ಪೌರಾಯುಕ್ತೆಗೆ ಅವಾಜ್ ಹಾಕಿದ್ದ ರಾಜೀವ್ ಗೌಡಗೆ ಸಂಕಷ್ಟ: ಕೆಪಿಸಿಸಿ ನೋಟಿಸ್ ಜಾರಿ

Untitled design 2026 01 15T194042.254

ಬೆಂಗಳೂರು: ಕಾಂಗ್ರೆಸ್‌ ಪಕ್ಷದ ರಾಜ್ಯಸಭಾ ಸದಸ್ಯ ರಾಜೀವ್‌ ಗೌಡ ಅವರ ಮೇಲೆ ಪಕ್ಷದ ಶಿಸ್ತು ಉಲ್ಲಂಘನೆಯ ಆರೋಪ ಕೇಳಿಬಂದಿದೆ. ಸಚಿವ ಜಮೀರ್ ಅವರ ಮಗ ಮತ್ತು ನಟ ಝೈದ್ ಖಾನ್ ನಟನೆಯ ಕಲ್ಟ್ ಮೂವೀ ಫ್ಲೆಕ್ಸ್ ಸಿನಿಮಾ ತೆರವುಗೊಳಿಸಿದ್ದಕ್ಕೆ ಶಿಡ್ಲಘಟ್ಟ ಪೌರಾಯುಕ್ತರಿಗೆ ಅವಮಾನಕರ ಮಾತುಗಳನ್ನಾಡಿದ ಆರೋಪದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ (ಕೆಪಿಸಿಸಿ) ರಾಜೀವ್ ಗೌಡ ಅವರಿಗೆ ನೋಟೀಸ್ (ಶೋಕೋ ನೋಟಿಸ್) ನೀಡಿದೆ.

ರಾಜೀವ್ ಗೌಡ ಅವರು ಶಿಡ್ಲಘಟ್ಟ ನಗರಸಭಾ ವ್ಯಾಪ್ತಿಯಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಬ್ಯಾನರುಗಳನ್ನು ಹಾಕಲು ಪೌರಾಯುಕ್ತರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದರು. ಆ ಸಂಭಾಷಣೆಯಲ್ಲಿ ಅವರು ವ್ಯಕ್ತಿಗತ ನಿಂದನೆ ಮಾಡಿ, ಅವಮಾನಕರ ಭಾಷೆ ಬಳಸಿದ್ದಾರೆ ಎಂದು ಆರೋಪವಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ಅವರು ರಾಜೀವ್ ಗೌಡ ಅವರಿಗೆ ನೀಡಿರುವ ನೋಟೀಸ್ನಲ್ಲಿ, ಪೌರಾಯುಕ್ತರೊಂದಿಗಿನ ಈ ವರ್ತನೆಯಿಂದ ಪಕ್ಷಕ್ಕೆ ಮುಜುಗರ ಉಂಟಾಗಿದೆ ಎಂದು ಸೂಚಿಸಲಾಗಿದೆ. ಅವರು ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪವೂ ಇದೆ. ಈ ನೋಟೀಸನ್ನು ಪಡೆದ ಒಂದು ವಾರದೊಳಗೆ ಅವರು ಸೂಕ್ತ ವಿವರಣೆ ನೀಡಬೇಕು ಎಂದು ಕೇಳಲಾಗಿದೆ. ಅವರು ವಿವರಣೆ ನೀಡದಿದ್ದರೆ ಪಕ್ಷದ ಶಿಸ್ತು ಸಮಿತಿ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ನೋಟಿಸ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ರಾಜೀವ್ ಗೌಡ ಅವರು ಏಳು ದಿನಗಳ ಒಳಗಾಗಿ ತಮ್ಮ ಪಕ್ಷಕ್ಕೆ ಉತ್ತರ ನೀಡಬೇಕು. ಇಲ್ಲದಿದ್ದರೆ, ಪಕ್ಷದ ಮಟ್ಟದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಚಂದ್ರಶೇಖರ್ ಅವರು ಸ್ಪಷ್ಟಪಡಿಸಿದ್ದಾರೆ. 

ಕಾಂಗ್ರೆಸ್ ಪಕ್ಷವು ಶಿಸ್ತು ಕ್ರಮದ ಬಗ್ಗೆ ಕಟ್ಟುನಿಟ್ಟಿನ ನಿಯಮಗಳನ್ನು ಹೊಂದಿದೆ. ಸದಸ್ಯರು ಪಕ್ಷದ ಹೆಸರಿಗೆ ಇತರರಿಗೆ ಅವಮಾನ ಅಥವಾ ಪಕ್ಷದ ಶಿಸ್ತನ್ನು ಉಲ್ಲಂಘಿಸಿದರೆ, ಪ್ರಾಥಮಿಕವಾಗಿ ಕಾರಣ ಕೇಳಲಾಗುತ್ತದೆ. ವಿವರಣೆ ಸಮರ್ಪಕವಲ್ಲದಿದ್ದರೆ, ಎಚ್ಚರಿಕೆ ನೀಡುವುದು, ಕೆಲವೊಮ್ಮೆ ಹುದ್ದೆಯಿಂದ ತೆಗೆದುಹಾಕಲಾಗುತ್ತದೆ. ಅಥವಾ ಪಕ್ಷದ ಸದಸ್ಯತ್ವವನ್ನು ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ರದ್ದುಪಡಿಸುವುದು ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ರಾಜೀವ್ ಗೌಡ ಅವರ ಪ್ರಕರಣದಲ್ಲಿಯೂ ಇದೇ ವಿಧಾನ ಅನುಸರಿಸಲಾಗುತ್ತಿದೆ. ಸದ್ಯ ರಾಜೀವ್‌ ಗೌಡ ಕೆಪಿಸಿಸಿ ನೀಡಿರುವ ನೋಟೀಸ್‌ಗೆ ಯಾವ ರೀತಿ ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ಕಾದು ನೋಡಬೇಕಿದೆ.

Exit mobile version