ಪಥಸಂಚಲನೆಗೆ ನಿರಾಕರಣೆ: ಹೈಕೋರ್ಟ್‌ನಲ್ಲಿ ಮೆಟ್ಟಿಲೇರಿದ RSS ಮುಖಂಡರು

Untitled design 2025 10 19t110737.633

ಕಲಬುರಗಿ: ಚಿತ್ತಾಪುರದಲ್ಲಿ ಇಂದು ಆಯೋಜಿಸಲಾಗಿದ್ದ ಆರ್.ಎಸ್.ಎಸ್ ಪಥಸಂಚಲನೆಗೆ ಜಿಲ್ಲಾಧಿಕಾರಿಗಳು ಅನುಮತಿ ನಿರಾಕರಿಸಿದ್ದಾರೆ. ಇದನ್ನ ಪ್ರಶ್ನಿಸಿ ಆರ್.ಎಸ್.ಎಸ್ ಮುಖಂಡರು ಕಲಬುರಗಿ ಹೈಕೋರ್ಟ್‌ನಲ್ಲಿ ತುರ್ತು ಅರ್ಜಿ ಸಲ್ಲಿಸಿದ್ದು, ನ್ಯಾಯಮೂರ್ತಿ ಎಂ.ಜಿ.ಎಸ್ ಕಮಲ್ ಅವರ ಪೀಠದಲ್ಲಿ ವಿಚಾರಣೆ ಆರಂಭವಾಗಿದೆ.

ಜಿಲ್ಲಾಧಿಕಾರಿಗಳ ಆದೇಶದ ನಂತರ ಆರ್.ಎಸ್.ಎಸ್ ಮುಖಂಡರು ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದಾರೆ. ನ್ಯಾಯಮೂರ್ತಿ ಎಂ.ಜಿ.ಎಸ್ ಕಮಲ್ ಅವರ ಪೀಠವು ಈ ಅರ್ಜಿಯನ್ನು ತುರ್ತು ವಿಚಾರಣೆಗೆ ತೆಗೆದುಕೊಂಡಿದೆ. 

ಅರ್ಜಿದಾರರ ಪರ ವಕೀಲರು ತಮ್ಮ ವಾದದಲ್ಲಿ, ಇಂತಹ ಪ್ರಕರಣಗಳಿಗೆ ನಿರ್ದಿಷ್ಟ ಕಾನೂನುಗಳಿಲ್ಲ. ಶಾಂತಿಯುತವಾಗಿ ಮೆರವಣಿಗೆ ನಡೆಸುವ ಹಕ್ಕು ಸಂವಿಧಾನದಲ್ಲಿ ಖಾತರಿ ಮಾಡಲಾಗಿದೆ ಮತ್ತು ಅದನ್ನು ನಿರ್ಬಂಧಿಸಲು ಸ್ಪಷ್ಟ ಕಾನೂನು ಆಧಾರ ಇರಬೇಕು.

ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಜೀವಬೆದರಿಕೆ ಹಾಕಿದ್ದನ್ನು ಖಂಡಿಸಿ ಕಳೆದ ದಿನಗಳಲ್ಲಿ ಇದೇ ಪ್ರದೇಶದಲ್ಲಿ ಬಂದ್‌ ಮತ್ತು ಪ್ರತಿಭಟನೆ ನಡೆದಿತ್ತು. ಈ ರಾಜಕೀಯ ಪರಿಸ್ಥಿತಿಯಲ್ಲಿ, ಆಡಳಿತಾತ್ಮಕವಾಗಿ ಪಥಸಂಚಲನೆ ನಿರ್ಬಂಧಿಸುವ ನಿರ್ಧಾರವನ್ನು ಕೋರ್ಟ್‌ನಲ್ಲಿ ತಿಳಿಸಲಾಗಿದೆ.

Exit mobile version