ಸಲಗ, ಭೀಮ ಚಿತ್ರದ ಮೂಲಕ ನಟನೆಯ ಜೊತೆಗೆ ನಿರ್ದೇಶಕನಾಗಿಯೂ ದುನಿಯಾ ವಿಜಯ್ ಸೈ ಎನಿಸಿಕೊಂಡಿದ್ದಾರೆ. ಇದೀಗ ವಿನಯ್ ರಾಜ್ಕುಮಾರ್ಗೆ ಆ್ಯಕ್ಷನ್ ಕಟ್ ಹೇಳೋಕೆ ವಿಜಯ್ ರೆಡಿಯಾಗಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ನಟ ಮಾಹಿತಿ ನೀಡಿದ್ದಾರೆ.

ವಿನಯ್ ರಾಜ್ಕುಮಾರ್ ಅವರು ವಿಜಯ್ ನಿರ್ದೇಶನದ ‘ಸಿಟಿ ಲೈಟ್ಸ್’ ಚಿತ್ರತಂಡಕ್ಕೆ ಸಾಥ್ ನೀಡಿರೋದಾಗಿ ತಿಳಿಸಿದ್ದಾರೆ. ವಿಜಯ್ ನಿರ್ದೇಶನದ 3ನೇ ಚಿತ್ರಕ್ಕೆ ಪುತ್ರಿ ಮೋನಿಷಾಗೆ ಡೈರೆಕ್ಟ್ ಮಾಡುತ್ತಿರೋದು ವಿಶೇಷವಾಗಿದೆ. ಈ ಚಿತ್ರದಲ್ಲಿ ವಿನಯ್ ರಾಜ್ಕುಮಾರ್ ಪಾತ್ರ ಹೇಗಿರಲಿದೆ ಎಂಬುದು ರಿವೀಲ್ ಆಗಿಲ್ಲ. ನಟ ತಂಡ ಸೇರಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ಮೋನಿಷಾ ನಟಿಸುತ್ತಿರುವ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿದ್ದರು. ಹಳ್ಳಿ ಹುಡುಗಿಯ ಮುಗ್ಧ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಮೋನಿಷಾ ನಟನೆಯ ಮೊದಲ ಸಿನಿಮಾಗೆ ‘ಸಿಟಿ ಲೈಟ್ಸ್’ ಎಂದು ಟೈಟಲ್ ಇಡಲಾಗಿದ್ದು, ‘ಜವಾಬ್ ದಾರಿ ದೀಪಗಳು’ ಅನ್ನೋ ಟ್ಯಾಗ್ ಲೈನ್ ಕೂಡ ಈ ಸಿನಿಮಾಕ್ಕಿದೆ.