ಬೆಂಗಳೂರು ನಗರದಲ್ಲಿ ಆಟೋ ಚಾಲಕರಿಂದ ನಿಯಮ ಉಲ್ಲಂಘನೆಗಳು ಹೆಚ್ಚಾಗುತ್ತಿರುವ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ಸ್ಪೆಷಲ್ ಡ್ರೈವ್ ನಡೆಸಿ ಒಂದೇ ದಿನದಲ್ಲಿ ಆಟೋ ಚಾಲಕರ ವಿರುದ್ಧ 160 ಕೇಸ್ ದಾಖಲಿಸಿದ್ದಾರೆ. ದಕ್ಷಿಣ ವಿಭಾಗದ ಸಂಚಾರಿ ಪೊಲೀಸರಿಂದ ಕಾರ್ಯಾಚರಣೆ ನಡೆದಿದ್ದು, ನಿಯಮ ಉಲ್ಲಂಘನೆ ಮಾಡಿರೋ ಆಟೋ ಚಾಲಕರ ವಿರುದ್ಧ ಕೇಸ್ ದಾಖಲು ಮಾಡಲಾಗುತ್ತಿದೆ.
ನಿಗದಿತ ದರಕ್ಕಿಂತ ಹೆಚ್ಚಿನ ಬಾಡಿಗೆ ದರ ಮತ್ತು ಕರೆದ ಕಡೆ ಆಟೋ ಚಾಲಕರು ಬಾಡಿಗೆ ಬರಲು ನಿರಾಕರಣೆ, ಸಂಚಾರ ನಿಯಮ ಉಲ್ಲಂಘನೆ ಮಾಡ್ತಿದ್ದವರ ವಿರುದ್ದ ಪ್ರಕರಣ ದಾಖಲಾಗಿವೆ. ಪ್ರಯಾಣಿಕರು ಕರೆದ ಕಡೆ ಹೋಗಲು ನಿರಾಕರಿಸುತ್ತಿದ್ದವರ ವಿರುದ್ದ 19 ಪ್ರಕರಣಗಳು, ಹೆಚ್ಚಿನ ಬಾಡಿಗೆ ದರ ಪಡೆಯುತ್ತಿದ್ದರ ವಿರುದ್ದ 18 ಪ್ರಕರಣಗಳು, ಯೂನಿಫಾರ್ಮ್ ಧರಿಸದೆ ಚಾಲನೆ ಮಾಡುತ್ತಿದ್ದವರ ವಿರುದ್ದ 81 ಪ್ರಕರಣಗಳು, ನೋ ಪಾರ್ಕಿಂಗ್ ನಲ್ಲಿ ಆಟೋ ನಿಲ್ಲಿಸಿದ್ದವರ ವಿರುದ್ದ 19 ಪ್ರಕರಣಗಳು, ಇತರೆ ಸಂಚಾರ ನಿಯಮ ಉಲ್ಲಂಘನೆ ಹಿನ್ನಲೆ 29 ಪ್ರಕರಣಗಳು ಸೇರಿದಂತೆ ಒಟ್ಟು 160 ಪ್ರಕರಣಗಳು ಆಟೋ ಚಾಲಕರ ವಿರುದ್ದ ದಾಖಲಾಗಿವೆ.