ದೇಶದ ಗಮನ ಸೆಳೆದ ಸಿದ್ದರಾಮಯ್ಯ: ಪ್ರಪಂಚದ ಪ್ರಶಂಸೆ ದಕ್ಕಿಸಿಕೊಂಡ ಪಿಎಂ ನರೇಂದ್ರ ಮೋದಿ

Untitled design 2026 06 15T115018.593

ರಾಜ್ಯದಲ್ಲಿ ಅರಸು ರೆಕಾರ್ಡ್ ಬ್ರೇಕ್ ಮಾಡಿ ಹೈಕಮಾಂಡ್ ಆದೇಶಕ್ಕೆ ತಲೆಬಾಗಿ ಸಿದ್ದರಾಮಯ್ಯ ಸ್ಥಾನ ಬಿಟ್ಟುಕೊಟ್ಟು ದೇಶಕ್ಕೆ ಸಂದೇಶ ರವಾನೆ ಮಾಡಿದ್ರೆ..ಇತ್ತ ನೆಹರು ಹೆಸರಲ್ಲಿದ್ದ ಸುಧೀರ್ಘ ಪ್ರಧಾನಿ ಅವಧಿಯ ರೆಕಾರ್ಡ್ ಮುರಿದು ಪ್ರಪಂಚವೇ ಭಾರತದ ಕಡೆ ತಿರುಗುವಂತೆ ಪ್ರಧಾನ ಸೇವಕ ನರೇಂದ್ರ ಮೋದಿ ಮಾಡಿದ್ದಾರೆ. ಹಾಗೇ ನೋಡಿದ್ರೆ ಇಬ್ಬರು ರಾಜಕೀಯ ಫ್ಯಾಮಿಲಿಗಳಿಂದ ಬಂದವರಲ್ಲ, ಆದ್ರೆ ಹಠಕ್ಕೆ ಬಿದ್ದು ರಾಜಕೀಯದಲ್ಲಿ ನೆಲದಲ್ಲಿ ಗುದ್ದಿ ಬೆಳೆಯನ್ನ ಬೆಳೆದವರು. ಈ ನಡುವೆ ರಾಜ್ಯದಲ್ಲಿ ಕಾಂಗ್ರೆಸ್ ಆಗಿರುವ ತಪ್ಪುಗಳನ್ನ ಸರಿಪಡಿಸಿಕೊಳ್ಳುವ ದಾರಿಯಲ್ಲಿದ್ರೆ..ಯಥಾ ಪ್ರಕಾರ ಬಿಜೆಪಿ ನಿದ್ದೆ ಮಾಡ್ತಿದೆ. ದೇಶದಲ್ಲಿ ಮೋದಿ ಮುಂದಿಟ್ಟುಕೊಂಡು 2029 ರ ಜಪವನ್ನ ಬಿಜೆಪಿ ಈಗಾಗಲೇ ಶುರು ಮಾಡಿದ್ರೆ.. ದೇಶ ಕಾಂಗ್ರೆಸ್‌ನಲ್ಲಿ ಆಗ್ತಿರುವ ತಪ್ಪುಗಳನ್ನ ಸರಿಪಡಿಸುವಲ್ಲಿ ರಾಹುಲ್ ಗಾಂಧಿ ಮತ್ತೊಮ್ಮೆ ವಿಫಲರಾಗುತ್ತಿದ್ದಾರೆ.

ರಾಜ್ಯದಲ್ಲಿ ಮೇ ತಿಂಗಳ ಕೊನೆಯ ವಾರದಿಂದ ಪ್ರತಿ ದಿನವೂ ಸಿದ್ದರಾಮಯ್ಯ ಅವರ ನಿಲುವು, ನಿರ್ಧಾರ ಹಾಗೂ ರಾಜೀನಾಮೆ ಬಗ್ಗೆ ಚರ್ಚೆ ಆಗ್ತಿದೆ.. ಕಳೆದ ಆರು ತಿಂಗಳಿಂದ ‌ಅವರ ಬೆಂಬಲಿಗರು ಏನೇ ಒತ್ತಡ ಹಾಕಿದ್ರು..ರಾಹುಲ್ ಗಾಂಧಿ ಕರೆದು ರಾಜೀನಾಮೆ ಕೊಟ್ಟು ಡಿ.ಕೆ‌ ಶಿವಕುಮಾರ್‌ಗೆ ಅವಕಾಶ ಕೊಡಿ ಅಂದಾಗ ಮರು ಮಾತನಾಡದೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಡಿಕೆ ಶಿವಕುಮಾರ್ ಜತೆ ನಿಲ್ಲುವಂತೆ ಶಾಸಕರಿಗೆ ಹೇಳಿದ್ದಾರೆ. ಸಿದ್ದರಾಮಯ್ಯ ಆ ಸ್ಥಾನವನ್ನ ಇಷ್ಟು ಸುಲಭವಾಗಿ ಬಿಟ್ಟು ಕೊಡ್ತಾರೆ ಅಂತ ಅವರ ಸುತ್ತಮುತ್ತಲಿನವರೇ ಅಲ್ಲ, ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಸಹ ಅಂದಾಜು ಮಾಡಿರಲಿಲ್ಲ. ಅಷ್ಟು ಸುಲಭವಾಗಿ ಕಾಂಗ್ರೆಸ್ ಹೈಕಮಾಂಡ್ ಮಾತಿಗೆ ಬೆಲೆ ಕೊಟ್ಟು ಸ್ಥಾನದಿಂದ ಕೆಳಗಿಳಿದ ಹೊಸ ನಾಯಕತ್ವದಲ್ಲಿ ಸರ್ಕಾರ ರಚನೆ ಮಾಡಲು ಸಹಕಾರ ನೀಡಿದ್ದಾರೆ.

ಇದು ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಯಾವುದೇ ರಾಜ್ಯದಲ್ಲಿ ಇಷ್ಟು ಸುಲಭವಾಗಿ ಅಧಿಕಾರ ಹಸ್ತಾಂತರ ಆಗಿರಲಿಲ್ಲ. ಹೀಗಾಗಿ ಪಕ್ಷಾತೀತಾವಾಗಿ ಸಿದ್ದರಾಮಯ್ಯ ಅವರನ್ನ ಗುಣಗಾನ ಮಾಡ್ತಿದ್ದಾರೆ. ಇನ್ನೂ ಮುಂದೆ ಇದನ್ನ ಡಿ.ಕೆ ಶಿವಕುಮಾರ್ ಯಾವ ರೀತಿ ತೆಗೆದುಕೊಂಡು ಹೋಗ್ತಾರೆ ಅನ್ನೋದರ ಮೇಲೆ 2028 ರ ವಿಧಾನ ಸಭಾ ಫಲಿತಾಂಶ ಬರಲಿದೆ. ಎಲ್ಲರನ್ನೂ ಕಾಂಗ್ರೆಸ್ ಶಾಸಕರು ಅಂತ ನಿರ್ಧಾರ ಮಾಡಿ ಮುಂದುವರೆದ್ರೆ ಕುಂಬಕರ್ಣನ ನಿದ್ರೆಯಲ್ಲಿ ಇರೋ ರಾಜ್ಯ ಬಿಜೆಪಿಯನ್ನ ಮತ್ತೊಮ್ಮೆ ವಿಪಕ್ಷ ಸ್ಥಾನದಲ್ಲಿ ಕೂರಿಸುವುದು ಕಷ್ಟವಾಗಲ್ಲ. ಇಲ್ಲ ಅಂದು ಸಿದ್ದರಾಮಯ್ಯ ಪರವಾಗಿ ಮಾತನಾಡಿದ್ರು. ಇವರು ನನ್ನ ಪರವಾಗಿ ಮಾತನಾಡಿದ್ರು ಅಂತ ಹೋದ್ರೆ ಬಿಜೆಪಿ, ಜೆಡಿಎಸ್‌ಗೆ ಸೇರಿ ಮೈತ್ರಿ ಸರ್ಕಾರ ರಚನೆ ಮಾಡಿದ್ರು ಅಚ್ಚರಿಯಿಲ್ಲ.

ದೇಶದ ಪ್ರಧಾನಿಯಾಗಿ ಇಲ್ಲಿಯವರೆಗೂ ನೆಹರು ಹಾಗೂ ಇಂದಿರಾಗಾಂಧಿ ಧೀರ್ಘಕಾಲದ ಪ್ರಧಾನ ಮಂತ್ರಿಗಳಾಗಿ ಕೆಲಸ ‌ಮಾಡಿದ ರೆಕಾರ್ಡ್ ಇತ್ತು. ಶೇಕಡಾ 30 ಕೋಟಿ ಜನಸಂಖ್ಯೆ, ಶೇಕಡಾ 30 ಕಿಂತಲೂ ಕಡಿಮೆ ಇದ್ದ ಅಕ್ಷರಸ್ಥರ ಸಂಖ್ಯೆ, ಕಿತ್ತು ತಿನ್ನುವ ಬಡತನದ ನಡುವೆ ದೇಶ ಮುನ್ನಡೆಸಿದ ಕೀರ್ತಿ ನೆಹರುಗೆ ಸಲ್ಲುತ್ತದೆ. ಆದ್ರೆ ಪಾಕಿಸ್ತಾನ ಭಾರತದ ನಡುವೆ ಇದ್ದ ಜಮ್ಮುಕಾಶ್ಮೀರ ಸಮಸ್ಯೆಯನ್ನ ಇನ್ನಷ್ಟು ದುಪ್ಪಟ್ಟು ಮಾಡಿದ್ದು ಸಹ ನೆಹರು ರಾಜತಾಂತ್ರಿಕ ಕಾರಣಗಳಿಂದಲೇ. ಇದು ಇಂದಿಗೂ ಬಿಜೆಪಿಗೆ ದೇಶದಲ್ಲಿ ಬಹುದೊಡ್ಡ ಅಸ್ತ್ರವಾಗಿದೆ.

1990 ರ ಬಳಿಕ ದೇಶದಲ್ಲಿ ಆದ ನಗರೀಕರಣ, ಜಾಗತಿಕಾರಣದ ಕ್ರಾಂತಿಯಿಂದ ದೇಶವೂ ಕಿತ್ತು ತಿನ್ನುವ ಬಡತನದಿಂದ ಮೇಲೇಲುವುದಕ್ಕೆ ಕಾರಣವಾಯಿತು. ಅದೆಷ್ಟೋ ಊರುಗಳಿಗೆ ಇದ್ದ ಕಾಲು ದಾರಿಗೆ ಟಾರ್ ಬಿತ್ತು. ಅದೆಷ್ಟೋ ಊರುಗಳಿಗೆ ಶಾಲೆ ಬಂತು. ಕೈಗಾರಿಕೆಗಳು ರಾಜಧಾನಿಗಳಿಂದ ಟು ಟೈರ್ ಸಿಟಿಗಳಿಗೂ ಬಂದ್ವು. ಇನ್ನೂ 2000 ಇಸವಿ ಅಷ್ಟೋತ್ತಿಗೆ ದೇಶದ ಅಭಿವೃದ್ಧಿ ರಥ ಜೋರಾಗಿ ಓಡಲು ಶುರುವಾಯಿತು. ವಾಜಪೇಯಿ ದೇಶವನ್ನ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನ ಅಭಿವೃದ್ಧಿ ಶೀಲರಾಷ್ಟ್ರಗಳ ಸಾಲಿಗೆ ತೆಗೆದುಕೊಂಡು ಹೋಗುವಲ್ಲಿ ಸಕ್ಸಸ್ ಆದ್ರು.

2004 ರಲ್ಲಿ ವಾಜಪೇಯಿ ಇಂಡಿಯಾ ಸೈನಿಂಗ್ ಅಂತ ಹೋದ್ರು ಜನರು ಯುಪಿಎಗೆ ಜೈ ಅಂದ್ರು. ಹತ್ತು ವರ್ಷಗಳ ಯುಪಿಎ ಆಡಳಿತದಲ್ಲಿ ಜನರಿಗೆ ಮಹಾತ್ಮಾ ಗಾಂಧಿ ರೋಜರ್ ಯೋಜನೆ, ರಾಜೀವ್ ಗಾಂಧಿ ವಸತಿ ಯೋಜನೆ, ಬಂಡವಾಳ ಹೂಡಿಕೆಗೆ ಮುಕ್ತ ಅವಕಾಶ ಕೊಟ್ರು. ಆರ್ಟಿಐ ಹಾಗೂ ಆರ್ ಟಿಇ ಅಂತ ಕ್ರಾಂತಿಕಾರಕ ಯೋಜನೆಗಳನ್ನ ಜಾರಿ ಮಾಡಿದ್ರು.. ಯುಪಿಎ 2 ಅವಧಿಯಲ್ಲಿ ಕೇಳಿ ಬಂದ ಕಾಮನ್ ವೆಲ್ತ್ ಹಗರಣ, ಕಲ್ಲಿದ್ದಲು ಹಗರಣ ಸೇರಿದಂತೆ ಯುಪಿಎಯನ್ನ ಹಗರಣಗಳ ಸಾಲಿನಲ್ಲಿ ತಂದು ನಿಲ್ಲಿಸಿ, ಗುಜರಾತ್‌‌ಗೆ ಅಭಿವೃದ್ಧಿ ರುಚಿ ತೋರಿಸಿದ್ದ ಮೋದಿ ನೇತೃತ್ವದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಸಂಸತ್ ಪ್ರವೇಶ ಮಾಡ್ತು.

ಗುಜರಾತಿನಲ್ಲಿ ಮಾಡಿದ ಅಭಿವೃದ್ಧಿ ಜಪ ಕಳೆದ ಹದಿನೈದು ವರ್ಷಗಳಿಂದ ಮೋದಿ ಹೆಸರಲ್ಲಿ ಬಿಜೆಪಿ ಮಾಡ್ತಿದೆ. ದೇಶದ ಅಭಿವೃದ್ಧಿ ವಿಚಾರದಲ್ಲಿ ಈ ಹಿಂದೆ ಅಡಿಪಾಯ ಹಾಕಿದ್ದ ಪಿಎಂಗಳಿಗಿಂತಲೂ ಸ್ಪೀಡ್ ಆಗಿ ರಥವನ್ನ ಮೋದಿ ಮುನ್ನಡೆಸಿದ್ದಾರೆ. ಬ್ಯಾಂಕ್ ವ್ಯವಹಾರವೇ ಗೊತ್ತಿಲ್ಲದ ಭಾರತದ ಕಟ್ಟಕಡೆಯ ಹಳ್ಳಿಗೂ ಈಗ ಯುಪಿಐ ಪರಿಚಯ ಮಾಡಿದ್ದಾರೆ. ವಿದೇಶಾಂಗ ನೀತಿಯಲ್ಲಿ ಬಾರಿ ಬದಲಾವಣೆ ತರಲು ಪ್ರಯತ್ನ ಮಾಡಿದ್ದಾರೆ. ದೇಶದ ಗಡಿಯಲ್ಲಿ ಸೈನಿಕರಿಗೆ ಆಧುನಿಕ ಶಸ್ತ್ರಾಸ್ತ್ರಗಳನ್ನ ಕೊಡುವಲ್ಲಿ ಸಕ್ಸಸ್ ಆಗಿದ್ದಾರೆ. ಪಾಕಿಸ್ತಾನಕ್ಕೆ ಸಮಯ ಬಂದಾಗ ಬಾಲ ಕಟ್ ಮಾಡಿ ತೋರಿಸಿದ್ದಾರೆ.

ದೇಶದಲ್ಲಿ ಮೂರು ಮೂರು ಬಾರಿ ಸುಭದ್ರ ಸರ್ಕಾರ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇಷ್ಟು ಸಾಧನೆಗಳ ನಡುವೆ ಹಲವು ವೈಪಲ್ಯಗಳು ಮೋದಿ ಬೆನ್ನಿಗೆ ಕಟ್ಟಿಕೊಂಡಿದ್ದಾರೆ.

ದೇಶದಲ್ಲಿ ಬಡವರ ಜೀವನ ಕನಿಷ್ಠ ಸ್ಥಿತಿಗೆ ಬಂದು ನಿಂತಿದೆ. ಕಪ್ಪು ಹಣ ತರ್ತಿನಿ ಬಡವರ ಅಕೌಂಟ್‌ಗೆ ಹಾಕ್ತೀನಿ ಅಂದಿದ್ದು ಸುಳ್ಳು ಆಗಿದೆ. ಚೈನಾ ಗಡಿ ಕ್ಯಾತೆಯಲ್ಲಿ ಮೌನವಹಿಸಿದ್ದು ಮೋದಿಗೆ ನೆಗೆಟಿವ್ ಆಗಿದೆ. 12 ವರ್ಷಗಳ ತಮ್ಮ ಸಾಧನೆಯನ್ನ ಹೇಳುವುದಕ್ಕೆ ಮಾಧ್ಯಮಗಳ ಮುಂದೆ ಬರದಿರುವುದು, ಚುನಾವಣಾ ಆಯೋಗ ನಡೆದುಕೊಳ್ಳುತ್ತಿರುವ ರೀತಿ ಸಹ ಮೋದಿ ಇಮೇಜ್ ಬಗ್ಗೆ ಜನರು ಮಾತನಾಡುವಂತಾಗಿದೆ.

ಪ್ರಧಾನಿ ಮೋದಿ ಏನೇ ಮಾಡಿದ್ರು ದೇಶದಲ್ಲಿ ಸದ್ಯ ಸೇಲ್ ಆಗ್ತಿದೆ. ಎಲ್ಲಾ ರಾಜ್ಯಗಳ ಜನ‌ ಅದನ್ನ ಮುಗಿಬಿದ್ದು ಖರೀದಿ ಮಾಡ್ತಿದ್ದಾರೆ. ಇದರ ನೇರ ಉತ್ತರ ಹಲವು ರಾಜ್ಯಗಳ ಫಲಿತಾಂಶ ನಮ್ಮ ಕಣ್ಣು ಮುಂದೆ ಇದೆ. ಪಶ್ಚಿಮ ಬಂಗಾಳದಂತಹ ರಾಜ್ಯದಲ್ಲಿ ಮಮತಾ ಬ್ಯಾನರ್ಜಿ ಸೋಲಿಸಿದ್ದಲ್ಲ, ಟಿಎಂಸಿಗೆ ಉಳಿಗಾಲ ಇಲ್ಲ ಅನ್ನೋ ರೀತಿ ಮಾಡಿಟ್ಟಿದ್ದಾರೆ. ಒಟ್ಟಾರೆ 12 ವರ್ಷಗಳ ಸುಧೀರ್ಘ ಆಡಳಿತದಲ್ಲಿ ಒಂದೇ ಒಂದು ಆರೋಪ ಮೋದಿ ವಿರುದ್ಧ ಬರದಿರುವುದು ಮಾತ್ರ ಗ್ರೇಟ್. ಈ ವಿಚಾರದಲ್ಲಿ ಮೋದಿ ಹಿಂದಿನ ಪಿಎಂ ಗಳಿಗೆ ಹೋಲಿಕೆ ಮಾಡಿದ್ರೆ ಸಕ್ಸಸ್ ಫುಲ್ ಪಿಎಂ ಅನ್ನೋದರಲ್ಲಿ ಎರಡು ಮಾತಿಲ್ಲ..

ದೇಶದ ಬಿಜೆಪಿ ಮೋದಿ ಹೆಸರಲ್ಲಿ ರಾಜಕೀಯ ಮಾಡ್ತಿದ್ರೆ. ಇತ್ತ ರಾಹುಲ್ ಗಾಂಧಿ ನೇರವಾಗಿ ಮೋದಿ ಕೇಂದ್ರ ಸರ್ಕಾರ ಟಾರ್ಗೆಟ್ ಮಾಡಿ ಮಾತನಾಡುತ್ತಿದ್ದಾರೆ. ಆದ್ರೆ ಬಿಜೆಪಿ ವಿರುದ್ಧ ಯಾವ ಅಸ್ತ್ರಗಳನ್ನ ಬಳಸಬೇಕು. ಯುವಕರಿಗೆ ಹೇಗೆ ಅವಕಾಶ ಕೊಡಬೇಕು. ವ್ಯಕ್ತಿ ನಿಷ್ಠೆ ಬಿಟ್ಟು ಪಕ್ಷ ನಿಷ್ಠೆಯ ಪಾಠ ಮಾಡುವಲ್ಲಿ ವಿಫಲರಾಗುತ್ತಿದ್ದಾರೆ. ಈ ವಿಚಾರದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನ ರಾಹುಲ್ ಗಾಂಧಿ ತಂದ್ರೆ ಮುಂದೆ ಪಕ್ಷಕ್ಕೆ ಉಳಿಗಾಲ.

Exit mobile version