ಹೋಟೆಲ್‌ ಆಹಾರದ ಬೆಲೆ ಕಡಿಮೆಯಾಗಲ್ಲ:ಜಿ.ಕೆ.ಶೆಟ್ಟಿ

Untitled design 2025 09 29t164133.421

ಇತ್ತೀಚಿಗೆ ಹೋಟೆಲ್‌ ಬಿಲ್‌ಗಳ ದರ ಕಡಿಮೆಯಾಗಿಲ್ಲ ಎಂದು ಸುದ್ದಿಯಾಗಿತ್ತು ಇದಕ್ಕೆ ರಾಜ್ಯ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಜಿ.ಕೆ. ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.ಹೊಟೇಲ್ ವ್ಯವಹಾರದ ಮೇಲೆ ಪರಿಣಾಮ ಬೀರುವ ಹಲವಾರು ಅಂಶಗಳನ್ನು ಅಧ್ಯಕ್ಷ ಜಿ.ಕೆ. ಶೆಟ್ಟಿ ವಿವರಿಸಿದ್ದಾರೆ.

ಹೊಟೇಲ್ ಮಾಲೀಕರು ತಮ್ಮ ಖರ್ಚು ಕಡಿಮೆ ಮಾಡಲು ಸರ್ಕಾರದಿಂದ ನಿರ್ದಿಷ್ಟ ಕ್ರಮಗಳನ್ನು ನಿರೀಕ್ಷಿಸುತ್ತಿದ್ದಾರೆ. ಶೆಟ್ಟಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ, “ಆಸ್ತಿ ಮತ್ತು ಬಾಡಿಗೆ ಮೇಲಿನ ತೆರಿಗೆ ಕಡಿಮೆ ಮಾಡಿದ್ರೆ ಮಾತ್ರ ಹೊಟೇಲ್ ದರ ಇಳಿಕೆ ಸಾಧ್ಯ.” ಬಾಡಿಗೆ ಮತ್ತು ಆಸ್ತಿ ತೆರಿಗೆ ಹೊಟೇಲ್‌ಗಳ ಮುಖ್ಯ ಖರ್ಚು ಎಂದು ಅವರು ಒತ್ತಿಹೇಳಿದರು.

ಕೇಂದ್ರ ಸರ್ಕಾರವು ಹೊಟೇಲ್ ಸೇವೆಗಳ ಮೇಲಿನ ಜಿಎಸ್ಟಿ ದರವನ್ನು ಕಡಿಮೆ ಮಾಡಿದ್ದರೂ, ಇದರ ಪ್ರಯೋಜನ ಹೊಟೇಲ್ ಮಾಲೀಕರಿಂದ ಗ್ರಾಹಕರಿಗೆ ದರ ಇಳಿಕೆಯ ರೂಪದಲ್ಲಿ ಹಾದುಹೋಗಲು ಇತರೆ ಆರ್ಥಿಕ ಒತ್ತಡಗಳು ಅಡ್ಡಿಯಾಗಿವೆ. ಹೊಟೇಲ್ ಮಾಲೀಕರ ಸಂಘದ ವಾದವೆಂದರೆ, ಸರ್ಕಾರವು ವ್ಯವಸ್ಥೆಯ ಮೂಲಭೂತ ಖರ್ಚನ್ನು ಕಡಿಮೆ ಮಾಡದಿದ್ದರೆ, ಜಿಎಸ್ಟಿ ಕಡಿತವು ಪ್ರಯೋಜನಕಾರಿಯಾಗುವುದಿಲ್ಲ.

Exit mobile version