ಬಹುನೀರಿಕ್ಷಿತ “ಕಲ್ಕಿ 2898 ಎಡಿ” ಸಿನಿಮಾ ರಿಲೀಸ್ಗೂ ಮೊದಲೇ ಗಮನ ಸೆಳೆದಿದೆ. ಪ್ರಭಾಸ್, ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ ನಟನೆಯ ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನೀರಿಕ್ಷೆ ಇದೆ. ಈ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಅವರ ಪಾತ್ರ ಹೇಗಿರಲಿದೆ ಎನ್ನುವುದನ್ನು ತಂಡ ರಿವೀಲ್ ಮಾಡಿದೆ. ಅಶ್ವತ್ಥಾಮನಾಗಿ ಅಮಿತಾಭ್ ಬಚ್ಚನ್ ಅವರು ಕಾಣಿಸಿಕೊಳ್ಳಲಿದ್ದು, ಈ ಸಿನಿಮಾ ಸೂಪರ್ ಹಿಟ್ ಆಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.

ಈ ಮೊದಲು ರಿಲೀಸ್ ಆದ ಕಲ್ಕಿ 2898 ಎಡಿ ಸಿನಿಮಾದ ಟೀಸರ್ನಲ್ಲಿ ಪ್ರಭಾಸ್ ಅವರನ್ನು ಹೈಲೈಟ್ ಮಾಡಿದ್ದು, ಅಮಿತಾಭ್ ಬಚ್ಚನ್ ಅವರನ್ನು ಕೆಲ ಸೀನ್ಗಳು ಮಾತ್ರ ಈ ಟೀಸರ್ನಲ್ಲಿ ಕಾಣಬಹುದಾಗಿದೆ. ಆದರೆ ಈಗ ಅವರ ಸಂಪೂರ್ಣ ಪಾತ್ರ ಪರಿಚಯ ಮಾಡಲಾಗಿದೆ. ಮಹಾಭಾರತದ ಅಶ್ವಾತ್ಥಾಮನಾಗಿ ಅವರು ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಕಥೆ ಮಹಾಭಾರತದಿಂದ ಆರಂಭ ಆಗಲಿದೆ ಎಂದು ನಿರ್ದೇಶಕ ನಾಗ್ ಅಶ್ವಿನ್ ಅವರು ಹೇಳಿದ್ದಾರೆ.
ಕಲ್ಕಿ ಸಿನಿಮಾದಲ್ಲಿ ಪ್ರಭಾಸ್ ಜೊತೆ ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಸೇರಿದ ಅನೇಕರು ನಟಿಸುತ್ತಿದ್ದಾರೆ. ಈ ಚಿತ್ರದ ಬಜೆಟ್ ತುಂಬಾನೇ ದೊಡ್ಡದಾಗಿದೆ. ಸಿನಿಮಾ ದೊಡ್ಡ ಯಶಸ್ಸು ಕಂಡರೆ ನಿರ್ಮಾಪಕರು ಗೆಲುವು ಕಾಣಲಿದ್ದಾರೆ. ಸದ್ಯ ಅಮಿತಾಭ್ ಬಚ್ಚನ್ ಅವರನ್ನ ಪರಿಚಯಿಸಿದ ಟೀಸರ್ ನೋಡಿದವರಿಗೆ ಮತ್ತೊಂದು ಕುತೂಹಲ ಮೂಡಿದೆ.