ದೇನೆ ಎಂದು ಬರೆದಿದ್ದಾರೆ.

ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಪೋಸ್ಟ್‌ನಲ್ಲಿ ಪ್ರತಿ ಜಿಲ್ಲೆಯಲ್ಲಿನ ಘಟಕದ ವಿವರಗಳನ್ನು ಹಂಚಿಕೊಂಡಿದ್ದಾರೆ:

ಜಿಲ್ಲೆ ಉತ್ಪನ್ನಗಳು ಉತ್ಪಾದನಾ ಸಾಮರ್ಥ್ಯ
ವಿಜಯನಗರ ಕಡಲೆ ಬೇಳೆ, ಹುರಿದ ಕಡಲೆ, ಕಡಲೆ ಚಿಕ್ಕಿ, ಹುಣಸೆ ಬ್ಲಾಕ್ & ಪಲ್ಪ್ ಕಡಲೆ – 200 ಕೆ.ಜಿ./ಗಂ.; ಹುಣಸೆ – 100 ಕೆ.ಜಿ./ಗಂ.
ಬಳ್ಳಾರಿ ಮೆಣಸಿನ ಪುಡಿ & ಫ್ಲೇಕ್ಸ್ 250 ಕೆ.ಜಿ./ಗಂ.
ಕೊಪ್ಪಳ ಹಣ್ಣಿನ ಪಲ್ಪ್, ಹಣ್ಣಿನ ರಸ, ಅಮಚೂರ್ ಪುಡಿ 500 ಕೆ.ಜಿ./ಗಂ.
ರಾಯಚೂರು ಚಿಲ್ಲಾ ಪ್ರೀಮಿಕ್ಸ್, ಕಡಲೆ & ತೊಗರಿ ಬೇಳೆ 350 ಕೆ.ಜಿ./ಗಂ.
ಯಾದಗಿರಿ ಕಡಲೆ ಬೆಣ್ಣೆ, ಹುರಿದ ಕಡಲೆ, ಕಡಲೆ ಎಣ್ಣೆ 300 ಕೆ.ಜಿ./ಗಂ.
ಕಲಬುರಗಿ ಸಿರಿಧಾನ್ಯ ಫ್ಲೇಕ್ಸ್, ಪಾಪ್ಸ್, ಹಿಟ್ಟು, ಸಂಪೂರ್ಣ ಧಾನ್ಯ 500 ಕೆ.ಜಿ./ಗಂ.
ಬೀದರ್ ಸೋಯಾಬೀನ್ ಟೋಫು & ಸೋಯಾ ಹಾಲು 300 ಕೆ.ಜಿ./ಗಂ.
ಸಚಿವೆ ನಿರ್ಮಾಲ ಅವರ ಭೇಟಿಗೆ ಪ್ರಿಯಾಂಕ್ ಖರ್ಗೆ ವ್ಯಂಗ್ಯ

ಕೇಂದ್ರ ಸಚಿವೆಯ ಈ ಭೇಟಿಯ ಕುರಿತು ಕರ್ನಾಟಕದ ಐಟಿ-ಬಿಟಿ ಮತ್ತು ಗ್ರಾಮೀಣ ಅಭಿವೃದ್ಧಿ ಮಂತ್ರಿ ಪ್ರಿಯಾಂಕ್ ಖರ್ಗೆ ವ್ಯಂಗ್ಯಪೂರ್ಣ ಪ್ರತಿಕ್ರಿಯೆ ನೀಡಿದ್ದಾರೆ. “ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಸಮರ್ಪಕ ತೆರಿಗೆ ಪರಿಹಾರ ನೀಡಿಲ್ಲ” ಎಂಬ ಆರೋಪವನ್ನು  ಹಿಂದೆಯೂ ಮಾಡಿದ ಖರ್ಗೆ, ಈ ಭಾರಿಯೂ ಆರೋಪ ಮಾಡಿದ್ದಾರೆ.

ಇದು ಕೇಂದ್ರ ಸರ್ಕಾರದ ವಿತ್ತ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಸರಿಯಾದ ಪಾಲು ದೊರಕುತ್ತಿಲ್ಲ ಎಂಬ ಕಾಂಗ್ರೆಸ್ ಪಕ್ಷದ ದೀರ್ಘಕಾಲದ ಆರೋಪವನ್ನು ಸೂಚಿಸುತ್ತದೆ . ಈ ಹಿನ್ನೆಲೆಯಲ್ಲಿ, ಸಚಿವೆಯ ಭೇಟಿ ಮತ್ತು ರಾಜ್ಯ ಸರ್ಕಾರದ ನಿಲುವು ರಾಜಕೀಯವಾಗಿ ಗಮನಾರ್ಹವಾಗಿದೆ.

Exit mobile version