- ವೈವಾಹಿಕ ಜೀವನಕ್ಕೆ ಕಾಲಿಟ್ಟ ಕೆಕೆಆರ್ ಆಟಗಾರ ವೆಂಕಟೇಶ್ ಅಯ್ಯರ್
- ವೆಂಕಟೇಶ್ ಅಯ್ಯರ್ ಅಭಿಮಾನಿಗಳು ಫುಲ್ ಖುಷ್
ಐಪಿಎಲ್ ನ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಲ್ ರೌಂಡರ್ ಆಟಗಾರ ವೆಂಕಟೇಶ್ ಅಯ್ಯರ್ ಜೂನ್ 2 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು17 ನೇ ಆವೃತ್ತಿಯ ಐಪಿಎಲ್ನಲ್ಲಿ ವಿಜೇತರನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಟೀಂ ಇಂಡಿಯಾ ಆಟಗಾರ ವೆಂಕಟೇಶ್ ಅಯ್ಯರ್.

ವೆಂಕಟೇಶ್ ಅಯ್ಯರ್ ಐಪಿಎಲ್ ಗಾಗಿ ಅವರ ಮದುವೆಯನ್ನೇ ಮುಂದೂಡಿಸಿದ್ರು. ಈ ಸುದ್ದಿ ಸಖತ್ ವೈರಲ್ ಆಗಿತ್ತು. ತಮ್ಮ ಬಹುದಿನದ ಗೆಳತಿ ಶ್ರುತಿ ರಘುನಾಥನ್ ಅವರೊಂದಿಗೆ ಕಳೆದ ವರ್ಷ ನವೆಂಬರ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ವೆಂಕಟೇಶ್ ಅಯ್ಯರ್, ಐಪಿಎಲ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಗೆಲ್ಲಿಸಿದ ಬಳಿಕ ಮದುವೆಯಾಗಲು ನಿರ್ಧರಿಸಿದ್ರು.

ಐಪಿಎಲ್ ಟೂರ್ನಮೆಂಟ್ ಗೆದ್ದಿರುವ ಖುಷಿಯಲ್ಲಿ ಇದ್ದ ವೆಂಕಟೇಶ್ ಅಯ್ಯರ್ ಅಭಿಮಾನಿಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಮಾಹಿತಿಯನ್ನು ನೀಡಿದ್ದರು.