ಲಾಡ್ಜ್‌ನಲ್ಲಿ ಪೆಟ್ರೋಲ್ ಸುರಿದುಕೊಂಡು ಪ್ರೇಮಿಗಳು ಆತ್ಮಹ*ತ್ಯೆ..!

Untitled design 2025 10 09t190623.794

ಬೆಂಗಳೂರು: ಕುಟುಂಬದವರು ಪ್ರೀತಿಗೆ ಒಪ್ಪಿಕೊಳ್ಳದ ಕಾರಣಕ್ಕೆ ಹತಾಶರಾದ ಯುವಕ-ಯುವತಿ ಜೋಡಿ, ಲಾಡ್ಜ್‌ನಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಹೃದಯವಿದಾರಕ ಘಟನೆ ಯಲಹಂಕ ನ್ಯೂ ಟೌನ್‌ನಲ್ಲಿರುವ ಲಾಡ್ಜ್‌ನಲ್ಲಿ ನಡೆದಿದೆ.

ಚಿಕನ್ ಫ್ಯಾಮಿಲಿ ರೆಸ್ಟೋರೆಂಟ್ ಕಟ್ಟಡದಲ್ಲಿರುವ ಈ ಲಾಡ್ಜ್‌ಗೆ ಇಬ್ಬರು ಯುವಕ-ಯುವತಿ ಇಂದು ಮಧ್ಯಾಹ್ನ ವಾಪಸಾಗಿದ್ದರು. ಲಾಡ್ಜ್‌ನ ಸಿಬ್ಬಂದಿಯವರು ಗಮನಿಸಿದಂತೆ, ಈ ಯುವಕರು ತಮ್ಬೊಂದಿಗೆ ಪೆಟ್ರೋಲ್ ತಂದಿದ್ದರು. ಸ್ವಲ್ಪ ಸಮಯದ ನಂತರ ಕೋಣೆಯಿಂದ ಬೆಂಕಿ ಮತ್ತು ಪೆಟ್ರೋಲ್ ವಾಸನೆ ಬರಲು ಆರಂಭಿಸಿತು.

ಲಾಡ್ಜ್ ಸಿಬ್ಬಂದಿಯವರು ಕೋಣೆಯ ಬಾಗಿಲು ತೆರೆದು ನೋಡಿದಾಗ, ಇಬ್ಬರೂ ಯುವಕ-ಯುವತಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು. ಘಟನೆಯನ್ನು ಗಮನಿಸಿದ ಲಾಡ್ಜ್ ಸಿಬ್ಬಂದಿಯವರು ತಕ್ಷಣ ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ದೌಡಾದ ಅಗ್ನಿಶಾಮಕ ಸಿಬ್ಬಂದಿಗಲು ಬೆಂಕಿಯನ್ನು ನಿಯಂತ್ರಣಕ್ಕೆ ತಂದರೂ, ಆದರೆ ದುರಾದೃಷ್ಟವಾಶತ್‌ ಯುವಕ-ಯುವತಿ ಇಬ್ಬರೂ ಸಾವನ್ನಪ್ಪಿದ್ದರು. ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದು, ಮೃತ ದೇಹಗಳನ್ನು ಪೋಸ್ಟ್ ಮಾರ್ಟಮ್ ಗಾಗಿ ವೈದ್ಯಕೀಯ ಕಾಲೇಜಿಗೆ ರವಾನೆ ಮಾಡಲಾಗಿದೆ.

ಪೊಲೀಸ್ ತನಿಖೆಯಿಂದ ತಿಳಿದಂತೆ, ಸ್ಪಾ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮತ್ತು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಪ್ರೀತಿಸುತ್ತಿದ್ದರು. ಇಬ್ಬರೂ ವಿವಾಹಿತರಾಗಿದ್ದು, ತಮ್ಮ ಕುಟುಂಬಗಳು ಪ್ರೀತಿಗೆ ಒಪ್ಪಿಕೊಳ್ಳದ ಕಾರಣ ಹತಾಶರಾಗಿದ್ದರು ಎಂದು ತಿಳಿದುಬಂದಿದೆ. ಈ ಹತಾಶೆಯಿಂದಾಗಿಯೇ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಈ ಸಂಬಂಧ ಯಲಹಂಕ ನ್ಯೂ ಟೌನ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Exit mobile version