ಸಖತ್ ಆಗಿರೋ ಹುಡುಗಿ, ಆದರೆ ಮದುವೆ ಆದದ್ದು ಎವರೇಜ್ ಹುಡುಗನ ಜೊತೆ. ಇಂತಹದ್ದನ್ನು ನೋಡಿದಾಗ, ‘ಅವಳಿಗೆ ಇವನಲ್ಲದೆ ಬೇರೆ ಯಾರೂ ಸಿಗ್ಲಿಲ್ಲವೇ?’ ಎಂದು ಅನೇಕರಿಗೆ ತಕ್ಷಣವೇ ತಲೆಕೆಡಿಸಬಹುದು. ಆದರೆ ಇದಕ್ಕೊಂದು ವೈಜ್ಞಾನಿಕ ಕಾರಣವೂ ಇದೆ ಎಂದು Getsetfly SCIENCE ಯೂಟ್ಯೂಬ್ ಚಾನೆಲ್‌ನ ಗೌರವ್ ಠಾಕೂರ್ ಹೇಳಿದ್ದಾರೆ.
ಹುಡುಗಿಯ ಮನಸ್ಸು ಅರ್ಥ ಮಾಡಿಕೊಳ್ಳುವುದು ಕಷ್ಟವೆ?
ಹುಡುಗಿಯರ ಮನಸ್ಸು ತುಂಬಾ ಸಂಕೀರ್ಣ ಎಂದು ಹಲವರು ಹೇಳುತ್ತಾರೆ. ಆದರೆ ಗೌರವ್ ಅವರು ಹೇಳುವಂತೆ, ಹುಡುಗಿಯರು ಆಕರ್ಷಕ ಹುಡುಗನನ್ನು ಮಾತ್ರ ನೋಡಿಕೊಂಡು ಇರುವುದಿಲ್ಲ. ಅವರಿಗೆ ಭದ್ರತೆ, ಭರವಸೆ, ಮತ್ತು ವ್ಯಕ್ತಿತ್ವ ಪ್ರಮುಖವಾಗಿದೆ. ‘ಅವನು ನನ್ನನ್ನು ಹೇಗೆ ಟ್ರೀಟ್ ಮಾಡುತ್ತಾನೆ?’ ಎಂಬ ಪ್ರಶ್ನೆ ಅವರನ್ನು ಹೆಚ್ಚು ಕಾಡುತ್ತದೆ. ಅವರ ಆರ್ಥಿಕ ಭದ್ರತೆ, ಭವಿಷ್ಯದ ಭದ್ರತೆ, ಹಾಗೂ ಪ್ರೀತಿ ಇವೆಲ್ಲವೂ ಮುಖ್ಯವಾಗುತ್ತವೆ.
ಹುಡುಗರ ಮತ್ತು ಹುಡುಗಿಯರ ಆಕರ್ಷಣೆ ವ್ಯತ್ಯಾಸವೇನು?
ಹುಡುಗನಿಗೆ ಲೈಂಗಿಕ ಆಕರ್ಷಣೆ ಬೆಳೆಸಿಕೊಳ್ಳಲು 150 ಸೆಕೆಂಡುಗಳಷ್ಟೇ ಬೇಕು. ಆದರೆ ಹುಡುಗಿಗೆ ಇದು ಬೇಗನೆ ಬೆಳೆಯುವುದಿಲ್ಲ. ಒಂದು ಕೆಫೆಯಲ್ಲಿ ಹುಡುಗ ಮತ್ತು ಹುಡುಗಿ ಭೇಟಿಯಾದರೆ, ಹುಡುಗನೆಲ್ಲಾ ಮೊದಲು ಅವಳ ಹೊರಗಿನ ಅಂದ ಚೆಂದದ ಬಗ್ಗೆ ನೋಡುತ್ತಾನೆ. ಆದರೆ ಹುಡುಗಿ, ಅವನ ವ್ಯಕ್ತಿತ್ವ, ಸಮಾಜದಲ್ಲಿ ಅವನ ಸ್ಥಾನ, ಭವಿಷ್ಯದ ಭದ್ರತೆ ಇತ್ಯಾದಿಗಳನ್ನು ಆಲೋಚಿಸುತ್ತಾಳೆ. ಈ ವ್ಯತ್ಯಾಸವೇ ಇವರಿಬ್ಬರ ನಡುವಿನ ಆಕರ್ಷಣೆಯನ್ನು ನಿರ್ಧರಿಸುತ್ತದೆ.
ಬೇಗ ಬಯಕೆ ಹುಟ್ಟೋದಿಲ್ಲ!
ಹುಡುಗರು ಪಿಜ್ಜಾ ನೋಡಿ ತಕ್ಷಣ ತಿನ್ನಬೇಕೆನ್ನಿಸುತ್ತಾರೆ. ಆದರೆ ಹುಡುಗಿಯರಿಗೆ ಅದು ಇಷ್ಟವಿಲ್ಲದಿದ್ದರೂ, ಅವಳು ಮೊದಲು ಅದರ ಗುಣಮಟ್ಟ, ಆರೋಗ್ಯದ ಬಗ್ಗೆ ಯೋಚಿಸುತ್ತಾಳೆ. ಇದೇ ರೀತಿ ಹುಡುಗರನ್ನು ನೋಡಿದಾಗ ಕೂಡ, ಅವಳು ಆಕರ್ಷಣೆಗೆ ಒಳಗಾಗುವುದಕ್ಕಿಂತ ಮೊದಲು, ಭದ್ರತೆ ಮತ್ತು ಭರವಸೆಯ ಮೇಲೆ ಆಲೋಚಿಸುತ್ತಾಳೆ.
ಹುಡುಗರ ಮತ್ತು ಹುಡುಗಿಯರ ಲೆಕ್ಕಾಚಾರ!
ಒಂದು ಕಾರು ಜೊತೆ ಸಖತ್ ಆಗಿರೋ ಹುಡುಗಿ ನಿಂತಿದ್ದಾಳೆ ಎಂದರೆ ಹುಡುಗನಿಗೆ ‘ಅವಳು ಚೆನ್ನಾಗಿದೆ’ ಎಂದು ತಕ್ಷಣ ಅನಿಸುತ್ತದೆ. ಆದರೆ ಹುಡುಗಿ ಅದೇ ಕಾರು ಜೊತೆ ನಿಂತಿರುವ ಹುಡುಗನನ್ನು ನೋಡಿ, ಅವನ ಆರ್ಥಿಕ ಸ್ಥಿತಿ, ಯಶಸ್ಸು ಇತ್ಯಾದಿಗಳನ್ನು ಲೆಕ್ಕ ಹಾಕುತ್ತಾಳೆ. ಆಕೆಗೆ ಮುಜುಗರವೇನಿಲ್ಲ; ಇದು ಅವಳ ಸ್ವಭಾವ.
ಬ್ರೇಕಪ್ ಮತ್ತು ಡಿಪ್ರೆಶನ್
ಹುಡುಗಿ ಬ್ರೇಕಪ್ ಆದ್ಮೇಲೆ ಡಿಪ್ರೆಶನ್‌ಗೆ ಹೋಗೋದು ಸಾಮಾನ್ಯ. ಶುರುವಿನಲ್ಲಿ ಲೆಕ್ಕಾಚಾರ ಮಾಡಿದರೂ, ಹುಡುಗಿ ಬೆಸ್ಟ್ ಎಮೋಷನಲ್ ಕನೆಕ್ಷನ್ ನಿರ್ಮಿಸುತ್ತಾಳೆ. ಹುಡುಗ ಮೋಸ ಮಾಡಿದಾಗ ಅವಳು ತೀವ್ರವಾಗಿ ತತ್ತರಿಸುತ್ತಾಳೆ.
ಹುಡುಗಿಯರು ತಮ್ಮ ಭವಿಷ್ಯವನ್ನು ಅರ್ಥಮಾಡಿಕೊಳ್ಳುವುದಕ್ಕೆ, ಜೀವನವನ್ನು ಕಟ್ಟಿಕೊಳ್ಳುವುದಕ್ಕೆ, ಮತ್ತು ಭದ್ರತೆಗಾಗಿ ಹೆಚ್ಚು ಯೋಚಿಸುತ್ತಾರೆ. ಅವರ ಆಯ್ಕೆಗಳಿಗೆ ಬೇರೆಬೇರೆ ಕಾರಣಗಳಿರಬಹುದು. ಅವರು ನಡೆಸುವ ಲೆಕ್ಕಾಚಾರಗಳು ಸಮಾಜದ ಅಭಿಪ್ರಾಯಗಳಿಗೂ ಸಂಬಂಧಿಸಿರುತ್ತವೆ.





