ಬಲೂನ್ ಬಾಲಕಿ ರೇ*ಪ್ & ಮರ್ಡರ್: 19 ಬಾರಿ ಕತ್ತು ಇರಿದು ಕೊ*ಲೆ..!

Untitled design (17)

ಮೈಸೂರಿನಲ್ಲಿ ನಡೆದ ಅಪ್ರಾಪ್ತ ಬಾಲಕಿ ಅತ್ಯಾಚಾರ ಮತ್ತು ಕೊಲೆಯ ಭೀಕರ ಘಟನೆಯ ಹಿಂದಿನ ವಿವರಗಳು ಬೆಚ್ಚಿಬೀಳಿಸುವಂತಹವಾಗಿವೆ. ದಸರಾ ಹಬ್ಬದ ಸಮಯದಲ್ಲಿ ಬಲೂನ್ ಮಾರಾಟ ಮಾಡಲು ಮೈಸೂರಿಗೆ ಬಂದಿದ್ದ ಬಾಲಕಿಯೊಬ್ಬಳ ಮೇಲೆ ಮದ್ಯದ ನಶೆಯಲ್ಲಿದ್ದ ಆರೋಪಿ ಅತ್ಯಾಚಾರ ಮಾಡಿ, 19 ಬಾರಿ ಚಾಕುವಿನಿಂದ ಕುತ್ತಿಗೆ ಇರಿದು ಭೀಕರವಾಗಿ ಹತ್ಯೆ ಮಾಡಿದ್ದಾನೆ ಎಂದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ.

ಹೊಟ್ಟೆಪಾಡಿಗಾಗಿ ಬಲೂನ್ ಮಾರಾಟ ಮಾಡಲು ಕಲಬುರಗಿ ಜಿಲ್ಲೆಯಿಂದ ಬಾಲಕಿ ಮತ್ತು ಅವಳ ಕುಟುಂಬ ಮೈಸೂರಿಗೆ ಬಂದಿದ್ದರು. ರಾತ್ರಿ ಸಮಯ, ಬಲೂನ್ ಮಾರಾಟ ಮುಗಿಸಿ, ಬಾಲಕಿ ತನ್ನ ತಂದೆ-ತಾಯಿಯರ ಜೊತೆಗೆ ಟೆಂಟ್‌ನಲ್ಲಿ ಮಲಗಿದ್ದಳು. ಆದರೆ, ಮರುದಿನ ಬೆಳಗ್ಗೆ ಬಾಲಕಿ ಕಾಣೆಯಾಗಿದ್ದಳು. ಕುಟುಂಬ ಮತ್ತು ಸ್ಥಳೀಯರು ಹುಡುಕಾಟ ನಡೆಸಿದ ನಂತರ, ಆಸುಪಾಸಿನ ಪ್ರದೇಶದಲ್ಲಿಯೇ ಒಂದು ಅವಳ ಶವವನ್ನು ಪತ್ತೆಹಚ್ಚಲಾಯಿತು.

ಪೊಲೀಸರು ತನಿಖೆ ಪ್ರಾರಂಭಿಸಿದ ನಂತರ, ಸಿಸಿಟಿವಿ ದೃಶ್ಯಗಳ ಪರಿಶೀಲನೆಯಲ್ಲಿ ಕಾರ್ತಿಕ್ ಎಂಬ ಆರೋಪಿಯನ್ನು ಗುರುತಿಸಲಾಯಿತು. ಆರೋಪಿಯು ರಾತ್ರಿ ಸಮಯ ಟೆಂಟ್‌ನಿಂದ ಬಾಲಕಿಯನ್ನು ಎಳೆದುಕೊಂಡು ಹೋಗಿ, ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ ಎಂಬುದು ತನಿಖೆಯಲ್ಲಿ ಹೊರಬಂದಿದೆ. ಘಟನೆಯ ನಂತರ, ಆರೋಪಿ ಕಾರ್ತಿಕ್ ಮೈಸೂರಿನಿಂದ ಕೊಳ್ಳೇಗಾಲಕ್ಕೆ ಪರಾರಿಯಾಗಿದ್ದ.

ಆರೋಪಿಯನ್ನು ಬಂಧಿಸಲು ಪೊಲೀಸರು ಕೊಳ್ಳೇಗಾಲಕ್ಕೆ ಹೋದಾಗ ಕಾರ್ತಿಕ್ ಪೊಲೀಸ್ ಕಾನ್ಸ್ಟೆಬಲ್ ಮೇಲೆ ದಾಳಿ ಮಾಡಿ ಪಲಾಯನ ಮಾಡಲು ಪ್ರಯತ್ನಿಸಿದನು. ಈ ಸಂದರ್ಭದಲ್ಲಿ, ಸಬ್-ಇನ್ಸ್ಪೆಕ್ಟರ್ ಜೈಕೀರ್ತಿ ಆರೋಪಿಯ ಕಾಲಿಗೆ ಗುಂಡು ಹಾರಿಸಿ, ಅವನನ್ನು ಬಂಧಿಸಿದರು.

ಬಾಲಕಿಯ ಮರಣೋತ್ತರ ಪರೀಕ್ಷೆಯ ವರದಿಯು ಅಪರಾಧದ ಭೀಕರತೆಯನ್ನು ತಿಳಿಸಿದೆ. ವರದಿಯ ಪ್ರಕಾರ, ಮದ್ಯದ ನಶೆಯಲ್ಲಿದ್ದ ಆರೋಪಿಯು ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ ಮತ್ತು ಅವಳನ್ನು ಕೊಲ್ಲಲು 19 ಬಾರಿ ಚಾಕುವಿನಿಂದ ಕುತ್ತಿಗೆ ಇರಿದಿದ್ದಾನೆ. 

Exit mobile version