ಗಣರಾಜ್ಯೋತ್ಸವ ಭಾಷಣಕ್ಕೆ ರಾಜ್ಯಪಾಲರು ಗ್ರೀನ್ ಸಿಗ್ನಲ್

Untitled design 2026 01 24T162305.757

ಬೆಂಗಳೂರು: ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸತತ ಸಂಘರ್ಷದ ನಂತರ, ಗಣರಾಜ್ಯೋತ್ಸವದ ಭಾಷಣದ ವಿಚಾರದಲ್ಲಿ ರಾಜ್ಯ ಸರ್ಕಾರಸ ಗೊಂದಲಕ್ಕೆ ಸದ್ಯ ಬ್ರೆಕ್‌ ಬಿದ್ದಿದೆ. ಜನವರಿ 26 ರಂದು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲರು ಮಾಡುವ ಭಾಷಣಕ್ಕೆ ರಾಜಭವನವು ಅಧಿಕೃತ ಮುದ್ರೆ ಒತ್ತಿದೆ.

ಎಚ್ಚರಿಕೆ ಹೆಜ್ಜೆ ಇಟ್ಟ ಸರ್ಕಾರ

ಕಳೆದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಕೇವಲ ಒಂದೇ ನಿಮಿಷದಲ್ಲಿ ಸದನದಿಂದ ಹೊರನಡೆದ ಘಟನೆಯಿಂದ ಪಾಠ ಕಲಿತಿರುವ ಸಿದ್ದರಾಮಯ್ಯ ಸರ್ಕಾರ, ಈ ಬಾರಿ ಅತ್ಯಂತ ಜಾಗರೂಕತೆಯಿಂದ ಹೆಜ್ಜೆ ಇಟ್ಟಿದೆ. ರಾಜಭವನದ ಆಕ್ಷೇಪಕ್ಕೆ ಗುರಿಯಾಗಬಹುದಾದ ಕೇಂದ್ರ ಸರ್ಕಾರದ ವಿರುದ್ಧದ ನೇರ ಮತ್ತು ಕಠಿಣ ಟೀಕೆಗಳನ್ನು ಈ ಬಾರಿ ಭಾಷಣದ ಕರಡಿನಿಂದ ಕೈಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪರಿಶೀಲನೆ ನಡೆಸಿ ಒಪ್ಪಿಗೆ ನೀಡಿದ ರಾಜ್ಯಪಾಲರು

ಸರ್ಕಾರವು ಇತ್ತೀಚೆಗಷ್ಟೇ ಭಾಷಣದ ಅಂತಿಮ ಪ್ರತಿಯನ್ನು ಲೋಕಭವನಕ್ಕೆ (ರಾಜಭವನ) ಕಳುಹಿಸಿಕೊಟ್ಟಿತ್ತು. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ ಅವರು ಸಂಪೂರ್ಣ ಭಾಷಣವನ್ನು ಪರಿಶೀಲಿಸಿದ್ದು, ಅದರಲ್ಲಿ ಸಂವಿಧಾನಾತ್ಮಕ ಮೌಲ್ಯಗಳು ಹಾಗೂ ಸರ್ಕಾರದ ಸಾಧನೆಗಳಿಗೆ ಹೆಚ್ಚಿನ ಒತ್ತು ನೀಡಿರುವುದನ್ನು ಗಮನಿಸಿ ಓದಲು ಸಮ್ಮತಿ ನೀಡಿದ್ದಾರೆ. ಜಂಟಿ ಅಧಿವೇಶನದ ಭಾಷಣದಲ್ಲಿ ಸುಮಾರು 11 ಪ್ಯಾರಾಗಳಿಗೆ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದರು, ಆದರೆ ಈ ಬಾರಿ ಅಮಥಹ ಯಾವುದೇ ಪದ ಬಳಕೆ ಮಾಡದೇ ರಾಜ್ಯಪಾಲರ ಸೂಚನೆಯಂತೆ ಭಾಷಣ ತಯಾರಿಸಿದೆ.

ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮವು ಅತ್ಯಂತ ಮಹತ್ವದ್ದಾಗಿದ್ದು, ಅಲ್ಲಿ ಯಾವುದೇ ರೀತಿಯ ಮುಜುಗರ ಅಥವಾ ಸಂವಿಧಾನಾತ್ಮಕ ಬಿಕ್ಕಟ್ಟು ಎದುರಾಗಬಾರದು ಎಂಬುದು ಸರ್ಕಾರದ ಉದ್ದೇಶವಾಗಿದೆ. ಹೀಗಾಗಿ, ಕೇಂದ್ರ ಸರ್ಕಾರದ ವಿರುದ್ಧದ ತೆರಿಗೆ ಅನ್ಯಾಯ ಅಥವಾ ಅನುದಾನದ ಕುರಿತಾದ ವಿಷಯಗಳನ್ನ ತೆಗೆದು, ರಾಜ್ಯದ ಅಭಿವೃದ್ಧಿ ಯೋಜನೆಗಳು ಮತ್ತು ಜನರ ಕಲ್ಯಾಣದ ಕುರಿತಾದ ಸೌಮ್ಯವಾದ ಭಾಷಣಕ್ಕೆ ಸರ್ಕಾರ ಅಸ್ತು ಎಂದಿದೆ.

ಗಣರಾಜ್ಯೋತ್ಸವದ ಭಾಷಣ ನಿರಾಕರಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಬೆಂಗಳೂರು: ಕರ್ನಾಟಕದಲ್ಲಿ ರಾಜಭವನ ಮತ್ತು ರಾಜ್ಯ ಸರ್ಕಾರದ ನಡುವಿನ ಸಂಘರ್ಷ ಹೆಚ್ಚಾಗಿದೆ. ಇತ್ತೀಚೆಗೆ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ನಡೆದ ಸಂಘರ್ಷದ ಬೆನ್ನಲ್ಲೇ, ಈಗ ಜನವರಿ 26ರ ಗಣರಾಜ್ಯೋತ್ಸವದ ಭಾಷಣದ ವಿಚಾರ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ವೇದಿಕೆ ಸಿದ್ಧಪಡಿಸಿದೆ.

ವಿವಾದಕ್ಕೆ ಕಾರಣವೇನು ?

ಗಣರಾಜ್ಯೋತ್ಸವದಂದು ರಾಜ್ಯಪಾಲರು ಓದುವ ಭಾಷಣವನ್ನು ಆಯಾ ರಾಜ್ಯ ಸರ್ಕಾರವೇ ಸಿದ್ಧಪಡಿಸುತ್ತದೆ. ಆದರೆ, ಈ ಬಾರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಸಿದ್ಧಪಡಿಸಿರುವ ಭಾಷಣದ ಕರಡಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಲಾಗಿದೆ ಎನ್ನಲಾಗಿದೆ.

ಸರ್ಕಾರದ ಭಾಷಣದಲ್ಲಿರುವ ಅಂಶಗಳು:

ಈ ಅಂಶಗಳು ಭಾಷಣದಲ್ಲಿ ಇರುವುದರಿಂದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು ಕೇಂದ್ರದ ವಿರುದ್ಧದ ರಾಜಕೀಯ ಟೀಕೆಗಳನ್ನು ಓದಲು ಸಾಧ್ಯವಿಲ್ಲ ಎಂದು ಗೆಹ್ಲೋಟ್‌ ಪಟ್ಟು ಹಿಡಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯಪಾಲರ ಖಡಕ್ ಎಚ್ಚರಿಕೆ

ಸರ್ಕಾರ ನೀಡಿದ ಭಾಷಣವನ್ನು ಹಾಗೆಯೇ ಓದಲು ನಿರಾಕರಿಸಿರುವ ರಾಜ್ಯಪಾಲರು, ಒಂದು ವೇಳೆ ಸರ್ಕಾರವು ಟೀಕೆಗಳನ್ನು ತೆಗೆದುಹಾಕಿ ಭಾಷಣವನ್ನು ತಿದ್ದುಪಡಿ ಮಾಡದಿದ್ದರೆ, ನಾನೇ ಸ್ವತಃ ಸಿದ್ಧಪಡಿಸಿದ ಭಾಷಣವನ್ನು ಓದುತ್ತೇನೆ ಎಂದು ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.

ಕಳೆದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಸರ್ಕಾರದ ಭಾಷಣವನ್ನು ಪೂರ್ಣವಾಗಿ ಓದದೆ, ಕೇವಲ ಒಂದೇ ಸಾಲಿನಲ್ಲಿ ಭಾಷಣ ಮುಗಿಸಿ ಸದನದಿಂದ ಹೊರನಡೆದಿದ್ದರು. ಈ ಸಂದರ್ಭದಲ್ಲಿ ಸದನದಲ್ಲಿ ಭಾರೀ ಗದ್ದಲ ಉಂಟಾಗಿತ್ತು. ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಅವರು ರಾಜ್ಯಪಾಲರನ್ನು ತಡೆಯಲು ಪ್ರಯತ್ನಿಸಿದಾಗ ಮಾರ್ಷಲ್‌ಗಳ ಜೊತೆ ತಳ್ಳಾಟ ನಡೆದು, ಅವರ ಅಂಗಿ ಹರಿದುಹೋದ ಘಟನೆಯೂ ನಡೆದಿತ್ತು.

Exit mobile version