ಮದ್ಯ ಮಾರಾಟ ಕುಸಿತ..! ಕರ್ನಾಟಕದಲ್ಲಿ ಶೇ 20% ಬೆಲೆ ಇಳಿಕೆ

Untitled design (65)

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮದ್ಯದ ಬೆಲೆಗಳಲ್ಲಿ ಮಾಡಲಾದ ಪದೇ ಪದೇದ ಹೆಚ್ಚಳವು ರಾಜ್ಯದ ಮದ್ಯ ವ್ಯಾಪಾರದ ಮೇಲೆ ಗಂಭೀರ ಪರಿಣಾಮ ಬೀರಿದೆ. ಅಬಕಾರಿ ಇಲಾಖೆಯ ಅರ್ಧ-ವಾರ್ಷಿಕ ಡೇಟಾ ಪ್ರಕಾರ, ಕಳೆದ ಆರು ತಿಂಗಳಲ್ಲಿ ಮದ್ಯದ ಮಾರಾಟ ಗಮನಾರ್ಹವಾಗಿ ಕುಸಿದಿದೆ. ಸರ್ಕಾರದ ಸುಂಕ ನೀತಿಯಿಂದಾಗಿ ಸಾಮಾನ್ಯ ಮದ್ಯಪಾನಿಗಳಿಂದ ಹಿಡಿದು ಮಾರಾಟಗಾರರವರೆಗೆ ಎಲ್ಲರ ಮೇಲೆ ಆರ್ಥಿಕ ಒತ್ತಡ ಉಂಟಾಗಿದೆ.

ರಾಜ್ಯದ ಮದ್ಯ ವ್ಯಾಪಾರದ ಕುಸಿತವನ್ನು ಸ್ಪಷ್ಟವಾಗಿ ತೋರಿಸುವ ಅಂಕಿ-ಅಂಶಗಳು ಇವು:

ಮಾರಾಟದ ಮೇಲೆ ಪದೇ ಪದೇ ಬೆಲೆ ಹೆಚ್ಚಳದ ಪ್ರಭಾವವನ್ನು ಮದ್ಯ ಮಾರಾಟಗಾರರು ಈಗಾಗಲೇ ಅನುಭವಿಸುತ್ತಿದ್ದಾರೆ. ಅನೇಕ ಮಾರಾಟಗಾರರು ಕಳೆದ ವರ್ಷದ ಹೋಲಿಕೆಯಲ್ಲಿ ಈ ವರ್ಷ 15% ರಿಂದ 20% ರವರೆಗೆ ಮಾರಾಟ ಕುಸಿತ ಕಂಡಿದೆಯೆಂದು ವರದಿ ಮಾಡಿದ್ದಾರೆ.

ಬೆಲೆ ಹೆಚ್ಚಳದ ಪ್ರಭಾವ ಸಾಮಾನ್ಯ ಗ್ರಾಹಕರ ಮೇಲೆಯೂ ಬಿದ್ದಿದೆ. ಮದ್ಯ ಪರಿಯನೊಬ್ಬ ಮೂರು ಬಿಯರ್ ಕುಡಿಯುತ್ತಿದ್ದ ನಮ್ಮ ಗುಂಪು ಈಗ ಒಂದೇ ಬಿಯರ್ ಕುಡಿಯುವಂತಾಗಿದೆ ಎಂದು ಹೇಳಿದ್ದಾನೆ. ಸರ್ಕಾರವು 100 ರೂಪಾಯಿಗೆ ಒಂದು ಬಿಯರ್ ನೀಡುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಮಾರಾಟಗಾರರು ತಿಳಿಸಿರುವ ಪ್ರಕಾರ, ಪ್ರತಿ ತಿಂಗಳೂ ಬಿಯರ್ ಮಾರಾಟದಲ್ಲಿ ಇಳಿಕೆ ಕಂಡು ಬರುತ್ತಿದೆ.

ಮಾರಾಟ ಕುಸಿದರೂ, ಸುಂಕ ಮತ್ತು ಬೆಲೆ ಹೆಚ್ಚಳದ ಮೂಲಕ ರಾಜ್ಯ ಸರ್ಕಾರಕ್ಕೆ ಭರ್ಜರಿ ಆದಾಯವನ್ನು ಉತ್ಪಾದಿಸುತ್ತಿದೆ. ಆದರೆ, ಈ ನೀತಿಯ ದೀರ್ಘಕಾಲೀನ ಪರಿಣಾಮವಾಗಿ ಮಾರಾಟ ಸತತವಾಗಿ ಕುಸಿಯುತ್ತಿದೆ, ಇದು ಅಂತಿಮವಾಗಿ ಆದಾಯದ ಮೇಲೂ ಪರಿಣಾಮ ಬೀರಬಹುದು.

Exit mobile version