ಕಪ್ಪು ಸುಂದರಿ ನೇರಳೆ ಹಣ್ಣು ಮಾರುಕಟ್ಟೆಯಲ್ಲಿ ಗಮನ ಸೆಳೆದರೂ ಈ ವರ್ಗದವರು ತಿನ್ನಬೇಕಿಲ್ಲ!

1425 (16)

ಹಣ್ಣುಗಳ ರಾಜ ಮಾವಿನ ಸುಗಂಧದಿಂದ ಕಂಗೊಳಿಸುತ್ತಿದ್ದ ಮಾರುಕಟ್ಟೆ, ಈಗ ಕಪ್ಪು ಸುಂದರಿ ನೇರಳೆ ಹಣ್ಣಿನ (Jamun Fruit) ಆಕರ್ಷಣೆಗೆ ಸಾಕ್ಷಿಯಾಗಿದೆ. ಕಳೆದ ಕೆಲವು ವಾರಗಳಿಂದ ಮಾವಿನ ಹಣ್ಣು ಮಾರುಕಟ್ಟೆಯಲ್ಲಿ ಆಧಿಪತ್ಯ ಸಾಧಿಸಿತ್ತಾದರೂ, ಈಗ ನೇರಳೆ ಹಣ್ಣು ತನ್ನದೇ ಆದ ಸ್ಥಾನವನ್ನು ಗಟ್ಟಿಗೊಳಿಸುತ್ತಿದೆ. ರಸ್ತೆಬದಿಯ ತಳ್ಳುಗಾಡಿಗಳಿಂದ ಹಿಡಿದು ಸ್ಥಳೀಯ ಮಾರುಕಟ್ಟೆಗಳವರೆಗೆ, ಎಲ್ಲೆಡೆ ನೇರಳೆಯ ಗುಂಗು ಕಾಣುತ್ತಿದೆ.

ನೇರಳೆಯ ಇಳುವರಿ ಕಡಿಮೆ, ಬೆಲೆ ಏರಿಕೆ:
ವರ್ಷ ನೇರಳೆ ಹಣ್ಣಿನ ಇಳುವರಿ ಕಡಿಮೆಯಾಗಿರುವುದರಿಂದ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಕಳೆದ ವರ್ಷ ಕೆಜಿಗೆ 250-300 ರೂ. ಇದ್ದ ನೇರಳೆ, ಬಾರಿ 300-350 ರೂ.ಗೆ ಮಾರಾಟವಾಗುತ್ತಿದೆ. ಆದರೂ, ಗ್ರಾಹಕರು ನೇರಳೆಯ ರುಚಿ ಮತ್ತು ಔಷಧೀಯ ಗುಣಗಳಿಗೆ ಮನಸೋತು ಖರೀದಿಸುತ್ತಿದ್ದಾರೆ. ನೇರಳೆ ಮರಗಳು ಫೆಬ್ರವರಿಮಾರ್ಚ್ನಲ್ಲಿ ಹೂವು ಬಿಡುತ್ತವೆ, ಏಪ್ರಿಲ್ಮೇ ತಿಂಗಳಲ್ಲಿ ಕಾಯಿಗಳು ಕಟ್ಟಿ, ಜೂನ್ಜುಲೈನಲ್ಲಿ ಹಣ್ಣಾಗಿ ಮಾರುಕಟ್ಟೆಗೆ ಸಿದ್ಧವಾಗುತ್ತವೆ. ವರ್ಷದ ಕಡಿಮೆ ಇಳುವರಿಯ ಹೊರತಾಗಿಯೂ, ಹಣ್ಣಿನ ಗುಣಮಟ್ಟ ಉತ್ತಮವಾಗಿದ್ದು, ಗ್ರಾಹಕರನ್ನು ಸೆಳೆಯುತ್ತಿದೆ.

ADVERTISEMENT
ADVERTISEMENT

ಆರೋಗ್ಯದ ಖಜಾನೆ:
ನೇರಳೆ ಹಣ್ಣು ಕೇವಲ ರುಚಿಕರವಲ್ಲ, ಆರೋಗ್ಯಕ್ಕೂ ಅತ್ಯಂತ ಪ್ರಯೋಜನಕಾರಿ. ಇದರ ಸೇವನೆಯಿಂದ ಮಧುಮೇಹ ನಿಯಂತ್ರಣ, ಜೀರ್ಣಕ್ರಿಯೆ ಸುಧಾರಣೆ, ಗಂಟಲು ನೋವು, ಬಾಯಿ ದುರ್ವಾಸನೆ, ಉಬ್ಬಸ, ಮತ್ತು ತೊದಲುವಿಕೆಯಂತಹ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ವೈದ್ಯರು ತಿಳಿಸುತ್ತಾರೆ. ಗುಣಗಳಿಂದಾಗಿ, ಬೆಲೆ ಏರಿಕೆಯಾದರೂ ಗ್ರಾಹಕರು ನೇರಳೆಯನ್ನು ಆಯ್ಕೆ ಮಾಡುತ್ತಿದ್ದಾರೆ.

ಯಾರು ನೇರಳೆ ತಿನ್ನಬಾರದು?
ಅನೇಕ ಆರೋಗ್ಯ ಪ್ರಯೋಜನಗಳಿದ್ದರೂ, ಕೆಲವರಿಗೆ ನೇರಳೆ ಹಣ್ಣು ಸೇವನೆ ಸೂಕ್ತವಲ್ಲ. ಮಧುಮೇಹಿಗಳು ಅತಿಯಾಗಿ ನೇರಳೆ ತಿನ್ನುವುದರಿಂದ ರಕ್ತದ ಸಕ್ಕರೆ ಮಟ್ಟ ಕುಸಿಯಬಹುದು. ಹೆಚ್ಚಿನ ಪ್ರಮಾಣದ ಸೇವನೆಯಿಂದ ಮಲಬದ್ಧತೆ ಉಂಟಾಗಬಹುದು. ಮೊಡವೆ ಅಥವಾ ಚರ್ಮದ ಗೆಡ್ಡೆಗಳ ಸಮಸ್ಯೆ ಇರುವವರು ನೇರಳೆ ತಿನ್ನುವುದನ್ನು ತಪ್ಪಿಸಬೇಕು, ಏಕೆಂದರೆ ಇದು ಚರ್ಮದ ಸಮಸ್ಯೆಗಳನ್ನು ಉಲ್ಬಣಗೊಳಿಸಬಹುದು. ಜೊತೆಗೆ, ಭೇದಿಯಿಂದ ಬಳಲುತ್ತಿರುವವರಿಗೆ ನೇರಳೆ ಸೇವನೆಯಿಂದ ವಾಂತಿಯಾಗುವ ಸಾಧ್ಯತೆ ಇದೆ. ಕಾರಣಗಳಿಂದ ಕೆಲವರು ನೇರಳೆಯನ್ನು ಮಿತವಾಗಿ ಸೇವಿಸಬೇಕು ಅಥವಾ ಸಂಪೂರ್ಣವಾಗಿ ತ್ಯಜಿಸಬೇಕು.

Exit mobile version