ಪಾರ್ಟಿ ಏನ್‌ ಹೇಳತ್ತೋ ಅದನ್ನ ನಾನೂ, ಸಿಎಂ ಒಟ್ಟಿಗೆ ಸೇರಿ ಮಾಡ್ತೀವಿ: ಡಿಕೆ ಶಿವಕುಮಾರ್‌

Untitled design 2025 10 22t174827.096

ರಾಯಚೂರು: ಕಾರ್ಯಕ್ರಮವೊಂದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಮುಂದಿನ ಉತ್ತರಾಧಿಕಾರಿ ಬಗ್ಗೆ ಸುಳಿವು ನೀಡಿದ್ದಾರೆ. ಈ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಾಯಚೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರ ‘ಸತೀಶ್ ಜಾರಕಿಹೊಳಿ ನಾಯಕತ್ವ’ ಹೇಳಿಕೆ ಕುರಿತು ಪ್ರಶ್ನೆ ಕೇಳಿದಾಗ, ಡಿಕೆಶಿ, ನನ್ನ ಹತ್ರ ಕೇಳಿದ್ರೆ.. ಏನ್ ಹೇಳಬೇಕು, ಈ ಬಗ್ಗೆ ಅವರನ್ನೇ ಹೋಗಿ ಅವರ ಬಳೀನೇ ಕೇಳಿಕೊಳ್ಳಿ. ಅವರು ಏನ್ ಹೇಳಿದ್ದಾರೋ ಅವರನ್ನೇ ಕೇಳಿ ಎಂದು ಹೇಳಿದ್ದಾರೆ.

ನನ್ನ ಬಗ್ಗೆ ಯಾರೂ ಚರ್ಚೆ ಮಾಡೋ ಅವಶ್ಯಕತೆ ಇಲ್ಲ. ನಾನು, ಸಿದ್ದರಾಮಯ್ಯ ಏನು ಅಂತ ಈಗಾಗಲೇ ಹೇಳಿದ್ದೇವೆ. ಪಾರ್ಟಿ ಏನ್ ಹೇಳುತ್ತೋ ಅದನ್ನೇ ಒಟ್ಟಿಗೆ ಇಬ್ಬರು ಸೇರಿ ಮಾಡ್ತೀವಿ ಎಂದು ಸ್ಪಷ್ಟಪಡಿಸಿದ್ದಾರೆ

ಸತೀಶ್ ಜಾರಕಿಹೊಳಿ ಅವರು ಈ ಬಗ್ಗೆ ಏನು ಪ್ರತಿಕ್ರಿಯೆ ನೀಡುತ್ತಾರೆ ಎಂಬುದು ಕೂಡ ಗಮನಾರ್ಹವಾಗಿದೆ. ಪಕ್ಷದ ಮೇಲಿನ ನಿಯಂತ್ರಣವನ್ನು ಕಾಯ್ದುಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದೂ ಮುಖ್ಯವಾಗಿದೆ.

Exit mobile version