ಬೆಂಗಳೂರು: ಬೆಂಗಳೂರಿನಲ್ಲಿ ಲಾಡ್ಜ್ ಒಂದರಲ್ಲಿ ಪುತ್ತೂರು ಮೂಲದ ತಕ್ಷಿತ್ ಎಂಬ ಯುವಕ ನಿಗೂಢವಾಗಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಅ.17 ರಂದು ಸಂಜೆ ಲಾಡ್ಜ್‌ನ ರೂಮ್‌ನಲ್ಲಿ ಯುವಕನ ಮೃತದೇಹ ಸಿಕ್ಕಿದೆ.
ತಕ್ಷಿತ್, ರಕ್ಷಿತಾ ಎಂಬ ಯುವತಿಯ ಜೊತೆ ಬೆಂಗಳೂರಿಗೆ ಬಂದಿದ್ದರು. ಇಬ್ಬರು ವಿರಾಜಪೇಟೆ ಮೂಲದವರಾಗಿದ್ದು, ಇಬ್ಬರೂ ಸ್ವಿಗಿ ಮೂಲಕ ಆರ್ಡರ್ ಮಾಡಿದ ಊಟವನ್ನು ಒಟ್ಟಿಗೆ ಸೇವಿಸಿದ್ದರು. ಊಟದ ನಂತರ ಇಬ್ಬರಿಗೂ ಆರೋಗ್ಯ ಸಮಸ್ಯೆ ಇದ್ದರಿಂದ ಮಾತ್ರೆ ತೆಗೆದುಕೊಂಡು ಮಲಗಿದ್ದಾರೆ.ಸ್ವಲ್ಪ ಸಮಯದ ನಂತರ ರಕ್ಷಿತಾ ಲಾಡ್ಜ್‌ನಿಂದ ಹೊರಗೆ ಹೋಗಿದ್ದಾರೆ. ಆದರೆ ತಕ್ಷಿತ್ ಮಾತ್ರ ಮಲಗಿದ್ದ ಸ್ಥಿತಿಯಲ್ಲೇ ಸಾವನ್ನಪ್ಪಿದ್ದಾರೆ.
ಪೊಲೀಸರು ಯುಡಿಆರ್ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ತಕ್ಷಿತ್ ಅವರ ದೇಹವನ್ನು ಪೋಸ್ಟ್‌ಮಾರ್ಟಮ್ ಗಾಗಿ ಕಳುಹಿಸಲಾಗಿದೆ. ಸಾವಿಗೆ ನಿಕರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.ತನಿಖೆ ಇಂದ ತಿಲೀಯಬೇಕಿದೆ.