ತಾನು ಪ್ರೀತಿಸಿದ ವ್ಯಕ್ತಿಯ ಜೊತೆ ತನ್ನಿಷ್ಟದಂತೆ ಮದುವೆಯಾಗಿದ್ದಕ್ಕೆ ಕೋಪಿಸಿಕೊಂಡ ಕುಟುಂಬಸ್ಥರು 24 ವರ್ಷದ ಮನೆ ಮಗಳನ್ನೇ ಬರ್ಬರವಾಗಿ ಕೊಲೆಗೈದ ಘಟನೆ ರಾಜಸ್ಥಾನದ ಝಲವರ್ನಲ್ಲಿ ನಡೆದಿದೆ.
ಮಾಹಿತಿಗಳ ಪ್ರಕಾರ ಮಹಿಳೆಯನ್ನು ಆಕೆ ಪತಿಯ ಎದುರಲ್ಲೇ ಕುಟುಂಬಸ್ಥರು ಕಿಡ್ನ್ಯಾಪ್ ಮಾಡಿದ್ದಾರೆ. ಬಳಿಕ ಆಕೆಯನ್ನು ಕೊಲೆ ಮಾಡಿದ್ದಾರೆ. ಸಾಯಿಸಿದ ಪಾಪಿಗಳು ಪ್ರಕರಣವನ್ನು ಮುಚ್ಚಿ ಹಾಕಲು ಮೃತದೇಹವನ್ನು ಸುಟ್ಟುಹಾಕಿದ್ದಾರೆ ಎನ್ನಲಾಗಿದೆ. ಹತ್ಯೆಯಾದ ಮಹಿಳೆ ರವಿ ಭೀಲ್ ಎಂಬುವನನ್ನು ಪ್ರೀತಿಸಿ ಕುಟುಂಬಸ್ಥರ ವಿರೋಧದ ನುಡುವೆಯೂ ಮದುವೆ ಆಗಿದ್ದಳು. ಮದುವೆಯಾದ ಬಳಿಕ ಹೆತ್ತವರಿಂದ ದೂರ ಆಗಿ, ಬೇರೆ ಕಡೆ ವಾಸ ಮಾಡುತ್ತಿದ್ದಳು. ಮಧ್ಯಪ್ರದೇಶದ ಗ್ರಾಮ ಒಂದರಲ್ಲಿ ವಾಸ ಮಾಡ್ತಿದ್ದಾರೆ ಅನ್ನೊದನ್ನು ತಿಳಿದುಕೊಂಡ ಕುಟುಂಬಸ್ಥರು, ಆಕೆಯನ್ನು ಅಪಹರಿಸಿ ಕೃತ್ಯ ನಡೆಸಿದ್ದಾರೆ. ಮಹಿಳೆಯ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.