ಬೆಂಗಳೂರಿನಲ್ಲಿ ಭಾರೀ ಮಳೆ: ರಸ್ತೆಗಳು ಜಲಾವೃತ, ಜನಜೀವನ ಅಸ್ತವ್ಯಸ್ತ

Untitled design (4)

ಬೆಂಗಳೂರು, ಅಕ್ಟೋಬರ್ 11, 2025: ಸಿಲಿಕಾನ್ ಸಿಟಿಯಲ್ಲಿ ಭಾರೀ ಮಳೆಯಿಂದ ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ರಾತ್ರಿ ಸುರಿದ ಭಾರಿ ಮಳೆಗೆ ನಗರದ ಪ್ರಮುಖ ರಸ್ತೆಗಳು ಮತ್ತು ತಗ್ಗು ಪ್ರದೇಶಗಳು ನೀರಿನಲ್ಲಿ ಮುಳುಗಿವೆ. ಗುಂಡಿಬಿದ್ದ ರಸ್ತೆಗಳಲ್ಲಿ ನೀರು ಕಟ್ಟಿಕೊಂಡಿದ್ದು, ವಾಹನಗಳು ಕೆಟ್ಟು ನಿಲ್ಲುವಂತಾಗಿದೆ. ಫುಟ್‌ಪಾತ್‌ಗಳ ಮೇಲೂ ನೀರು ತುಂಬಿಕೊಂಡಿದ್ದು, ಜನರ ಓಡಾಟಕ್ಕೆ ತೊಡಕಾಗಿದೆ.

ನಗರದ ಹೃದಯಭಾಗವಾದ ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ಶಿವಾನಂದ ಸರ್ಕಲ್, ಮಲ್ಲೇಶ್ವರಂ, ಚಾಮರಾಜಪೇಟೆ, ಕಾರ್ಪರೇಶನ್, ಲಾಲ್‌ಬಾಗ್‌ನಂತಹ ಪ್ರದೇಶಗಳಲ್ಲಿ ಭಾರೀ ಮಳೆಯಿಂದ ರಸ್ತೆಗಳು ನೀರಿನಲ್ಲಿ ಕಾಣಿಸುತ್ತಿವೆ. ಇದೇ ರೀತಿ ಹೊರವಲಯದ ಎಲೆಕ್ಟ್ರಾನಿಕ್ ಸಿಟಿ, ಮಾನ್ಯತಾ ಟೆಕ್ ಪಾರ್ಕ್, ಸರ್ಜಾಪುರ, ಮಹದೇವಪುರ, ಪೀಣ್ಯ, ದಾಸರಹಳ್ಳಿ, ಕೋರಮಂಗಲ, ವಿಪ್ರೋ ಗೇಟ್, ಯಶವಂತಪುರ, ಬಿಟಿಎಂ ಲೇಔಟ್, ವರ್ತೂರು ಮತ್ತು ಬಳಗೆರೆ ಸುತ್ತಮುತ್ತಲಿನ ರಸ್ತೆಗಳೂ ಜಲಾವೃತಗೊಂಡಿವೆ. ಗುಂಡಿಬಿದ್ದ ರಸ್ತೆಗಳಲ್ಲಿ ಯಾವುದು ಗುಂಡಿ, ಯಾವುದು ರಸ್ತೆ ಎಂದೇ ಗೊತ್ತಾಗದ ಸ್ಥಿತಿಯಿದ್ದು, ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಜಾಪುರದಂತಹ ಕೆಲವು ಪ್ರದೇಶಗಳಲ್ಲಿ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಕಿಡಿಕಾರಿದ್ದಾರೆ.

ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕೆಲವೆಡೆ ಗುಡುಗು ಸಹಿತ ಮಳೆಯಾಗುತ್ತಿದ್ದು, ವಾಹನ ಸವಾರರು ಮತ್ತು ಪಾದಾಚಾರಿಗಳಿಗೆ ತೀವ್ರ ತೊಂದರೆಯಾಗಿದೆ. ಫುಟ್‌ಪಾತ್‌ಗಳ ಮೇಲೆ ನೀರು ತುಂಬಿಕೊಂಡಿರುವುದರಿಂದ ಪಾದಾಚಾರಿಗಳಿಗೆ ಓಡಾಡಲು ಕಷ್ಟವಾಗಿದೆ. ವಾಹನಗಳು ನೀರಿನಲ್ಲಿ ಕೆಟ್ಟು ನಿಲ್ಲುವುದರಿಂದ ಟ್ರಾಫಿಕ್ ಜಾಮ್‌ಗಳು ಉಂಟಾಗಿದೆ.

Exit mobile version