- ದಕ್ಷಿಣ ಆಫ್ರಿಕಾದ ವಿರುದ್ಧ ಶತಕ ಸಿಡಿಸಿದ ಸ್ಮೃತಿ ಮಂಧನಾ
- ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯ
ದಕ್ಷಿಣ ಆಫ್ರಿಕಾದ ಮಹಿಳಾ ತಂಡದ ವಿರುದ್ಧ ನಡೆಯುತ್ತಿರುವ ಐಸಿಸಿ ಚಾಂಪಿಯನ್ಶಿಪ್ ಪಂದ್ಯದಲ್ಲಿ ಭಾರತದ ಮಹಿಳಾ ತಂಡದ ಓಪನರ್ ಸ್ಮೃತಿ ಮಂಧನಾ ಮತ್ತೆ ಸಿಡಿಲಬ್ಬರದ ಶತಕ ಸಿಡಿಸಿದ್ದಾರೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತದ ವಿರುದ್ಧ ಆಫ್ರಿಕಾದ ನಾಯಕಿ ಲಾರಾ ವೊಲ್ವಾರ್ಡ್ಟ್ ಟಾಸ್ ಗೆದ್ದು ಭಾರತವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು.

ಓಪನರ್ ಆಗಮಿಸಿದ ಸ್ಮೃತಿ ಮಂಧನಾ ಹಾಗೂ ಶಫಾಲಿ ವರ್ಮಾ ಉತ್ತಮ ಆರಂಭವೇನು ಪಡೆಯಲಿಲ್ಲ. ಇದು ತಂಡಕ್ಕೆ ಹಿನ್ನಡೆಯಾದಂತೆ ಅಯಿತು. ಹಾಗೇ ಕ್ರೀಸ್ ಕಚ್ಚಿ ನಿಂತಿದ್ದ ಸ್ಮೃತಿ ಮಂಧನಾ ಬ್ಯಾಟಿಂಗ್ ಮುಂದುವರೆಸಿದ್ದರು.

ಹೆಮಲತಾ 24 ರನ್ ಗಳಿಸಿ ಔಟ್ ಆದರೂ ಇತ್ತ ಕಡೆ ಸ್ಮೃತಿ ಮಂದನಾ ಅಬ್ಬರದ ಬ್ಯಾಟಿಂಗ್ ಮುಂದುವರೆಸಿದ್ದರು. ಕೇವಲ 103 ಎಸೆತಗಳನ್ನ ಎದುರಿಸಿದ ಮಂಧನಾ ಹಂಡ್ರೆಡ್ ಬಾರಿಸಿ ದಾಖಲೆ ಬರೆದದ್ದಾರೆ.

ಸದ್ಯ 18 ಫೋರ್, 2 ಅಮೋಘವಾದ ಸಿಕ್ಸರ್ ಸಮೇತ 136 ರನ್ ಗಳಿಸಿ ಸ್ಮೃತಿ ಮಂಧನಾ ಅಬ್ಬರದ ಬ್ಯಾಟಿಂಗ್ ಮಾಡಿದ್ದಾರೆ. ಇದು ಅವರ ಸತತ 2ನೇ ಶತಕವಾಗಿದೆ. ಇನ್ನು ಇನ್ನೊಂದು ಕಡೆ ನಾಯಕಿ ಆಟ ಆಡಿ ಹರ್ಮನ್ಪ್ರೀತ್ ಕೌರ್ ಅವರು 103 ರನ್ಗಳಿಂದ ಉತ್ತಮ ಬ್ಯಾಟಿಂಗ್ ಮಾಡಿದ್ದಾರೆ. ಸದ್ಯ ಭಾರತ 50 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 325 ರನ್ಗಳನ್ನು ಗಳಿಸಿ. ಸೌಥ್ ಆಪ್ರಿಕಾ ತಂಡಕ್ಕೆ 325 ರನ್ಗಳ ಗುರಿ ನೀಡಿದೆ.