55 ಮಠಾಧಿಪತಿಗಳ ಸಮ್ಮುಖದಲ್ಲಿ ಪೂರ್ವಾಭಿಮುಖವಾಗಿ ಪ್ರಮಾಣವಚನ ಸ್ವೀಕರಿಸಲಿರುವ ಡಿಕೆಶಿ

BeFunky collage (52)

ಕರ್ನಾಟಕದ ರಾಜಕೀಯದಲ್ಲಿ ಡಿ.ಕೆ. ಶಿವಕುಮಾರ್ ಅವರು ಅಚಲ ದೈವಭಕ್ತಿ ಹೊಂದಿದ್ದಾರೆ. ಅವರ ಈ ನಂಬಿಕೆಗೆ ಮತ್ತೊಂದು ಸಾಕ್ಷಿಯಾಗಿ, ನಾಳೆ (ಜೂನ್ 03) ಸಂಜೆ 4.05 ಗಂಟೆಗೆ ಲೋಕಭವನದ ಗಾಜಿನ ಮನೆಯಲ್ಲಿ ಸರ್ವ ಧರ್ಮಗಳ ಸ್ವಾಮೀಜಿಗಳ ಸಮ್ಮುಖದಲ್ಲೇ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಸರ್ವ ಧರ್ಮಗಳ ಸ್ವಾಮೀಜಿಗಳು, ಫಾದರ್ಗಳು ಮತ್ತು ಮೌಲ್ವಿಗಳ ಸಮ್ಮುಖದಲ್ಲಿ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸುತ್ತಿರುವುದು ವಿಶೇಷವಾಗಿದೆ. ಸರ್ಕಾರದಿಂದ ಸುಮಾರು 55 ಮಠಾಧಿಪತಿಗಳು, ಧರ್ಮಗುರುಗಳು, ಫಾದರ್ಗಳು ಹಾಗೂ ಮೌಲ್ವಿಗಳಿಗೆ ಅಧಿಕೃತ ಆಹ್ವಾನವನ್ನು ಕಳುಹಿಸಲಾಗಿದೆ.

ಸರ್ವ ಧರ್ಮ ಸಹಿಷ್ಣುತೆ, ಪರಸ್ಪರ ಸಹಬಾಳ್ವೆ ಮತ್ತು ಶಾಂತಿ-ಸೌಹಾರ್ದತೆಯ ಸಂದೇಶವನ್ನು ಸಾರುವ ಉದ್ದೇಶದಿಂದ ಡಿ.ಕೆ. ಶಿವಕುಮಾರ್ ಅವರು ಈ ಅಪರೂಪದ ನಿರ್ಧಾರ ಕೈಗೊಂಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಎಲ್ಲಾ ಧರ್ಮಗಳ ಜನರು ಒಗ್ಗಟ್ಟಾಗಿ ಬದುಕುವ ಮಾದರಿಯನ್ನು ಮುಂದಿಡಲಾಗಿದೆ.

ಪೂರ್ವಾಭಿಮುಖವಾಗಿ ಪ್ರಮಾಣವಚನ:

ಡಿ.ಕೆ. ಶಿವಕುಮಾರ್ ಅವರು ಜ್ಯೋತಿಷ್ಯವನ್ನು ಹೆಚ್ಚು ನಂಬುತ್ತಾರೆ. ಸ್ವಾಮೀಜಿಗಳು ನಿಗದಿಪಡಿಸಿದ ಶುಭ ದಿನಾಂಕ ಮತ್ತು ಸಮಯವನ್ನು ಅಚ್ಚುಕಟ್ಟಾಗಿ ಪಾಲಿಸುವ ಉದ್ದೇಶದಿಂದ ಅವರು ಪೂರ್ವಾಭಿಮುಖವಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ನಿಟ್ಟಿನಲ್ಲಿ ಲೋಕಭವನದ ಗಾಜಿನ ಮನೆಯಲ್ಲಿ ಪೂರ್ವಾಭಿಮುಖವಾಗಿ ವಿಶೇಷ ವೇದಿಕೆಯನ್ನು ನಿರ್ಮಿಸಲಾಗಿದೆ.

ಗಾಜಿನ ಮನೆಯಲ್ಲಿ ಸುಮಾರು 1,100 ಆಸನಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಸ್ವಾಮೀಜಿಗಳು, ಧರ್ಮಗುರುಗಳು, ನ್ಯಾಯಾಧೀಶರು, ವಿಶೇಷ ಆಹ್ವಾನಿತರು ಹಾಗೂ ಇತರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪ್ರತ್ಯೇಕ ಆಸನಗಳನ್ನು ಕಲ್ಪಿಸಲಾಗಿದೆ.

ಆಹ್ವಾನ ಪಟ್ಟಿಯಲ್ಲಿರುವ ಪ್ರಮುಖ ಧರ್ಮಗುರುಗಳು:
Exit mobile version