ಸರಸ್ವತಿ ಪುತ್ರ ಎಸ್‌ಎಲ್‌ ಭೈರಪ್ಪ ನಿಧನ ; ಮಿಡಿದ ದೇವೇಗೌಡರ ಹೃದಯ

Untitled design (55)

ಬೆಂಗಳೂರು; ಕನ್ನಡ ಸಾಹಿತ್ಯದ ಶಿಖರಪುರುಷರಾದ, ಪದ್ಮಭೂಷಣ ಡಾ. ಎಸ್.ಎಲ್. ಭೈರಪ್ಪನವರ ನಿಧನದ ಸುದ್ದಿಗೆ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರು ಪ್ರತಿಕ್ರಿಯಿಸಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಭರಿಸಲಾಗದ ನಷ್ಟವಾಗಿದೆ ಎಂದು ಶೋಕ ಸಂದೇಶದ ತಿಳಿಸಿದ್ದಾರೆ.

ದೇವೇಗೌಡರು ಸರಸ್ವತಿ ಸಮ್ಮಾನ್ ಪುರಸ್ಕೃತರಾದ, ಮೇರು ಲೇಖಕ ಡಾ. ಭೈರಪ್ಪನವರು ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಯಿತು. ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಅವರು ನೀಡಿದ ಉತ್ಕೃಷ್ಟ ಕಾದಂಬರಿಗಳು ಅಜರಾಮರವಾಗಿವೆ. ವಂಶ, ಪರ್ವ, ಮಂಡ್ರಾ ಮುಂತಾದ ಅವರ ಕೃತಿಗಳು ಲಕ್ಷಾಂತರ ಓದುಗರ ಮನಗೆದ್ದಿವೆ. ಅವರ ಅಗಲಿಕೆ ಕನ್ನಡ ಸರಸ್ವತ ಲೋಕಕ್ಕೆ ನಷ್ಟವಾಗಿದೆ.

ಭೈರಪ್ಪನವರ ಸಾಹಿತ್ಯಿಕ ಚಿಂತನೆ ಮತ್ತು ಗಾಢ ಅಧ್ಯಯನವು ಅನೇಕ ಪೀಳಿಗೆಗಳಿಗೆ ಪ್ರೇರಣೆಯಾಗಿದೆ. ಅವರ ಬರಹಗಳು ಭಾರತೀಯ ತತ್ವಶಾಸ್ತ್ರ ಮತ್ತು ಸಮಾಜಶಾಸ್ತ್ರದ ಆಳವಾದ ಅರ್ಥವನ್ನು ಪರಿಶೋಧಿಸಿದೆ. ಈ ದುಃಖದ ಸಮಯದಲ್ಲಿ, ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬ ಸದಸ್ಯರು, ಸಂಬಂಧಿಗಳು ಮತ್ತು ಅಗಾಧ ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ,” ಎಂದು ದೇವೇಗೌಡರು ಕಂಬನಿ ಮಿಡಿದಿದ್ದಾರೆ.

Exit mobile version