ಹೊಸ ವರ್ಷಕ್ಕೆ ‘ಕಿಕ್’ ಕೊಟ್ಟ ಎಣ್ಣೆ..! ಅಬಕಾರಿ ಇಲಾಖೆಗೆ ಭರ್ಜರಿ ಆದಾಯ

Untitled design 2026 01 01T153140.304

ಬೆಂಗಳೂರು: ಹೊಸ ವರ್ಷ 2025ಕ್ಕೆ ಅದ್ಧೂರಿ ಸ್ವಾಗತ ಸಿಕ್ಕ ಬೆನ್ನಲ್ಲೇ, ರಾಜ್ಯದ ಅಬಕಾರಿ ಇಲಾಖೆಗೂ ಭರ್ಜರಿ ಲಾಭವಾಗಿದೆ. ವರ್ಷದ ಆರಂಭದಲ್ಲೇ ಮದ್ಯ ಪ್ರಿಯರು ಅಬಕಾರಿ ಖಜಾನೆಯನ್ನು ತುಂಬಿಸಿದ್ದು, ಕಳೆದ ಮೂರು ವರ್ಷಗಳ ದಾಖಲೆಗಳನ್ನು  ಉಡೀಸ್‌ ಮಾಡಿ ಈ ಬಾರಿ ಅತೀ ಹೆಚ್ಚು ಮದ್ಯ ಮಾರಾಟ ವಾಗಿದೆ. ನಿರೀಕ್ಷೆಗೂ ಮೀರಿ ಐಎಂಎಲ್ (IML) ಹಾಗೂ ಬಿಯರ್ ಬಾಕ್ಸ್‌ಗಳು ಮಾರಾಟವಾಗಿದೆ.

ಮೂರು ವರ್ಷಗಳಲ್ಲೇ ಗರಿಷ್ಠ ಮಾರಾಟ

ಕಳೆದ ಮೂರು ವರ್ಷಗಳ ಅಂಕಿಅಂಶಗಳನ್ನು ಗಮನಿಸಿದರೆ, ಈ ಬಾರಿಯ ಮದ್ಯ ಮಾರಾಟವು ಐತಿಹಾಸಿಕ ಏರಿಕೆ ಕಂಡಿದೆ. ಕೇವಲ ಹೊಸ ವರ್ಷದ ಹಿಂದಿನ ಮೂರು ದಿನಗಳಲ್ಲಿ ನಡೆದ ವಹಿವಾಟು ಅಬಕಾರಿ ಇಲಾಖೆಯನ್ನೇ ಅಚ್ಚರಿಗೊಳಿಸಿದೆ. 2024ಕ್ಕೆ ಹೋಲಿಸಿದರೆ 2025ರ ಆರಂಭದಲ್ಲಿ ಮದ್ಯದ ಮಾರಾಟ ಹಾಗೂ ಆದಾಯದಲ್ಲಿ ಭಾರೀ ವ್ಯತ್ಯಾಸ ಕಂಡುಬಂದಿದೆ.

ಐಎಂಎಲ್ ಮತ್ತು ಬಿಯರ್ ಮಾರಾಟದ ವಿವರ

ಈ ಬಾರಿಯ ಸಂಭ್ರಮಾಚರಣೆಯಲ್ಲಿ ಮದ್ಯ ಪ್ರಿಯರು ಹೆಚ್ಚಾಗಿ ಐಎಂಎಲ್ ಹಾಗೂ ಬಿಯರ್ ಕಡೆಗೆ ಒಲವು ತೋರಿದ್ದಾರೆ.

ಮದ್ಯ ಮಾರಾಟದ ಪ್ರಮಾಣ ಹೆಚ್ಚಾದಂತೆ ರಾಜ್ಯ ಸರ್ಕಾರದ ಆದಾಯವೂ ಗಗನಕ್ಕೇರಿದ್ದು, ಕಳೆದ ವರ್ಷ ಅಬಕಾರಿ ಇಲಾಖೆಗೆ 540.86 ಕೋಟಿ ರೂಪಾಯಿ ಆದಾಯ ಬಂದಿತ್ತು. ಆದರೆ ಈ ಬಾರಿ ಅಬಕಾರಿ ಇಲಾಖೆಯ ನಿರೀಕ್ಷೆಯನ್ನೂ ಮೀರಿ ಬರೋಬ್ಬರಿ 745.84 ಕೋಟಿ ರೂಪಾಯಿ ಆದಾಯ ಹರಿದುಬಂದಿದೆ. ಇದು ಕಳೆದ ವರ್ಷಕ್ಕಿಂತ ಸುಮಾರು 200 ಕೋಟಿಗೂ ಅಧಿಕ ಹೆಚ್ಚಿನ ಆದಾಯವಾಗಿದೆ.

ಒಟ್ಟಾರೆ ಹೊಸ ವರ್ಷದ ಸ್ವಾಗತವು ಅಬಕಾರಿ ಇಲಾಖೆಗೆ ಆರ್ಥಿಕವಾಗಿ ಹೊಸ ಚೈತನ್ಯ ನೀಡಿದೆ. ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಸಂಭ್ರಮಾಚರಣೆಯ ನೆಪದಲ್ಲಿ ನಡೆದ ಈ ಮದ್ಯದ ಹೊಳೆ, ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಲಾಭ ತಂದಿದೆ.

Exit mobile version