ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ತಿಂಗಳ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್ ವಿರಾಮದ ನಂತರ ಭಾನುವಾರ ಪುನರಾರಂಭಗೊಂಡಿದೆ. ಈ ಬಾರಿಯ ಮನ್ ಕಿ ಬಾತ್ನಲ್ಲಿ ಬೆಂಗಳೂರಿನ ಕಬ್ಬನ್ ಪಾರ್ಕ್ನಲ್ಲಿ ವಾರಾಂತ್ಯದಲ್ಲಿ ನಡೆಯುತ್ತಿದ್ದ ಸಂಸ್ಕೃತ ಸಂವಾದ ಕಿಂ ಭೋ ಕಾರ್ಯಕ್ರಮದ ಕುರಿತು ಮೋದಿಯವರು ಶ್ಲಾಘಿಸಿದ್ದಾರೆ.

ಪುರಾತನ ಭಾಷೆಯಾದ ಸಂಸ್ಕೃತವನ್ನು ಯುವ ಪೀಳಿಗೆಗೆ ಪರಿಚಯಿಸುವ ಮತ್ತು ಪ್ರಸ್ತುತ ವಾಗುವಂತೆ ಮಾಡುವ ಉದ್ದೇಶದಿಂದ ಸುಮಷ್ಟಿ ಗುಬ್ಬಿ ಅವರು ಆರಂಭಿಸಿರುವ ಯೋಜನೆಯೇ ಕಬ್ಬನ್ ಪಾರ್ಕ್ನಲ್ಲಿ ವಾರಾಂತ್ಯದಲ್ಲಿ ಸಂಸ್ಕೃತದಲ್ಲಿ ಸಂವಾದ ನಡೆಸುವ ಈ ಕಿಂ ಭೋ.
ಸಂಸ್ಕೃತವನ್ನು ಆಧುನಿಕ ಜಗತ್ತಿನಲ್ಲಿ ಹೆಚ್ಚು ಪ್ರಚಾರ ಮಾಡುವ ಕುರಿತು ಮನ್ ಕಿ ಬಾತ್ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಆಕಾಶವಾಣಿಯ ಸಂಸ್ಕೃತ ಬುಲೆಟಿನ್ ಇಂದು ತನ್ನ ಪ್ರಸಾರದ 50 ವರ್ಷಗಳನ್ನು ಪೂರೈಸುತ್ತಿದೆ. 50 ವರ್ಷಗಳಿಂದ, ಈ ಬುಲೆಟಿನ್ ಅನೇಕ ಜನರ ಜೊತೆ ಸಂಸ್ಕೃತದ ಕೊಂಡಿಯನ್ನು ಬೆಸೆದಿದೆ ಎಂದಿದ್ದಾರೆ. ಮುಂದುವರೆದು, ಬೆಂಗಳೂರಿನ ಕಬ್ಬನ್ ಪಾರ್ಕ್ ಉದ್ಯಾನವನವಿದೆ . ಇಲ್ಲಿನ ಜನ ಈ ಪಾರ್ಕ್ನಲ್ಲಿ ಹೊಸ ಸಂಪ್ರದಾಯ ಆರಂಭಿಸಿದ್ದಾರೆ. ಇಲ್ಲಿ ವಾರದಲ್ಲಿ ಒಂದು ದಿನ, ಪ್ರತಿ ಭಾನುವಾರ ಮಕ್ಕಳು, ಯುವಕರು, ಹಿರಿಯರು ಪರಸ್ಪರ ಸಂಸ್ಕೃತದಲ್ಲಿ ಮಾತನಾಡುತ್ತಾರೆ. ಇಷ್ಟು ಮಾತ್ರವಲ್ಲದೆ ಇಲ್ಲಿ ಸಂಸ್ಕೃತದಲ್ಲಿ ಹಲವು ಚರ್ಚಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಉಪಕ್ರಮದ ಹೆಸರು – ಸಂಸ್ಕೃತ ವಾರಾಂತ್ಯ” ಎಂದು ಪ್ರಧಾನಿ ಮೋದಿ ಹೇಳಿದರು.